ಪ್ರಧಾನಿ ನರೇಂದ್ರ ಮೋದಿ (Narendra modi) ವಿರುದ್ಧ ವಾರಾಣಸಿಯಿಂದ (Varanasi) ಕಾಮಿಡಿಯನ್ ಶ್ಯಾಮ್ ರಂಗೀಲಾ (Shyam rangeela) ಅಖಾಡಕ್ಕಿಳಿದಿದ್ರು. ವಾರಾಣಸಿ ಕ್ಷೇತ್ರದಿಂದ ನಾಮಪತ್ರವನ್ನೂ ಸಲ್ಲಿಸಿದ್ರು. ಆದ್ರೀಗ ಶ್ಯಾಮ್ ರಂಗೀಲಾ ನಾಮಪತ್ರ (Nomination) ತಿರಸ್ಕೃತಗೊಂಡಿದೆ.

ಮೋದಿ (Modi), ರಾಹುಲ್ ಗಾಂಧಿ (Rahul gandhi) ಸೇರಿದಂತೆ ಹಲವರ ಧ್ವನಿ ಅನುಕರಿಸಿ ಭಾರಿ ಜನಪ್ರಿಯತೆ ಗಳಿಸಿರುವ ಶ್ಯಾಮ್ ರಂಗೀಲಾ, ಈ ಬಾರಿ ಮೋದಿ ವಿರುದ್ಧವೇ ತೊಡೆ ತಟ್ಟಿದ್ರು. ವಿಪಕ್ಷಗಳ ನಾಯಕರು, ಇಂಡಿಯಾ (INDIA) ಒಕ್ಕೂಟ ಬೆಂಬಲಿತ ನಾಯಕರೂ ಶ್ಯಾಮ್ ರಂಗೀಲಾಗೆ ಬೆಂಬಲ ನೀಡಿದ್ರು. ಹೀಗಾಗಿ ಶ್ಯಾಮ್ ರಂಗೀಲಾ ತಿರಸ್ಕಾರಗೊಂಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಕುರಿತು ಪ್ರತಿಕ್ರಿಯೆ ನೀಡಿರುವ ಶ್ಯಾಮ್ ರಂಗೀಲಾ, ವಿನಾಕಾರಣ ನಾಮಪತ್ರವನ್ನು ತಿರಸ್ಕಾರ ಮಾಡಲಾಗಿದೆ. ನಾಮಪತ್ರ ಸ್ವೀಕರಿಸುವ ವೇಳೆ ಯಾವುದೇ ಸೂಚನೆ ನೀಡಲಿಲ್ಲ. ಇದೀಗ ಸಮಯ ಮುಗಿದ ಬಳಿಕ ನಾಮಪತ್ರ ತಿರಸ್ಕರಿಸಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ.






