ದರ್ಶನ್ ಮತ್ತು ಗ್ಯಾಂಗ್ (Darshan & gang) ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case), ಬಹುತೇಕ ಸೋಮವಾರ ಎಲ್ಲಾ ವರದಿಗಳು ತನಿಖಾಧಿಕಾರಿಗಳ ಕೈ ಸೇರಲಿದೆ. ಪ್ರಕರಣದಲ್ಲಿ ಬಾಕಿ ಉಳಿದಿರುವ ವರದಿಗಾಗಿ ಸದ್ಯ ಪೊಲೀಸ್ ಅಧಿಕಾರಿಗಳು ಕಾಯುತಿದ್ದು, ಇನ್ನು ಕೆಲವು ವರದಿಗಳು ಈಗಾಗಲೇ ಪೊಲೀಸರ ಕೈ ಸೇರಿದೆ. ಹೀಗಾಗಿ ಚಾರ್ಜ್ ಶೀಟ್ (Charge sheet)ಸಲ್ಲಿಕೆಗೆ ಮಿಕ್ಕ ವರದಿಗಳಿಗಾಗಿ ಸದ್ಯ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ.

ಎಫ್ ಎಸ್ ಎಲ್ ವರದಿ (FSL), ಮೊಬೈಲ್ ರಿಟ್ರೀವ್ (Mobile retrieve)ಮಾಡಿರುವ ವರದಿ,ಡಿ ಎನ್ ಎ ರಿಪೋರ್ಟ್ ಗಾಗಿ (DNA report) ತನಿಖಾಧಿಕಾರಿಗಳು ಕಾಯುತ್ತಿದ್ದಾರೆ. ಜೊತೆಗೆ ಸಿಸಿಟಿವಿ ರಿಟ್ರೀವ್ (cctv) ಮಾಡಿರುವ ವರದಿಗಳು ಪೊಲೀಸರ ಕೈ ಸೇರಬೇಕಿದೆ. ಹೀಗಾಗಿ ಈ ಎಲ್ಲಾ ವರದಿಗಳನ್ನು ಒಟ್ಟಿಗೆ ನೀಡುವಂತೆ ಲ್ಯಾಬ್ ಗೆ ತನಿಖಾ ತಂಡ ಮನವಿ ಮಾಡಿದೆ. ಎಲ್ಲಾ ವರದಿ ಒಟ್ಟಿಗೆ ಬಂದರೆ ಅದನ್ನು ಹೋಲಿಕೆ ಮಾಡಿ ವಿಶ್ಲೇಷಣೆಗೆ ಒಳಪಡಿಸಲು ಸಹಕಾರಿಯಾಗಲಿದೆ.
ಈ ಹಿನ್ನಲೆ ಬಹುತೇಕ ಸೋಮವಾರ ವರದಿಗಳು ಅಧಿಕಾರಿಗಳ ಕೈ ಸೇರಲಿದೆ. ರಿಪೋರ್ಟ್ ಬಂದ ಕೂಡಲೇ ಚಾರ್ಜ್ ಶೀಟ್ ಸಲ್ಲಿಕೆಗೆ ಅಂತಿಮ ತಯಾರಿ ನಡೆಸಲಾಗಿದ್ದು, ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗೋ ಸಾಧ್ಯತೆಯಿದೆ.