ಬಿಗ್ ಬಾಸ್ ಮನೆಯಲ್ಲಿ ಎರಡು ಚಾನೆಲ್ಗಳ ನಡುವೆ ಕಾಂಪಿಟೇಶನ್ ಜೋರಾಗಿಯೇ ನಡಿತಾ ಇದೆ ಅದರಲ್ಲೂ ನಿನ್ನೆ ನೀಡಿದ ಸವಾಲು ಟಾಸ್ಕ್ ನಲ್ಲಿ ಕಂಟೆಸ್ಟೆಂಟ್ಗಳು ಸವಾಲನ್ನು ಸ್ವೀಕರಿಸಿದ್ದಾರೆ. ಈ ಸವಾಲು ನೀಡುವ ಟಾಸ್ಕ್ ನಲ್ಲಿ ಪಾಪ ರಜತ್ ಅವರು ತಮ್ಮ ಕೂದಲನ್ನು ಅಂದ್ರೆ ತಲೆಯನ್ನ ಬೋಳಿಸಿದ್ದಾರೆ. ಇನ್ನೊಂದೆಡೆ ಗೌತಮಿ ಜಾದವ್ ಹಾಗಲಕಾಯಿ ಮತ್ತು ಮೆಣಸಿನಕಾಯಿ ತಿಂದು ಕಣ್ಣೀರಿಟ್ಟಿದ್ದಾರೆ. ಎರಡು ತಂಡಗಳು ಕೂಡ ನಾವೇನು ಕಮ್ಮಿ ಇಲ್ಲ ಎಂಬಂತೆ ಪರ್ಫಾರ್ಮ್ ಮಾಡ್ತಿದ್ದಾರೆ.
ಇನ್ನೂ ಬಿಗ್ ಬಾಸ್ನ ಇಂದಿನ ಪ್ರೊಮೋ ಅವರ ಬಿದ್ದಿದ್ದು ನಾಮಿನೇಷನ್ ಪ್ರಕ್ರಿಯೆ ಕೂಡ ಜೋರಾಗಿಯೇ ನಡಿತಾ ಇದೆ. ಪ್ರತಿವಾರಕ್ಕೆ ಹೋಲಿಸಿದರೆ ಈ ವಾರದ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿದ್ದು. ಯಾರನ್ನು ನಾಮಿನೇಟ್ ಎಂದುಕೊಂಡಿರ್ತೀರ ಅವರ ಹೆಸರನ್ನ ಆಯ್ಕೆ ಮಾಡಿ ಕಾರಣವನ್ನು ನೀಡಿ ಅವರ ಬೆನ್ನಿಗೆ ಚೂರಿಯನ್ನ ಹಾಕಬೇಕಿರುತ್ತದೆ. ಇಲ್ಲಿ ಅತಿ ಹೆಚ್ಚು ಚೂರಿ ಮಂಜು ಅವರ ಬೆನ್ನಿಗೆ ಹಾಕಲಾಗಿರುತ್ತದೆ
ತಮ್ಮ ತಂಡದಲ್ಲೇ ಇದ್ದುಕೊಂಡು ನಮಗೆ ಬೆನ್ನಿಗೆ ಚೂರಿ ಹಾಕಿದ್ದು ಎಂದು ಮಂಜು ಅವರು ಐಶ್ವರ್ಯ ಮೇಲೆ ರೇಗಾಡುತ್ತಾರೆ ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ.
ಇನ್ನು ಸವಾಲಿನ ಟಾಸ್ಕ್ ಇವತ್ತು ಮುಂದುವರೆಯಲಿದ್ದು ಮತ್ತೊಂದು ಪ್ರೊಮೋ ಹೊರ ಬಿದ್ದಿದೆ ತ್ರಿವಿಕ್ರಮ್ ಅವರಿಗೆ ಹನುಮಂತು ತಲೆ ಮೀಸೆ ಹಾಗೂ ಗಡ್ಡವನ್ನ ಬೋಳಿಸಬೇಕು ಎಂಬ ಸವಾಲನ್ನು ನೀಡುತ್ತಾರೆ. ಈ ಸವಾಲನ್ನು ಚೇಂಜ್ ಮಾಡಬೇಕು ಎಂದಾಗ ಐಶ್ವರ್ಯ ಅವರ ಬೆನ್ನಿನ ಮೇಲೆ ಭವ್ಯ ಅವ್ರು ನಿಂತುಕೊಳ್ಳಬೇಕು ಎಂದು ಹೇಳುತ್ತಾರೆ. ಇದೇ ವಿಚಾರವಾಗಿ ಎರಡು ಟೀಮ್ಗಳ ನಡುವೆ ಜಗಳ ನಡೆಯುತ್ತದೆ.
ಬಿಗ್ ಬಾಸ್ ನೀಡಿದ ಎಲ್ಲಾ ಟಾಸ್ ಗಳಲ್ಲೂ ಇಲ್ಲಿಯವರೆಗೂ ಗೋಲ್ಡ್ ಸುರೇಶ್ ಅವರ ತಂಡ ಹೆಚ್ಚು ಅಂಕಗಳನ್ನ ಪಡೆದಿದೆ.