ಸಂವಿಧಾನದ ಉಳಿವಿಗಾಗಿ ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯನ್ನು ಹತ್ಯೆ ಮಾಡಲು ಸಿದ್ದರಾಗಿ ಎಂದು ಹೇಲುವ ಮೂಲಕ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ಕಾಂಗ್ರೆಸ್ ಶಾಸಕ ರಾಜ ಪಟೇರಿಯಾ ತಮ್ಮ ಹೇಳಿಕೆ ಮೂಲಕ ವಿವಾದವನ್ ಹುಟ್ಟುಹಾಕಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗ:ಳಲ್ಲಿ ವೈರಲ್ ಆಗಿದೆ.
ಮೋದಿ ಚುನಾವಣೆಯ ಸಮಯದಲ್ಲಿ ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಜನರನ್ನ ವಿಭಜಿಸುತ್ತಾರೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಬುಡಕಟ್ಟು, ದಲಿತರು ಹಾಗೂ ಅಲ್ಪಸಂಖ್ಯಾತರ ಬದುಕು ಅಪಾಯದಲ್ಲಿದೆ ಸಂವಿಧಾನ ಉಳಿಯಬೇಕಿದ್ದರೆ ಮೋದಿಯನ್ನು ಕೊಲೆ ಮಾಡಲು ಸಜ್ಜಾಗಿ ಎಂದು ಹೇಳುವ ಮೂಲಕ ವಿವಾದವನ್ನ ಹುಟ್ಟುಹಾಕಿದ್ದಾರೆ.
ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ ಸಮಜಾಯಿಷಿ ನೀಡಿರುವ ಶಾಸಕ ರಾಜ ಪಟೇರಿಯಾ ನಾನು ಸೋಲಿಸಬೇಕು ಎಂಬ ಅರ್ಥದಲ್ಲಿ ಹತ್ಯೆ ಪದವನ್ನ ಬಳಸಿದ್ದೇನೆ ನಾನು ಮಹಾತ್ಮ ಗಾಂಧಿಯವರ ಪರಮ ಅನುಯಾಯಿಯಾಗಿದ್ದು ಅಲ್ಪಸಂಖ್ಯಾತರ ಉಳಿವಿಗಾಗಿ ಮೋದಿಯನ್ನ ಸೋಲಿಸಬೇಕು ಎಂದು ಹೇಳಿದ್ದೇನೆ ಹೊರತು ಬೇಕಂತಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಇನ್ನು ಶಾಸಕನ ಹೇಳಿಕೆಗೆ ಪ್ರತಿಕ್ರಿಯಿಸರುವ ಮಧ್ಯಪ್ರದೇಶ ಗೃಹ ಸಚಿಬ ನರೋತ್ತಮ್ ಮಿಶ್ರಾ ಈ ರೀತಿಯ ಹೇಳಿಕೆಗಳನ್ನು ನೋಡಿದ ಮೇಲೆ ಇದು ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಅಲ್ಲ ಎಂದು ತೋರಿಸುತ್ತದೆ ಇದು ಮುಸೋಲಿನಿ ಮನಸ್ಥಿತಯಿಯ ಇಟಲಿ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ ಮತ್ತು ಹೇಳಿಕೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.






