
ಮುಡಾ ಕೇಸ್‌ನಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ್ ಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಇದು ನಿರೀಕ್ಷಿತ ವರದಿ. ನಾವು ಲೋಕಾಯುಕ್ತ ಎಫ್ಐಆರ್ ಸಿಬಿಐ ವರ್ಗಾಯಿಸಬೇಕೆಂದು ಹೈಕೋರ್ಟ್‌ಗೆ ಹೋಗಿದ್ದೇವು. ಇದು ಪೂರ್ವ ನಿಯೋಜಿತ ಉದ್ದೇಶದಿಂದ ವರದಿ ಸಲ್ಲಿಕೆ ಮಾಡಿದ್ದಾರೆ. ಮುಂದಿನ ವಿಚಾರಣೆಯಲ್ಲಿ ನಾವು ಬಿ. ರಿಪೋರ್ಟ್ ಕೇಳ್ತೀವಿ. ಫೆಬ್ರವರಿ 24 ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಯಾವ ದಾಖಲಾತಿ ಮೇಲೆ ತನಿಖಾಧಿಕಾರಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ ಅನ್ನೊದನ್ನ ನೋಡಿ ನಿರ್ಧಾರ ಮಾಡ್ತೀವಿ ಎಂದಿದ್ದಾರೆ.

ಲೋಕಾಯುಕ್ತರ ವರದಿಯ ಫ್ಯಾಕ್ಟ್ ನೋಡಿ ಕೋರ್ಟ್‌ನಲ್ಲಿ ಚಾಲೆಂಜ್ ಮಾಡ್ತೀವಿ ಎಂದಿರುವ ವಕೀಲರು. ಸ್ನೇಹಮಯಿ ಕೃಷ್ಣ ಈಗಾಗಲೇ ಸಾಕಷ್ಟು ದಾಖಲಾತಿಯನ್ನು ಲೋಕಾಯುಕ್ತಕ್ಕೆ ನೀಡಿದ್ದರು. ಅದನ್ನ ಸರಿಯಾಗಿ ಗಮನಿಸಿಲ್ಲ. ಮಾನ್ಯ ಜನಪ್ರತಿನಿಧಿಗಳ ಕೋರ್ಟ್ ಲೋಕಾಯುಕ್ತ ತನಿಖೆಗೆ ನೀಡಿತ್ತು. ಹೈಕೋರ್ಟ್‌ನಲ್ಲಿ ಸಿಬಿಐ ತನಿಖೆಗೆ ಕೋರಿದ್ವಿ. ಹೈಕೋರ್ಟ್ ಲೋಕಾಯುಕ್ತ ಮೇಲೆ ವಿಶ್ವಾಸ ಇಟ್ಟಿತ್ತು. ಆದರೆ ಲೋಕಾಯುಕ್ತ ಅಧಿಕಾರಿಗಳು ತರಾತುರಿಯಲ್ಲಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಇದು ಫೈನಲ್ ರಿಪೋರ್ಟ್ ಆದ್ರೂ, ಇನ್ನು ತನಿಖೆ ಮುಗಿದಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಸಿಎಂ, ಅವರ ಪತ್ನಿ ಮಲ್ಲಿಕಾರ್ಜುನ ಸ್ವಾಮಿ, ದೇವರಾಜುಗೆ ಕ್ಲೀನ್ ಚೀಟ್ ಕೊಡಲಿಕ್ಕೆ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ನಾವಿನ್ನು ರಿಪೋರ್ಟ್ ನೋಡಿಲ್ಲ. ಇದೇ 24ನೇ ತಾರೀಖು ರಿಪೋರ್ಟ್ ನಮ್ಮ ಕೈ ಸೇರಲಿದೆ. ವಕೀಲ ವಸಂತ ಕುಮಾರ್ ಹೇಳಿಕೆ.

ಶಾಸಕ ಶ್ರೀವತ್ಸ ಮಾತನಾಡಿ ಲೋಕಾಯುಕ್ತ ಇದೇ ರೀತಿ ವರದಿ ಕೊಡುತ್ತೆ ಎಂದು ಗೊತ್ತಿತ್ತು. ಲೋಕಾಯುಕ್ತ ವರದಿ ಖಂಡಿಸುತ್ತೇವೆ. ಲೋಕಾಯುಕ್ತಕ್ಕೆ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಆದರೂ ಈ ರೀತಿ ವರದಿ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಮುಗ್ದರು, ಏನೂ ತಪ್ಪು ಮಾಡಿಲ್ಲ ಎಂಬುದಾದರೆ 14 ಸೈಟ್ ಯಾಕೆ ವಾಪಾಸ್ ಕೊಟ್ಟರು?. ಸಚಿವ ಭೈರತಿ ಸುರೇಶ್ 141 ಫೈಲ್ ತೆಗೆದು ಕೊಂಡು ಹೋಗಿದ್ದಾರೆ. ಅದರಲ್ಲೆ ಸಿಎಂ ಕುಟುಂಬದ ಸಾಕ್ಷಿ ಇರಬಹುದು. ಸಿಎಂ ಒತ್ತಡ ದಿಂದ ಲೋಕಾಯುಕ್ತ ವರದಿ ಸಿದ್ಧವಾಗಿದೆ. ಲೋಕಾಯುಕ್ತಕ್ಕೆ ಇದ್ದ ಮರ್ಯಾದೆಯನ್ನು ಜಿಲ್ಲಾ ಮಟ್ಟದ ಲೋಕಾಯುಕ್ತ ಅಧಿಕಾರಿ ಕಳೆದಿದ್ದಾರೆ.

ಮುಡಾ ಹಗರಣ ವಿಚಾರದಲ್ಲಿ ಸಿಎಂ ಗೆ ಕ್ಲೀನ್ ಚೀಟ್ ವಿಚಾರ. ಸಿದ್ದರಾಮಯ್ಯ ಪರ ಮತ್ತೆ ಜಿ.ಟಿ. ದೇವೇಗೌಡ ಭರ್ಜರಿ ಬ್ಯಾಟಿಂಗ್ ಎಫ್ ಐ ಆರ್ ಆದ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಿದ್ದರು. ಈಗ ನೋಡಿ ಈ ಆರೋಪಕ್ಕೆ ಸಾಕ್ಷಿ ಇಲ್ಲ. ಈಗ ಏನೂ ಹೇಳುತ್ತಾರೆ. ಸಿಎಂ ರಾಜೀನಾಮೆ ಕೇಳ್ತಿದ್ದರು. ಎಫ್ ಐ ಆರ್ ಆದ ತಕ್ಷಣ ರಾಜೀನಾಮೆ ಕೇಳುವುದು ತಪ್ಪು ಎಂದು ಹೇಳಿದ್ದೆ. ಅದನ್ನೆ ಮಹಾ ಅಪರಾಧದ ಅನ್ನೋ ರೀತಿ ಬಿಂಬಿಸಿದ್ದರು. ಈಗ ಸತ್ಯ ಗೊತ್ತಾಗಿದೆ. ನಾನು ಅವತ್ತೂ ಹೇಳಿದ ಮಾತು ನನಗೆ ದುಬಾರಿ ಅಲ್ಲ. ನನ್ನ ಮೇಲಿನ ಸೇಡಿಗೆ ಕಾರಣವಾಯ್ತು ಎಂದಿದ್ದಾರೆ.
