ರಾಯಚೂರು: ಮೊಹರಮ್ ಆಚರಣೆ ವೇಳೆ ಕೆಂಡ ಹಾಯುವಾಗ ಆಯತಪ್ಪಿ ಹೊಂಡಕ್ಕೆ ಬಿದ್ದ ವ್ಯಕ್ತಿ ಮೃತಪಟ್ಟ ಘಟನೆ ರಾಯಚೂರು (Raichur) ಜಿಲ್ಲೆಯ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.ಯಮನಪ್ಪ ನಾಯಕ್ (45) ಮೃತ ವ್ಯಕ್ತಿ. (Maski)ಮೊಹರಮ್ ಆಚರಣೆ ವೇಳೆ ದೇವರು ಹೊತ್ತವರು ಅಗ್ನಿ ಹಾಯೋದು ಸಂಪ್ರದಾಯವಿದೆ.ಜೊತೆಗೆ ದೇವರಲ್ಲಿ ಬೇಡಿಕೆ ಈಡೇರಿದಾಗಲೂ ಕೆಲವರು ಬೆಂಕಿ ಹಾಯುತ್ತಾರೆ.ಬೆಂಕಿ ಹಾಯುವಾಗ ಯಮನಪ್ಪ ನಾಯಕ್ ಹೊಂಡಕ್ಕೆ ಆಯ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಗ್ರಾಮಸ್ಥರು ಯಮನಪ್ಪನ ರಕ್ಷಣೆಗೆ ಬೆಂಕಿ ಆರಿಸಲು ನೀರು ಹಾಕಿದ್ದಾರೆ, ಆದರೆ ಯಮನಪ್ಪ ದೇಹ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಮೃತಪಟ್ಟಿದ್ದಾರೆ.ಯಮನಪ್ಪ ಕೊಂಡಕ್ಕೆ ಬಿದ್ದು ಬೆಂಕಿಯಲ್ಲಿ ಬೇಯುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
70% ಮತ್ತು ಅದಕ್ಕಿಂತ ಹೆಚ್ಚಿನ ಕೋಕೋ ಹೊಂದಿರುವ ಡಾರ್ಕ್ ಚಾಕೋಲೇಟ್: ಆರೋಗ್ಯಕ್ಕೆ ಶ್ರೇಷ್ಠ ಆಹಾರ!
ಡಾರ್ಕ್ ಚಾಕೋಲೇಟ್ ಅನ್ನು ಅದರ ಅನೇಕ ಆರೋಗ್ಯ ಲಾಭಗಳಿಗಾಗಿ ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಎಂಟಿಆಕ್ಸಿಡೆಂಟ್ಸ್ ಹೆಚ್ಚು ಇದ್ದು, ದೇಹವನ್ನು ಫ್ರೀ ರಾಡಿಕಲ್ಸ್ ಮತ್ತು ಆಕ್ಸಿಡೇಟಿವ್...
Read moreDetails