ಜುಲೈ 7 ರಂದು ವಸತಿ ಶಾಲೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್ ಪೊನ್ನಣ್ಣ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭ ಶಾಲೆಯ ಅಡುಗೆ ಕೋಣೆಯಲ್ಲಿ ನೊಣಗಳಿಂದ ಕೂಡಿರುವುದು,ಶಾಲೆಯ ಕಿಟಕಿಗಳು ಪಾಳುಬಿದ್ದಿರುವುದು,ಶೌಚಾಲಯದಲ್ಲಿ ಶುಚಿತ್ವ ಕಾಪಾಡದೇ ಇರುವುದು,ವಿದ್ಯಾರ್ಥಿಗಳು ಬಳಸುವ ಹಾಸಿಗೆಗಳು ಯೋಗ್ಯವಾಗಿಲ್ಲದಿದ್ದರೂ ಶಾಲೆಯಲ್ಲಿರುವ ಹೊಸ ಹಾಸಿಗೆಯನ್ನು ವಿತರಣೆ ಮಾಡದೇ ಇರುವುದು,ದಾಸ್ತಾನು/ವಿತರಣೆ ನಿರ್ವಹಣೆ ಮಾಡದೇ ಇರುವುದು,ಸಹದ್ಯೋಗಿಗಳೊಂದಿಗೆ ಉತ್ತಮ ಬಾಂದವ್ಯ ಕೊರತೆ ಇರುವುದು ಕಂಡುಬಂದಿತ್ತು,
ಕಳೆದ 6 ವರ್ಷಗಳಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಾಂಶುಪಾಲರು,ಶಾಲೆಯ ನ್ಯೂನ್ಯತೆಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರದೇ ಸಮಸ್ಯೆಗಳನ್ನು ಬಗೆಹರಿಸದೇ ನಿರ್ಲಕ್ಷ್ಯತೆ ವಹಿಸಿ ಲಕ್ಷಾಂತರ ಹಣ ಪೋಲಾಗುವಂತೆ ಮಾಡಿರುವುದು ಸಾಸಕರ ಗಮನಕ್ಕೆ ಬಂದಿತ್ತು, ಕತ೯ವ್ಯ ಲೋಪದ ಹಿನ್ನಲೆಯಲ್ಲಿ ಇದೀಗ ವಿರಾಜಪೇಟೆ ಅರ್ಜಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಮಮತ ಅವರನ್ನು ಕತ೯ವ್ಯದಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ,