• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ನೀರಿನ ಹನಿಯೋ ಚೇಳಿನ ಮಳೆಯೋ…? : ಈಜಿಪ್ಟಿನಲ್ಲಿ ಚೇಳುಗಳ ಆರ್ಭಟಕ್ಕೆ ಜನ ಕಂಗಾಲು

ಫಾತಿಮಾ by ಫಾತಿಮಾ
November 17, 2021
in ವಿದೇಶ
0
ನೀರಿನ ಹನಿಯೋ ಚೇಳಿನ ಮಳೆಯೋ…? : ಈಜಿಪ್ಟಿನಲ್ಲಿ ಚೇಳುಗಳ ಆರ್ಭಟಕ್ಕೆ ಜನ ಕಂಗಾಲು
Share on WhatsAppShare on FacebookShare on Telegram

ಜೀವ ವಿಕಾಸದ ಹಾದಿಯಲ್ಲಿ ಸಾವಿರ ವರ್ಷಗಳ ಇತಿಹಾಸವಿರುವ ನೈಲ್ ನದಿ ತೀರದ ಜನರಿಗೆ ಅದೂ ಒಂದು ಅತಿ ಸಾಮಾನ್ಯ ಶುಕ್ರವಾರ. ನೋಡ ನೋಡುತ್ತಿದ್ದಂತೆಯೇ ನೈಲ್ ನದಿಯ ಮೇಲಿನ ಆಕಾಶ ಒಮ್ಮೆಗೆ ಕಪ್ಪಿಟ್ಟಿತು. ಕ್ಷಣಮಾತ್ರದಲ್ಲಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ. ಸಾಮಾನ್ಯವಾಗಿ ಮಳೆಯಾಗದ ಈಜಿಪ್ಟಿನ ಆಸ್ವಾನ್ ಪ್ರದೇಶದಲ್ಲಿ ಜನ ಇದೇನಾಗುತ್ತಿದೆ ಎಂದು ನೋಡುತ್ತಿರುವಂತೆಯೇ ಇಟ್ಟಿಗೆಯಿಂದ ಕಟ್ಟಿದ ಮನೆಗಳು ಕುಸಿದು ಬೀಳತೊಡಗಿದವು. ಹಿಂದೆಯೇ ಹರಿದು ಬಂತು ರಾಶಿ ರಾಶಿ ಚೇಳುಗಳು. ರಸ್ತೆ, ಬೀದಿ, ಮನೆ ಎತ್ತ ನೋಡಿದರೂ ಚೇಳು, ಕಾಲಿಟ್ಟಲ್ಲಲ್ಲೇ ಚೇಳಿನ‌ ಕಡಿತ, ಉರಿ.

ADVERTISEMENT

ವಿಶಾಲವಾದ ಮರುಭೂಮಿಗಳನ್ನು ಹೊಂದಿರುವ ಈಜಿಪ್ಟ್ ಚೇಳುಗಳ ಸ್ವರ್ಗ. ಮರುಭೂಮಿಯ ಬಿಲಗಳಲ್ಲಿ ಅಥವಾ ಬಂಡೆಗಳಡಿಯಲ್ಲಿ ವಾಸಿಸುವ ಅವು ಆಹಾರ ಅಥವಾ ನೀರಿಲ್ಲದೆ ವಾರಗಟ್ಟಲೆ ಬದುಕಬಲ್ಲವು. ಈಜಿಪ್ಟ್ ದೇಶವೊಂದರಲ್ಲೇ ಒಟ್ಟು 24 ಬಗೆಯ ಚೇಳುಗಳಿವೆ.  ಅವು ಆ ದೇಶದ ದೀರ್ಘಾವಧಿ ನಿವಾಸಿಗಳಾಗಿದ್ದು ಅಲ್ಲಿನ ಇಬ್ಬರು ರಾಜರು ತಮ್ಮ ಹೆಸರನ್ನು ಚೇಳುಗಳಿಂದಲೇ ಎರವಲು  ಪಡೆದಿದ್ದಾರೆ. ಈಜಿಪ್ಟಿನ ಪೌರಾಣಿಕ ಕಥೆಗಳಲ್ಲಿ ಕಾಣಿಸಿಕೊಳ್ಳುವ ಐಸಿಸ್ ದೇವತೆ  ಏಳು ಚೇಳುಗಳ ಸಹಾಯದಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತದೆ. ಬಳಿಕ ಆ ಏಳು ಚೇಳುಗಳೇ ಈಜಿಪ್ಟಿನ ಸೆರ್ಕೆಟ್ ದೇವತೆಯಾದವು ಎನ್ನುತ್ತದೆ ಈಜಿಪ್ಟಿನ ಪುರಾಣಗಳು.

ಈಗ ಅವೇ ಚೇಳುಗಳು ಅಲ್ಲಿನ‌ ಜನರ ಪ್ರಾಣ ಹಿಂಡುತ್ತಿವೆ. ಭೀಕರ ಬಿರುಗಾಳಿಯ‌ ಕಾರಣದಿಂದ ತನ್ನ ಅಡಗುತಾಣಗಳಿಂದ, ಪೊಟರೆಗಳಿಂದ ಬೀದಿಗೆ ಬಂದ ಸಾವಿರಾರು ಚೇಳುಗಳು ಕುಟುಕಿ 500 ಕ್ಕೂ ಹೆಚ್ಚು ಜನರು ಒಂದೇ ದಿನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಚೇಳುಗಳಿಂದ ಕುಟುಕಿಸಿಕೊಂಡವರಿಗೆ ಆಂಟಿ-ವೆನಮ್ ಡೋಸ್ ನೀಡಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಚೇಳು ಕುಟುಕಿನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಹಂಗಾಮಿ ಆರೋಗ್ಯ ಸಚಿವ ಖಾಲಿದ್ ಅಬ್ದೆಲ್‌ ಗಫರ್ ದೃಢಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾದ ಫೋಟೋಗಳು ಮತ್ತು ವೀಡಿಯೋ ಫೂಟೇಜ್‌ಗಳು ಜಲಾವೃತವಾದ ಬೀದಿಗಳು ಮತ್ತು ಹಾನಿಗೊಳಗಾದ ಮನೆಗಳು, ವಾಹನಗಳ, ಕೃಷಿ ತೋಟಗಳು ಮತ್ತು ಬೀದಿಗೆ ಹರಿದು ಬರುತ್ತಿರುವ ಸಾವಿರಾರು ಚೇಳುಗಳನ್ನು ತೋರಿಸುತ್ತಿವೆ.  ಶಾಲೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಮತ್ತು ಅಸ್ವಾನ್ ಪ್ರದೇಶದಾದ್ಯಂತ ವಿದ್ಯುತ್ ಕಡಿತ ಮಾಡಲಾಗಿದೆ.  

ಅಸ್ವಾನ್ ಪರ್ವತ‌ ಶ್ರೇಣಿಯು ಅರೇಬಿಯನ್ ಕೊಬ್ಬಿನ ಬಾಲದ ಚೇಳು ಅಥವಾ ಆಂಡ್ರೊಕ್ಟೋನಸ್ ಕ್ರಾಸಿಕೌಡಾದ ಅತಿ ದೊಡ್ಡ ನೆಲೆಯಾಗಿದೆ. ಇವುಗಳ ಬಾಲ ದಪ್ಪ ಹಾಗೂ ಉದ್ದವಾಗಿರುತ್ತದೆ. ಅವುಗಳು ವಿಶ್ವದ ಅತ್ಯಂತ ಅಪಾಯಕಾರಿ ಚೇಳುಗಳೆಂದು ಪರಿಗಣಿಸಲ್ಪಟ್ಟಿವೆ‌ ಮತ್ತು ಇವುಗಳು ಒಂದು ಬಾರಿ ಕುಟುಕಿದರೆ ಅದು ಮಾನವನಿಗೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಈ ಚೇಳುಗಳು ವರ್ಷಕ್ಕೆ ಹಲವಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತವೆ.

ಈಜಿಪ್ಟ್‌ನ ನಗರ ಪ್ರದೇಶದಿಂದ ದೂರದಲ್ಲಿ ಇರುವ ಗುಡ್ಡಗಾಡು ಪ್ರದೇಶಗಳಲ್ಲಿ, ಪರ್ವತಗಳ‌ ಅಡಿಯಲ್ಲಿ ಇರುವ ಗ್ರಾಮಗಳಲ್ಲಿ ಈ ಚೇಳುಗಳ ಕಾಟ ವಿಪರೀತವಾಗಿದೆ. ಬಿರುಗಾಳಿ ಹಾಗೂ ಜೋರು ಮಳೆಗೆ ಇವು ಜನ ವಸತಿ ಪ್ರದೇಶಕ್ಕೆ ಬರುತ್ತವೆ. ಪ್ರವಾಹದಂತೆ ಆಸ್ವಾನ್ ಪ್ರದೇಶದಲ್ಲಿ ಚೇಳುಗಳು ಹರಿದು ಬರುತ್ತಿದ್ದು ಅಲ್ಲಿನ ರಾಜ್ಯಪಾಲರಾದ ಅಶ್ರಫ್ ಅಟಿಯಾ ಜನರಿಗೆ ಮನೆಯಿಂದ ಹೊರ ಬರದಂತೆ ಕರೆ ನೀಡಿದ್ದಾರೆ.

ಈಗಾಗಲೇ ಅನೇಕ ಗ್ರಾಮಗಳಿಗೆ ವಿಷ ನಿರೋಧಕ ಔಷಧಗಳನ್ನು ರವಾನಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ವಾರ್ಷಿಕ ರಜೆಯಿಂದ ವೈದ್ಯರನ್ನು ಹಿಂಪಡೆಯಲಾಗಿದೆ ಮತ್ತು ಆಸ್ಪತ್ರೆಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಲಾಗಿದೆ ಎಂದು ‘ಅಲ್-ಅಹ್ರಾಮ್’ ದೈನಿಕವು ಅಸ್ವಾನ್‌ನಲ್ಲಿರುವ ಆರೋಗ್ಯ

ಸಚಿವಾಲಯದ ಅಧೀನ ಕಾರ್ಯದರ್ಶಿ ಇಹಾಬ್ ಹನಾಫಿಯವರ ಹೇಳಿಕೆಯನ್ನು ವರದಿ ಮಾಡಿದೆ.

ಆರೋಗ್ಯ ಸಚಿವಾಲಯವು ಆಸ್ವಾನ್‌ನಲ್ಲಿ 3,000 ಕ್ಕಿಂತ ಹೆಚ್ಚು ವಿಷ ನಿರೋಧಕಗಳನ್ನು ಹೊಂದಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದೆ. ತೀವ್ರ ನೋವು, ಜ್ವರ, ಬೆವರುವಿಕೆ, ವಾಂತಿ, ಅತಿಸಾರ, ಸ್ನಾಯುಗಳ ನಡುಕ ಮತ್ತು ತಲೆ ಸೆಳೆತ ಇವುಗಳು ಚೇಳುಗಳು ಕುಟುಕಿರುವ ಲಕ್ಷಣಗಳಾಗಿದ್ದು ಇಂತಹ ಲಕ್ಷಣ ಕಂಡುಬಂದಲ್ಲಿ‌ ಶೀಘ್ರವಾಗಿ ಆಸ್ಪತ್ರೆಗೆ‌ ದಾಖಲಾಗಬೇಕು ಎಂದು ಆರೋಗ್ಯ  ಕೇಳಿಕೊಂಡಿದೆ. ಈಜಿಪ್ಟ್‌ನ ಹವಾಮಾನ ಇಲಾಖೆ ವರದಿಗಳ ಪ್ರಕಾರ ಮುಂದಿನ 24 ಗಂಟೆಗಳ ಕಾಲ ಬಿರುಗಾಳಿ ಸಹಿತ ಮಳೆ ಬರಲಿದ್ದು, ಈ ಸಮಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Tags: biteCovid 19crabEgyptheavy rainshospitalizedಕರೋನಾಕೋವಿಡ್-19
Previous Post

ಕರ್ನಾಟಕ, ತಮಿಳುನಾಡಿನ ತದ್ವಿರುದ್ಧ ಮುಖ ದರ್ಶನ ಮಾಡಿಸಿದ ಎರಡು ಪ್ರಕರಣ

Next Post

ಬಿಟ್ ಕಾಯಿನ್ ಕೇಸ್: ಹ್ಯಾಕರ್ ಶ್ರೀಕಿ ಬಗ್ಗೆ ಮೋದಿಗೆ ಕಂಪ್ಲೈಂಟ್; ದೂರಿನಲ್ಲಿ ಏನಿದೆ?

Related Posts

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ
Top Story

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

by ಪ್ರತಿಧ್ವನಿ
November 17, 2025
0

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಭುಗಿಲೆದ್ದಿದ್ದ ವಿದ್ಯಾರ್ಥಿ ಚಳುವಳಿಯನ್ನು ಹತ್ತಿಕ್ಕಲು ಆಗಿನ...

Read moreDetails
ಸೌದಿ ಅರೇಬಿಯಾದಲ್ಲಿ ಭೀಕರ ದುರಂತ: 42 ಭಾರತೀಯರು ಸಜೀವ ದಹನ

ಸೌದಿ ಅರೇಬಿಯಾದಲ್ಲಿ ಭೀಕರ ದುರಂತ: 42 ಭಾರತೀಯರು ಸಜೀವ ದಹನ

November 17, 2025

ಅಂಧರ ಕ್ರಿಕೆಟ್ ಟೂರ್ನಿಗೂ ಜಾಗತಿಕ ಮನ್ನಣೆ ಸಿಗುವಂತಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 14, 2025
ಇಂದಿನ ರಾಶಿ ಭವಿಷ್ಯ: ಈ ರಾಶಿಗಳಿಗೆ ಇಂದು ದಿಢೀರ್‌ ಧನ ಲಾಭ..!

ಇಂದಿನ ರಾಶಿ ಭವಿಷ್ಯ: ಈ ರಾಶಿಗಳಿಗೆ ಇಂದು ದಿಢೀರ್‌ ಧನ ಲಾಭ..!

November 12, 2025
ಪಾಕಿಸ್ತಾನದಲ್ಲೂ ನಿಗೂಢ ಸ್ಫೋಟ; 12 ಜನರ ಸಾವು

ಪಾಕಿಸ್ತಾನದಲ್ಲೂ ನಿಗೂಢ ಸ್ಫೋಟ; 12 ಜನರ ಸಾವು

November 11, 2025
Next Post
ಬಿಟ್ ಕಾಯಿನ್ ಕೇಸ್: ಹ್ಯಾಕರ್ ಶ್ರೀಕಿ ಬಗ್ಗೆ ಮೋದಿಗೆ ಕಂಪ್ಲೈಂಟ್; ದೂರಿನಲ್ಲಿ ಏನಿದೆ?

ಬಿಟ್ ಕಾಯಿನ್ ಕೇಸ್: ಹ್ಯಾಕರ್ ಶ್ರೀಕಿ ಬಗ್ಗೆ ಮೋದಿಗೆ ಕಂಪ್ಲೈಂಟ್; ದೂರಿನಲ್ಲಿ ಏನಿದೆ?

Please login to join discussion

Recent News

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
Top Story

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
November 18, 2025
Top Story

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

by ಪ್ರತಿಧ್ವನಿ
November 18, 2025
Top Story

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

by ಪ್ರತಿಧ್ವನಿ
November 18, 2025
Top Story

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
November 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada