ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಕ್ರಾಸ್ ಬಳಿ ಹಿಂದೂ ಯುವಕರ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ಗೆ ಊರಲ್ಲಿ ಮಿತಿ ಮೀರಿದ ಮುಸ್ಲಿಮರ ಗೂಂಡಾಗಿರಿ ಬಾಂಗ್ಲಾದೇಶದ ಮಾದರಿಯಲ್ಲಿ ಕಲಬುರಗಿಯಲ್ಲಿ ಹಿಂದೂಗಳ ಮೇಲೆ ಮಾರಣಾಂತಿಕ *ಹ …ಲ್ಲೆ*@BJP4India @CTRavi_BJP @mepratap @BYVijayendra pic.twitter.com/e7cLWdR6Gy
— Puneeth Kerehalli (@Puneeth74353549) August 10, 2024
ಖರ್ಗೆ ತವರು ಜಿಲ್ಲೆಯಲ್ಲಿ ಬಾಂಗ್ಲಾದೇಶದ ಮಾದರಿಯಲ್ಲಿಯೇ ಹಿಂದೂಗಳ ಮೇಲೆ ಮುಸ್ಲಿಮರ ಗೂಂಡಾಗಿರಿ ಮಿತಿ ಮೀರಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಲಬುರಗಿಯಲ್ಲಿ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಡು ರಸ್ತೆಯಲ್ಲಿ ಹಿಂದೂಗಳ ಮೇಲೆ ಮುಸ್ಲಿಂ ಪುಂಡರು ಹಲ್ಲೆ ನಡೆಸಿದ್ದಾರೆಂದು ಪುನೀತ್ ಬರೆದುಕೊಂಡಿದ್ದು, ಘಟನೆಯ ವಿಡಿಯೋವೊಂದನ್ನು ‘X’ ಶೇರ್ ಮಾಡಿದ್ದಾರೆ.ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದನ್ನು ಪ್ರಶ್ನಿಸಿದಕ್ಕೆ ಯುವಕರ ಮೇಲೆ ಅನ್ಯಕೋಮಿನ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.