ಬಾಲಿವುಡ್ನ ದಿಗ್ಗಜ ನಟ ಧರ್ಮೇಂದ್ರ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ವಿರುದ್ಧ ಧರ್ಮೇಂದ್ರ ಅವರ ಪತ್ನಿ, ಸಂಸದೆ ಹೇಮಾಮಾಲಿನಿ ಅಸಮಾಧಾನ ಹೊರ ಹಾಕಿದ್ದಾರೆ.

ನಟ ಧರ್ಮೇಂದ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲ ಮಾಧ್ಯಮಗಳು ಧರ್ಮೇಂದ್ರ ಅವರ ನಿಧನದ ಸುದ್ದಿ ಪ್ರಸಾರವಾಗಿದ್ದವು. ಮಾಧ್ಯಮಗಳ ಪ್ರಸಾರದಿಂದ ಬಾಲಿವುಡ್ನ ಕೆಲ ಸೆಲೆಬ್ರೆಟಿಗಳು ಧರ್ಮೇಂದ್ರ ಅವರ ಅಗಲಿಕೆ ಬಗ್ಗೆ ಸಂತಾಪ ಸೂಚಿಸಿದ್ದರು.

ಈ ರೀತಿಯ ಸುಳ್ಳು ಸುದ್ದಿ ಹರಡಿಸಿರುವುದು ಧರ್ಮೇಂದ್ರ ಅವರ ಕುಟುಂಬಕ್ಕೆ ನೋವುಂಟು ಮಾಡಿದ್ದು ಈ ಬಗ್ಗೆ ಹೇಮಾಮಾಲಿನಿ ಪ್ರತಿಕ್ರಿಯಿಸಿದ್ದಾರೆ. ಈ ರೀತಿ ನಡೆಯುತ್ತಿರುವುದು ಕ್ಷಮಿಸಲಾಗದು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್‌ಗಳು ಸುಳ್ಳು ಸುದ್ದಿಗಳನ್ನು ಹೇಗೆ ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬಕ್ಕೆ ಮತ್ತು ಅದರ ಗೌಪ್ಯತೆಯ ಅಗತ್ಯಕ್ಕೆ ಸರಿಯಾದ ಗೌರವವನ್ನು ನೀಡಿ ಎಂದು ಟ್ವೀಟ್ ಮಾಡಿದ್ದಾರೆ.













