ತಾಯಿ-ಮಗಳ ಸೋಗಿನಲ್ಲಿ ಒಡವೆ ಅಂಗಡಿಗೆ ಬಂದು ಚಿನ್ನದ ಸರ ಕದ್ದು ಎಸ್ಕೇಪ್ ಆಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಡಿ.02ರಂದು ತುಮಕೂರಿನ ಗುಂಚಿ ಸರ್ಕಲ್ ಬಳಿಯ ಒಡವೆ ಅಂಗಡಿಯೊಂದಕ್ಕೆ ಬಂದಿದ್ದ ತಾಯಿ ಮಗಳು ಚಿನ್ನದ ಸರಗಳನ್ನು ತೋರಿಸುವಂತೆ ಹೇಳಿದ್ದಾರೆ. ಅಂತೆಯೇ ಸರಗಳನ್ನು ನೋಡುತ್ತಿದ್ದ ವೇಳೆ 32 ಗ್ರಾಂ ಚಿನ್ನದ ಸರವನ್ನು ಕದ್ದಿದ್ದಾರೆ. ಅಲ್ಲದೆ ಸಮೀಪದ ಎಟಿಎಂಗೆ ಹೋಗಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ತಿಳಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇನ್ನು ಚಿನ್ನದ ಸರ ನಾಪತ್ತೆಯಾಗಿರುವ ಬಗ್ಗೆ ಗಮನಕ್ಕೆ ಬಂದಾಗ ಸಿಬ್ಬಂದಿ ಮತ್ತು ಅಂಗಡಿ ಮಾಲೀಕರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ತಾಯಿ ಮಗಳ ಕೈಚಳಕದ ಬಗ್ಗೆ ತಿಳಿದುಬಂದಿದೆ.
ಈ ಬಗ್ಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಾಲಾಕಿ ಕಳ್ಳಿಯರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.