ವಿದೇಶಗಳಲ್ಲಿ ಕಾಣಿಸಿಕೊಂಡು ಇದೀಗ ಭಾರತದಲ್ಲಿ ತನ್ನ ಅಟ್ಟಹಾಸ ಮೆರೆಯಲು ಸಜ್ಜಾಗುತ್ತಿರುವ ಮಂಕಿಪಾಕ್ಸ್/ಮಂಗನ ಸಿಡುಬು ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಚ್ಚರಿಯ ಮಾಹಿತಯೊಂದು ಬಿಡುಗಡೆ ಮಾಡಿದೆ.
ಕಳೆದ ಶನಿವಾರ ಮಂಕಿಪಾಕ್ಸ್ ತುರ್ತು ಸ್ಥಿತಿ ಘೋಷಿಸುವಂತಹ ಖಾಯಿಲೆಯಲ್ಲ ಎಂದು WHO ಹೇಳಿತ್ತು. ಆದರೆ, ಈಗ ಮಂಕಿಪಾಕ್ಸ್ ಬೇರೆ ರಾಷ್ಟ್ರಗಳಲ್ಲಿ ಸದ್ದು ಮಾಡುತ್ತಿದ್ದು ಈ ನಿರ್ಧಾರವನ್ನ ಮತ್ತಿಮ್ಮೆ ಪರಿಶೀಲಿಸಬೇಕಿದೆ ಎಂದು ಆರೋಗ್ಯ ಸಂಸ್ಥೆ ಹೇಳಿತ್ತು.
ಸುಮಾರು 50ತಕ್ಕು ಹೆಚ್ಚು ರಾಷ್ಟ್ರಗಳಲ್ಲಿ 3,200ಕ್ಕಿಂತ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇಲ್ಲಿಯವರೆಗೂ ಒಬ್ಬರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಮಾಹಿತಿ ನೀಡಿದ್ದು ಮಂಕಿಪಾಕ್ಸ್ ಕಂಡುಬಂದವರಲ್ಲಿ ಬಹುತೇಕರು ಮಧ್ಯಮಯಸ್ಕ ಪುರುಷರಗಿದ್ದಾರೆ ಎಂದು ತಿಳಿದು ಬಂದಿದೆ.
ಇದರ ವಿಚಿತ್ರ ಸಂಗತಿಯೆನೆಂದರೆ ಖಾಯಿಲೆ ಕಾಣಿಸಿಕೊಂಡ ಐವರಲ್ಲಿ ಮೂವರು ಸಲಿಂಗಿಗಳು ಹಾಗೂ ಪುರುಷರ ಜೊತೆ ಲೈಂಗಿಕ ಸಂಪರ್ಕ ಹೊಂದಿದವರು ಎಂದು WHO ಟ್ವೀಟ್ ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿ ಸಂಸ್ಥೆ NDTV ವರದಿ ಮಾಡಿದೆ.
ಪಶ್ಚಿಮ ಹಾಗೂ ಮಧ್ಯ ಆಫ್ರಿಕಾ ಭಾಗದಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಮೇ ತಿಂಗಳಿನಿಂದ ಈಚೆಗೆ ಬೇರೆ ದೇಶಗಳಲ್ಲಿಯೂ ಸಹ ಪ್ರಕರಣಗಳು ವರದಿಯಾಗುತ್ತಿದೆ.