ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಮಹಿಳೆ ಸಾವನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದರು. ಗಾರ್ವೇಬಾವಿಪಾಳ್ಯದ ಲಕ್ಷ್ಮೀ ಲೇಔಟ್ನಲ್ಲಿ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾರ್ವೇಬಾವಿಪಾಳ್ಯದ ಲಕ್ಷ್ಮೀ ಲೇಔಟ್ನಲ್ಲಿ 26 ವರ್ಷದ ಶಾಲಿನಿ ಎಂಬುವವರು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಸುರೇಶ ಎಂಬಾತನನ್ನ ಮದುವೆಯಾಗಿದ್ದ ಶಾಲಿನಿಗೆ ಒಂದೂವರೆ ವರ್ಷದ ಮಗುವಿತ್ತು. ಲಕ್ಷ್ಮೀ ಲೇಔಟ್ ಮನೆಯಲ್ಲಿ ಸುರೇಶ್ ತಂದೆ, ತಾಯಿ ಹಾಗೂ ಪತಿ ಸುರೇಶ್ ಹಾಗು ಮಗು ಜೊತೆಗೆ ಶಾಲಿನಿ ವಾಸವಿದ್ರು. ಕಳೆದ ಡಿಸೆಂಬರ್ 14 ನೇ ತಾರೀಖಿನ ರಾತ್ರಿ ಮಗುವಿಗೆ ಹಾಲು ಕುಡಿಸುವ ವಿಚಾರವಾಗಿ ಗಲಾಟೆ ನಡೆದಿತ್ತು, ಮಗು ಆಳುತ್ತಿದ್ದರು ಹಾಲು ಕುಡಿಸಿದ್ದಕ್ಕೆ ಪತ್ನಿಗೆ ಸುರೇಶ್ ಬೈದಿದ್ದರು.
ಮಗುವಿಗೆ ಹಾಲುಣಿಸುವ ವಿಚಾರಕ್ಕೆ ನಡೆದ ಗಲಾಟೆ ಬಳಿಕ ಶಾಲಿನಿ ಬಿಲ್ಡಿಂಗ್ನ ನಾಲ್ಕನೇ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಗಂಭೀರ ಗಾಯಗೊಂಡಿದ್ದ ಮಹಿಳೆ ಶಾಲಿನಿಯನ್ನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.