ಇಸ್ರೋ (ISRO) ಮುಂಭಾಗ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಭಂದಪಟ್ಟಂತೆ, ಗಣೇಶ ಬಿಡುವಾಗ ಡ್ಯಾನ್ಸ್ ಮಾಡುವ ವಿಚಾರಕ್ಕೆ ಹೊಡೆದಾಟ ನಡೆದಿದ್ದು, ಒಟ್ಟು ನಾಲ್ವರನ್ನ ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ.
ಆ ದಿನ ಮೆರವಣಿಗೆಯಲ್ಲಿ ಮುರುಗೇಶ್ ಪಾಳ್ಯದ (Murugesh palya) ಯುವಕರು ಗಣೇಶ ಬಿಡ್ತಿದ್ರೂ,ಗಣೆಶ ಬಿಡುವಾಗ ಯುವಕರು ಡ್ಯಾನ್ಸ್ ಮಾಡುತ್ತಿದ್ದರು,ಈ ಮಧ್ಯೆ ಬಂದು ಡ್ಯಾನ್ಸ್ ಮಾಡಿ ನಿತಿನ್ (Nithin) ಬೈಕ್ ನಲ್ಲಿ ಬೇಕಂತಲೇ ಓಡಾಡ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಸಾಕಷ್ಟು ಬಾರಿ ಮುರುಗೇಶ್ ಪಾಳ್ಯ ಯುವಕರು ವಾರ್ನ್ ಕೂಡ ಮಾಡಿದ್ದರು. ಆದ್ರೂ ಆತ ಹೀಗೆ ಮಾಡುವುದನ್ನು ನಿಲ್ಲಿಸಿರಲಿಲ್ಲ. ಹೀಗಾಗಿ ಗಣೇಶ ಬಿಟ್ಟ ನಂತರ ಮುರುಗೇಶ್ ಪಾಳ್ಯ ಯುವಕರು ನಿತಿನ್ ಗೆ ಹಲ್ಲೆ ಮಾಡಿದ್ದರು. ಈ ಘಟನೆ ಬಗ್ಗೆ ವಿಡಿಯೋ ಮಾಡಿ ಟ್ವೀಟ್ (Tweet) ಮಾಡಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.