ರಾಯಚೂರು: ಮೊಹರಮ್ ಆಚರಣೆ ವೇಳೆ ಕೆಂಡ ಹಾಯುವಾಗ ಆಯತಪ್ಪಿ ಹೊಂಡಕ್ಕೆ ಬಿದ್ದ ವ್ಯಕ್ತಿ ಮೃತಪಟ್ಟ ಘಟನೆ ರಾಯಚೂರು (Raichur) ಜಿಲ್ಲೆಯ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.ಯಮನಪ್ಪ ನಾಯಕ್ (45) ಮೃತ ವ್ಯಕ್ತಿ. (Maski)ಮೊಹರಮ್ ಆಚರಣೆ ವೇಳೆ ದೇವರು ಹೊತ್ತವರು ಅಗ್ನಿ ಹಾಯೋದು ಸಂಪ್ರದಾಯವಿದೆ.ಜೊತೆಗೆ ದೇವರಲ್ಲಿ ಬೇಡಿಕೆ ಈಡೇರಿದಾಗಲೂ ಕೆಲವರು ಬೆಂಕಿ ಹಾಯುತ್ತಾರೆ.ಬೆಂಕಿ ಹಾಯುವಾಗ ಯಮನಪ್ಪ ನಾಯಕ್ ಹೊಂಡಕ್ಕೆ ಆಯ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಗ್ರಾಮಸ್ಥರು ಯಮನಪ್ಪನ ರಕ್ಷಣೆಗೆ ಬೆಂಕಿ ಆರಿಸಲು ನೀರು ಹಾಕಿದ್ದಾರೆ, ಆದರೆ ಯಮನಪ್ಪ ದೇಹ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಮೃತಪಟ್ಟಿದ್ದಾರೆ.ಯಮನಪ್ಪ ಕೊಂಡಕ್ಕೆ ಬಿದ್ದು ಬೆಂಕಿಯಲ್ಲಿ ಬೇಯುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಹಣಕಾಸು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರೆ ಹೇಗೆ? ಸಿಎಂ ಪ್ರಶ್ನೆ
ರಾಜ್ಯಕ್ಕೆ ನಬಾರ್ಡ್ ನೀಡುವ ಸಾಲದಲ್ಲಿ ಇಳಿಕೆ: ರಾಜ್ಯದ ರೈತರಿಗೆ ಮಾಡುತ್ತಿರುವ ಅನ್ಯಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ, ನವೆಂಬರ್ 21: ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ...
Read moreDetails