• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸಿನಿಮಾ ಸ್ಟಾರ್ಸ್​ ಸಿನಿಮಾ ಬಿಟ್ಟು ರಾಜಕಾರಣಕ್ಕೆ ಬಂದಿದ್ದು ಹಣಕ್ಕಾ..?

ಕೃಷ್ಣ ಮಣಿ by ಕೃಷ್ಣ ಮಣಿ
May 7, 2023
in ಅಂಕಣ
0
ಸಿನಿಮಾ ಸ್ಟಾರ್ಸ್​ ಸಿನಿಮಾ ಬಿಟ್ಟು ರಾಜಕಾರಣಕ್ಕೆ ಬಂದಿದ್ದು ಹಣಕ್ಕಾ..?
Share on WhatsAppShare on FacebookShare on Telegram

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಾಕಷ್ಟು ಸಿನಿಮಾ ಕಲಾವಿದರು ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್​ ಎರಡನೇ ಸ್ಥಾನದಲ್ಲಿದೆ. ಜೆಡಿಎಸ್​ಗೆ ಹೇಳಿಕೊಳ್ಳುವಂತಹ ಸ್ಟಾರ್​ ಪ್ರಚಾರಕರು ಇಲ್ಲದಿದ್ದರೂ ಅಲ್ಲಲ್ಲಿ ಕೆಲವು ಅಭ್ಯರ್ಥಿಗಳ ಪರವಾಗಿ ಸಿನಿಮಾ ನಟ, ನಟಿಯರು ಮತಯಾಚನೆ ಮಾಡುತ್ತಿದ್ದಾರೆ. ಕಳೆದ ಶುಕ್ರವಾರ ಕನ್ನಡದಲ್ಲಿ ಯಾವುದೇ ಸಿನಿಮಾ ಬಿಡುಗಡೆ ಕೂಡ ಆಗಿಲ್ಲ. ಅಂದರೆ ಇಡೀ ಚಿತ್ರರಂಗ ಸ್ತಬ್ಧವಾಗಿದೆ ಎಂದೇ ಅರ್ಥ. ಎಲ್ಲಾ ನಟ ನಟಿಯರು ಚುನಾವಣೆ ಮಾಡುವುದರಲ್ಲಿ ನಿರತರಾಗಿದ್ದು ಸಿನಿಮಾಗಿಂತಲೂ ರಾಜಕೀಯದಲ್ಲೇ ಹೆಚ್ಚಾಗಿ ಹಣ ಸಂಪಾದನೆ ಮಾಡುತ್ತಿದ್ದಾರಾ..? ಅನ್ನೋ ಚರ್ಚೆಗಳು ಸೃಷ್ಟಿಯಾಗಿದೆ.

ADVERTISEMENT

ಬಿಜೆಪಿಗಾಗಿ ಇಡೀ ರಾಜ್ಯ ಸುತ್ತುತ್ತಿರುವ ಕಿಚ್ಚ ಸುದೀಪ್​..!

ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವನ್ನು ಗುರಿಯಾಗಿಸಿಕೊಂಡು ನಟ ಕಿಚ್ಚ ಸುದೀಪ್​ರನ್ನು ಭಾರತೀಯ ಜನತಾ ಪಾರ್ಟಿ ಚುನಾವಣಾ ಅಖಾಡಕ್ಕೆ ಕರೆದುಕೊಂಡು ಬಂದಿದೆ. ಇನ್ನು ಕಿಚ್ಚ ಸುದೀಪ್​ ಪ್ರಚಾರಕ್ಕೆ ಬಂದರೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಸೇರಲಿದ್ದಾರೆ ಎನ್ನುವ ಕಾರಣಕ್ಕೆ ರಾಜ್ಯಾದ್ಯಂತ ಪ್ರಚಾರಕ್ಕೆ ಅಭ್ಯರ್ಥಿಗಳು ಮುಗಿಬೀಳ್ತಿದ್ದಾರೆ. ಇನ್ನು ಕಾಂಗ್ರೆಸ್​ನಿಂದ ಶಿವರಾಜ್​ ಕುಮಾರ್​​, ದುನಿಯಾ ವಿಜಿ, ನಿಶ್ವಿಕಾ ನಾಯ್ಡು ಸೇರಿದಂತೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಇನ್ನುಳಿದಂತೆ ನಟಿ ಶೃತಿ, ತಾರಾ ಬಿಜೆಪಿ ಪರ ಪ್ರಚಾರ ಮಾಡ್ತಿದ್ರೆ, ನಟಿ ಉಮಾಶ್ರೀ, ಸಾಧುಕೋಕಿಲಾ ಕಾಂಗ್ರೆಸ್​ ಪರವಾಗಿ ಮತಯಾಚನೆ ಮಾಡ್ತಿದ್ದಾರೆ. ಆದರೆ ಇಡೀ ಕರ್ನಾಟಕದಲ್ಲಿ ಸಿನಿಮಾ ಸ್ಟಾರ್​​ಗಳನ್ನು ಕರೆತಂದು ಅಬ್ಬರದ ಪ್ರಚಾರ ಮಾಡ್ತಿರೋದು ಚಿಕ್ಕಬಳ್ಳಾಪುರ ಕ್ಷೇತ್ರದ ಡಾ ಸುಧಾಕರ್​.

ಸುಧಾಕರ್​ ಕ್ಷೇತ್ರದಲ್ಲಿ ಸಿನಿಮಾ ಸ್ಟಾರ್​ಗಳ ಅಬ್ಬರ..!

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ದಿನಕ್ಕೆ ಒಬ್ಬರು ಸ್ಟಾರ್​ ಪ್ರಚಾರಕರು ಎನ್ನುವಂತೆ ಇಡೀ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ನಟ ರಘು ಮುಖರ್ಜಿ, ನಟಿ ಅನುಪ್ರಭಾಕರ್​ ಮನೆ ಮನೆಗೆ ಪ್ರಚಾರ ಮಾಡಿದ್ದಾರೆ. ತೆಲುಗು ಚಿತ್ರರಂಗದ ಹಾಸ್ಯ ನಟ ಬ್ರಹ್ಮಾನಂದ ರೋಡ್​ ಶೋ ಮೂಲಕ ಸುಧಾಕರ್​ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ನಟ ದಿಗಂತ್​, ನೆನಪಿರಲಿ ಪ್ರೇಮ್​ , ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್​, ದಿವ್ಯಾ ಉರುಡುಗ ಸೇರಿದಂತೆ ಕನ್ನಡ, ತೆಲುಗು ಸಿನಿಮಾ ಸ್ಟಾರ್​ಗಳು ಮನೆ ಮನೆಗೆ ತೆರಳಿ ಸುಧಾಕರ್​​ ಗೆಲ್ಲಿಸುವಂತೆ ಮನವಿ ಮಾಡುತ್ತಿರುದ್ದಾರೆ. ಈ ಸ್ಟಾರ್​ಗಳು ಅಭಿಮಾನಕ್ಕೆ ಬಂದಿರಬಹುದು ಎನ್ನುವ ಮಾತು ಒಂದು ಕಡೆ ಆದರೆ ಹಣಕ್ಕಾಗಿ ಬಂದಿದ್ದಾರೆ ಎನ್ನುವ ಚರ್ಚೆಗಳು ಶುರು ಆಗಿದೆ.

ಶಿವಣ್ಣನನ್ನು ಕೆಣಕಿದ ಪ್ರಶಾಂತ್​ ಸಂಬರ್ಗಿ, ಜನರ ಟೀಕಾಸ್ತ್ರ..!

ಸಾಮಾಜಿಕ ಕಾರ್ಯಕರ್ತರ ಎಂದು ಹಿಂದೂಪರ ಹೋರಾಟದಲ್ಲೂ ಭಾಗಿಯಾಗುವ ಪ್ರಶಾಂತ ಸಂಬರ್ಗಿ ನಟ ಶಿವಣ್ಣ ಯಾವುದೇ ಸ್ಕ್ರಿಪ್ಟ್​​ ನೋಡಿ ಸಿನಿಮಾ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಹಣವನ್ನು ನೋಡಿ ಸಿನಿಮಾ ಒಪ್ಪಿಕೊಳ್ತಾರೆ. ಹಾಗೆಯೇ ರಾಜಕೀಯಲ್ಲಿ ಪ್ರಚಾರಕ್ಕೆ ಅಭ್ಯರ್ಥಿಗಳು ಯಾರೆಂದು ನೋಡುವುದಿಲ್ಲ ಹಣವನ್ನು ಮಾತ್ರ ನೋಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೇ ಪ್ರಶಾಂತ್​ ಸಂಬರ್ಗಿಯವರಿಗೆ ಜನ ಗಾಳಿ ಬಿಡಿಸುವ ಕೆಲಸ ಮಾಡಿದ್ದರು. ಈಗಾಗಲೇ ಒಮ್ಮೆ ರಾಜಕುಮಾರ್​ ಫ್ಯಾಮಿನಿಲಿ ಬಗ್ಗೆ ಮಾತನಾಡಿ ಅನುಭವಿಸಿದ್ಯಾ..! ಈಗ ಮತ್ತೊಮ್ಮೆ ಅನುಭವಿಸ್ತೀಯಾ..! ಎಂದು ಎಚ್ಚರಿಸಿದ್ದರು. ಈ ಪ್ರಶ್ನೆಗೆ ಗರಂ ಆಗಿರುವ ನಟ ಶಿವಣ್ಣ, ನಮ್ಮ ಬಳಿ ಹಣ ಇಲ್ವಾ..? ನಾವು ರಾಜಕಾರಣಿಗಳ ಪರ ಪ್ರಚಾರ ಮಾಡಿ ಹಣ ಸಂಪಾದನೆ ಮಾಡಬೇಕಾ..? ಎಂದು ಉತ್ತರಿಸಿದ್ದಾರೆ. ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಸಂಬರಗಿ ಕೂಡ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಕೃಷ್ಣಮಣಿ

Tags: ChandanavanGeeta SivarajkumarNishvika NaidusandalwoodSivarajkumarsudeepಗೀತಾ ಶಿವರಾಜ್​ಕುಮಾರ್​ಚಂದನವನನಿಶ್ವಿಕಾ ನಾಯ್ಡುಶಿವರಾಜ್​ಕುಮಾರ್​ಸುದೀಪ್​ಸ್ಯಾಂಡಲ್​ವುಡ್​
Previous Post

ಸಾಂವಿಧಾನಿಕ ಮೌಲ್ಯದಿಂದ ಮಾರುಕಟ್ಟೆ ಮೌಲ್ಯದೆಡೆಗೆ !

Next Post

ರಾಜಕೀಯದಿಂದ ದೂರ ಉಳಿದಿದ್ದೇಕೆ ನಟಿ ರಮ್ಯಾ..? : ಮೌನ ಮುರಿದ ನಟಿ

Related Posts

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ
ಅಂಕಣ

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ

by ಪ್ರತಿಧ್ವನಿ
May 27, 2026
0

ನಾ ದಿವಾಕರ ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಎಂದು ಪರಿಗಣಿಸಲು ಕಾರಣ ಎಂದರೆ ಈ ಶಾಸನಾತ್ಮಕ ಗ್ರಂಥದಲ್ಲಿ ಅಳವಡಿಸಲಾಗಿರುವ ಮಾನವೀಯ ಮೌಲ್ಯಗಳು. ನಮ್ಮ ಸಂವಿಧಾನ ಮೂಲತಃ ವ್ಯಕ್ತಿ...

Read moreDetails
ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

May 26, 2026
ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

May 23, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
Next Post
ರಾಜಕೀಯದಿಂದ ದೂರ ಉಳಿದಿದ್ದೇಕೆ ನಟಿ ರಮ್ಯಾ..? : ಮೌನ ಮುರಿದ ನಟಿ

ರಾಜಕೀಯದಿಂದ ದೂರ ಉಳಿದಿದ್ದೇಕೆ ನಟಿ ರಮ್ಯಾ..? : ಮೌನ ಮುರಿದ ನಟಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada