• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನಲ್ಲಿ ಶುರುವಾಯ್ತು ಸೊಳ್ಳೆ ಕಾಟ : ಡೇಂಘಿ, ಮಲೇರಿಯಾ ಕೇಸ್ ಹೆಚ್ಚಳ!

ಪ್ರತಿಧ್ವನಿ by ಪ್ರತಿಧ್ವನಿ
April 13, 2022
in ಕರ್ನಾಟಕ
0
ಬೆಂಗಳೂರಿನಲ್ಲಿ ಶುರುವಾಯ್ತು ಸೊಳ್ಳೆ ಕಾಟ : ಡೇಂಘಿ, ಮಲೇರಿಯಾ ಕೇಸ್ ಹೆಚ್ಚಳ!
Share on WhatsAppShare on FacebookShare on Telegram

ಕೊರೋನಾ ನಾಲ್ಕನೇ ಅಲೆ ಮುನ್ಸೂಚನೆ ಸಿಕ್ಕಿದ್ದು, ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೇಂಘಿ ಹಾಗೂ ಮಲೇರಿಯಾ ಖಾಯಿಲೆ ಉಲ್ಬಣವಾಗುತ್ತಿದೆ. ಇದರಿಂದ ಜನರು ಆತಂಕಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಪಾಲಿಕೆಗೆ ಈ ಸೊಳ್ಳೆಗಳ ಆತಂಕದಿಂದ ದೂರ ಮಾಡಲು ಮನವಿ ಮಾಡ್ತಿದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿ ಎಷ್ಟು ಡೇಂಘಿ ಪ್ರಕರಣ ದಾಖಲಾಗಿವೆ..? ಇದರಿಂದ ಮುಂಜಾಗೃತೆ ಹೇಗೆ ತೆಗೆದುಕೊಳ್ಳಬೇಕು.?

ADVERTISEMENT

ಬೆಂಗಳೂರಿನಲ್ಲಿ ಸದ್ಯ 1,793 ಡೇಂಘಿ ಪ್ರಕರಣ ಪತ್ತೆ !

ಬೆಂಗಳೂರಿನಲ್ಲಿ ಸದ್ಯಕ್ಕೆ ಹೆಚ್ಚಾಗಿರುವ ಸಮಸ್ಯೆ ಅಂದರೆ ಅದು ಡೇಂಘಿ ಸಮಸ್ಯೆ. ನಗರದಾದ್ಯಂತ 1793 ಡೇಂಘಿ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಒಟ್ಟು 1800 ಪ್ರಕರಣ ದಾಖಲಾಗಿತ್ತು. ಆದರೆ ಈ ವರ್ಷ ಈಗಲೇ 1793 ಪ್ರಕರಣ ಧೃಡ ಪಟ್ಟಿದೆ. ಮುಂದಿನ ದಿನದಲ್ಲಿ ಮತ್ತಷ್ಟು ಕೇಸ್‌ಗಳು ಹೆಚ್ಚಳ ಸಾಧ್ಯತೆ ಇದ್ದು, ನಿಂತ ನೀರಿನಲ್ಲಿ ಹೆಚ್ಚು ಲಾರ್ವಗಳು ಉತ್ಪತ್ತಿಯಾಗ್ತಿದೆ. ಈ ಹಿನ್ನೆಲೆ ಬೆಂಗಳೂರು ನಿವಾಸಿಗಳು ಮನೆಯ ಸುತ್ತಮುತ್ತ ನೀರು ಕಟ್ಟಿ ನಿಲ್ಲದಂತೆ ಎಚ್ಚರವಹಸಿಲು ಸೂಚಿಸಲಾಗಿದೆ.‌ ಮನೆ ಸುತ್ತಮುತ್ತ ಜೊತೆಗೆ ಶಾಲಾ – ಕಾಲೇಜುಗಳು ಪಾರ್ಕ್‌ಗಳ ಬಳಿ ಕೂಡಾ ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಮಕ್ಕಳು ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಜನರು ಸೊಳ್ಳೆಗಳ ಕಾಟದಿಂದ ಕಂಗಾಲಾಗಿದ್ದು, ಬೇಗ ಈ ಸಮಸ್ಯೆಗೆ ಮುಕ್ತಿ ನೀಡಿ ಎಂದು ಸಾಲು ಸಾಲು ದೂರುಗಳು ಪಾಲಿಕೆಗೆ ಬಂದಿದೆ.

ನಗರದ ಪೂರ್ವ ವಲಯದಲ್ಲಿ ಅತಿ ಹೆಚ್ಚು ಕೇಸ್ !

ಇನ್ನು ಪಾಲಿಕೆಯ 8 ವಲಯಗಳಲ್ಲಿ ಪೂರ್ವ ವಲಯದಲ್ಲಿ ಹೆಚ್ಚು ಡೇಂಘಿ ಕೇಸ್‌ಗಳು ಪತ್ತೆಯಾಗಿವೆ. ಹಾಗಾದರೆ ಯಾವ್ಯಾವ ವಲಯದಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ ಅಂತ ನೋಡುವುದಾದರೆ, ಬೊಮ್ಮನಹಳ್ಳಿ ವಲಯದಲ್ಲಿ 104 ಪ್ರಕರಣ, ದಾಸರಹಳ್ಳಿ ವಲಯದಲ್ಲಿ 38 ಪ್ರಕರಣ, ಪೂರ್ವ ವಲಯದಲ್ಲಿ 653 ಪ್ರಕರಣ, ಮಹದೇವಪುರ ವಲಯದಲ್ಲಿ 342 ಪ್ರಕರಣ, ಆರ್ ಆರ್ ನಗರ ವಲಯದಲ್ಲಿ 122 ಪ್ರಕರಣ, ದಕ್ಷಿಣ ವಲಯದಲ್ಲಿ 170 ಪ್ರಕರಣ, ಪಶ್ಚಿಮ ವಲಯದಲ್ಲಿ 162 ಪ್ರಕರಣ ಹಾಗೂ ಯಲಹಂಕ ವಲಯದಲ್ಲಿ 202 ಪ್ರಕರಣ ದಾಖಲಾಗಿದೆ.

ಮಕ್ಕಳಿರುವ ಮನೆಯಲ್ಲಿ ಸೊಳ್ಳೆ ಪರದೆ ಬಳಕೆ ಕಡ್ಡಾಯ !

ಡೇಂಘಿ ನಿಯಂತ್ರಣಕ್ಕೆ ಪಾಲಿಕೆ ವಿಶೇಷ ಆಯುಕ್ತ ತ್ರಿಲೋಕ ಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮನೆ ಮನೆ ಸರ್ವೆಗೆ ಪಾಲಿಕೆ ಮುಂದಾಗಿದೆ. ಸೊಳ್ಳೆಗಳಿಗೆ ಫಾಗ್ಗಿಂಗ್ ಸ್ಪ್ರೇ ನಡೆಸಲು ಆರಂಭ ಮಾಡಿದ್ದು, ಲಾರ್ವಾಗಳಿಗೆ ಆ್ಯಂಟಿ ಲಾರ್ವಾ ಸ್ಪ್ರೇ ಸಿಂಪಡನೆ ಮಾಡಲಾಗ್ತಿದೆ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜನರಿಗೆ ಸೂಚನೆ ನೀಡಲಾಗಿದೆ. ನೀರು ಹೆಚ್ಚಾಗಿ ಶೇಖರಣೆಯಾಗದಂತೆ ಹಾಗೂ ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ರಕ್ಷಣೆ ಮಾಡಬೇಕು ಜೊತೆಗೆ ಮಕ್ಕಳಿರುವ ಮನೆಯಲ್ಲಿ ಸೊಳ್ಳೆ ಪರದೆ ಬಳಕೆ ಕಡ್ಡಾಯದ ಸಲಹೆ ನೀಡಲಾಗಿದೆ. ಹೀಗೆ ಬೆಂಗಳೂರಿನಲ್ಲಿ ಡೇಂಘಿ ಪ್ರಕರಣ ಹೆಚ್ಚಾಗಿದ್ದು, ಜನರಿಗೆ ಆತಂಕ ಶುರುವಾಗಿದೆ. ಹಾಗೇ ಪಾಲಿಕೆ ಕೂಡಾ ಈ ಬಗ್ಗೆ ಗಮನ ಹರಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Tags: BJPCongress PartyCovid 19ಡೇಂಘಿಬಿಜೆಪಿಮಲೇರಿಯಾ ಕಾಯಿಲೆ
Previous Post

ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರಿಂದ ಸಂತೋಷ್ ಪಾಟೀಲ್ ಆತ್ಮಹತ್ಯೆ ತನಿಖೆ ನಡೆಸಬೇಕು : ಬಿ.ವಿ.ಶ್ರೀನಿವಾಸ್ ಆಗ್ರಹ

Next Post

ವಿಮೋಚಕನ ಹೆಜ್ಜೆಗಳ ನಡುವೆ ಆತ್ಮಾವಲೋಕನದ ಛಾಯೆ

Related Posts

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?
Top Story

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

by ಪ್ರತಿಧ್ವನಿ
May 23, 2026
0

 ಬೆಂಗಳೂರು : ದೇಶಾದ್ಯಂತ ಇಂದು ಬೆಳಂಬೆಳಿಗ್ಗೆ ವಾಹನ ಸವಾರರಿಗೆ ಮತ್ತೊಮ್ಮೆ ಪೆಟ್ರೋಲ್‌, ಡೀಸೆಲ್ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ...

Read moreDetails
ಎಬೋಲಾ ವೈರಸ್ ಎಚ್ಚರಿಕೆ: ಕರ್ನಾಟಕದಲ್ಲಿ ಹೈ ಅಲರ್ಟ್‌! ಈ‌ ನಿಯಮ‌ ಕಡ್ಡಾಯ 

ಎಬೋಲಾ ವೈರಸ್ ಎಚ್ಚರಿಕೆ: ಕರ್ನಾಟಕದಲ್ಲಿ ಹೈ ಅಲರ್ಟ್‌! ಈ‌ ನಿಯಮ‌ ಕಡ್ಡಾಯ 

May 23, 2026
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
Next Post
ವಿಮೋಚಕನ ಹೆಜ್ಜೆಗಳ ನಡುವೆ ಆತ್ಮಾವಲೋಕನದ ಛಾಯೆ

ವಿಮೋಚಕನ ಹೆಜ್ಜೆಗಳ ನಡುವೆ ಆತ್ಮಾವಲೋಕನದ ಛಾಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada