ಗುತ್ತಿಗೆದಾರನಿಗೆ ಶಾಸಕ ಮುನಿರತ್ನ (Muniratna) ಜೀವಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಮುನಿರತ್ನ ವಿರುದ್ದ ಎಫ್ ಐ ಆರ್ (FIR) ದಾಖಲಾಗಿದೆ.ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಎರಡು ಎಫ್ ಐ ಆರ್ ದಾಖಲಾಗಿದೆ.
ಈ ಪೈಕಿ ಜೀವ ಬೆದರಿಕೆ ಹಾಕಿದ್ದ ಒಂದು ಪ್ರಕರಣ ದಾಖಲಾಗಿದ್ದು,ಜಾತಿ ನಿಂದನೆ ಮಾಡಿದ ಆರೋಪದಡಿಯಲ್ಲಿ ಮತ್ತೋಂದು ಕೇಸ್ ದಾಖಲಾಗಿದೆ.ಈ ಮೊದಲ ಜೀವ ಬೆದರಿಕೆ ಪ್ರಕರಣದಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ. ಇದರಲ್ಲಿ A-1 ಮುನಿರತ್ನ ,ಮಾಜಿ ಸಚಿವ A-2- ವಿ ಜಿ ಕುಮರ್, ಆಪ್ತ ಸಹಾಯಕ, A-3 ಅಭಿಷೇಕ್ ,ಸೆಕ್ಯೂರಿಟಿ,A-4 ವಸಂತ್ ಕುಮಾರ್ ಆಗಿದ್ದಾರೆ.
ಇನ್ನು ಮತ್ತೋಂದು ಪ್ರಕರಣದಲ್ಲಿ ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ವಿರುದ್ದ ಪ್ರಕರಣ ದಾಖಲಾಗಿದ್ದು,ಗುತ್ತಿಗೆದಾರನ ಬಳಿ ಲಂಚಕ್ಕೆ ಕಿರುಕುಳ ನೀಡಿದ ಆರೋಪದ ಹಿನ್ನಲೆ, ನಿನ್ನೆ ಸುದ್ದಿಗೋಷ್ಟಿ ನಡೆಸಿ ಚೆಲುವರಾಜು ಆಡಿಯೋ ಬಿಡುಗಡೆ ಮಾಡಿದ್ದರು.