ಸೋಮವಾರ ನಡೆದ ಜಾಗತಿಕ ಎಕನಾಮಿಕ್ ಫಾರಂ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಭಾಷಣ ಮಾಡುತ್ತಿದ್ದ ನಡುವೆ ಟೆಲಿಪ್ರಾಂಪ್ಟರ್ ಕೊಟ್ಟಿದೆ. ಏಕಾಏಕಿ ಟೆಲಿಪ್ರಾಂಪ್ಟರ್ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡದ ಕಾರಣ ಪ್ರಧಾನಮಂತ್ರಿ ಮಾತನಾಡಲು ತಡವರಿಸಿದ್ದು, ಭಾಷಣವನ್ನು ನಿಲ್ಲಿಸಿದ್ದಾರೆ.
ಇದೀಗ ಪ್ರತಿಪಕ್ಷಗಳು ನರೇಂದ್ರ ಮೋದಿ ಮಾತನಾಡಲು ತಡವರಿಸುವ ವಿಡಿಯೋ ತುಣುಕನ್ನು ಸಾಮಾಜಿಕ ಜಾಲಾತಣದಲ್ಲಿ ವ್ಯಾಪಕ ವೈರಲ್ ಮಾಡುತ್ತಿದ್ದು, ಟೆಲಿಪ್ರಾಂಪ್ಟರ್ ಕೈಕೊಟ್ಟರೆ ಪ್ರಧಾನಿಗೆ ಮಾತನಾಡಲು ಬರುವುದಿಲ್ಲ ಎಂದು ಟ್ರಾಲ್ ಮಾಡುತ್ತಿದ್ದಾರೆ.
ನಿರರ್ಗಳ ಮಾತುಗಾರ, ಭಾಷಣಕಾರ ಎಂಬ ಪ್ರಧಾನಿ ಮೋದಿಯ ವಿಶೇಷಣವನ್ನು ಮುಂದಿಟ್ಟು, ಜಾಗತಿಕ ಸಭೆಯಲ್ಲಿ ಮಾತನಾಡಲು ತಡವರಿಸಿದನ್ನು ವ್ಯಂಗ್ಯವಾಡಲಾಗುತ್ತಿದೆ. ಟೆಲಿಪ್ರಾಂಪ್ಟರ್ ಒಂದು ಯಂತ್ರ. ಪಾರದರ್ಶಕ ಪರದೆಯಲ್ಲಿ ಭಾಷಣ ಮಾಡಲಿರುವ ವಿಷಯವನ್ನು ಭಾಷಣ ಮಾಡುವವರಿಗೆ ಮಾತ್ರ ಕಾಣುವಂತೆ ಇಡಲಾಗುತ್ತದೆ. ಇದನ್ನು ಬಳಸಿ ಮಾಡುತ್ತಿದ್ದ ಭಾಷಣದ ನಡುವೆ ಯಂತ್ರ ತಾಂತ್ರಿಕ ದೋಷದಿಂದ ಕೈಕೊಟ್ಟಿದೆ. ಒಂದು ಸಾಧಾರಣ ಯಂತ್ರದ ವೈಫಲ್ಯವು ಪ್ರಮುಖ ರಾಜಕಾರಣಿಗಳು ಚರ್ಚಿಸುವಷ್ಟರ ಮಟ್ಟಿಗಿನ ರಾಜಕೀಯ ವಿದ್ಯಾಮಾನವಾಗಿಬಿಟ್ಟಿದೆ.
ರಾಹುಲ್ ಗಾಂಧಿಯ ಭಾಷಣವನ್ನು ಇದುವರೆಗೆ ಟ್ರಾಲ್ ಮಾಡುತ್ತಿದ್ದ ಮೋದಿ ಭಕ್ತರು ಇಂದು ಮೋದಿ ಭಾಷಣ ಅರ್ಧಕ್ಕೆ ಮೊಟಕುಗೊಂಡಿರುವುದರಿಂದ ಕಕ್ಕಾಬಿಕ್ಕಿಯಾಗಿದ್ದಾರೆ. ಕಾಂಗ್ರೆಸ್ ಐಟಿಸೆಲ್ ಮಾಡುತ್ತಿರುವ ಟ್ರಾಲ್ಗಳಿಗೆ ಉತ್ತರಿಸಲು ಸಾಧ್ಯವಾಗದೆ ಮೌನವಾಗಿದ್ದಾರೆ.
ಅದಾಗ್ಯೂ, ಅತಿರೇಕದಲ್ಲಿ ಸಾಗಿರುವ ಕಾಂಗ್ರೆಸ್ನ ಐಟಿ ಸೆಲ್ನೆನಪಿಡಬೇಕಾದ ಸಂಗತಿಯಿದೆ. ಅಂತರಾಷ್ಟ್ರೀಯ ಕಾರ್ಯಕ್ರಮದ ಸಮಯದಲ್ಲಿ ಟೆಲಿಪ್ರೊಂಪ್ಟರ್ ವೈಫಲ್ಯವು ಪ್ರಧಾನ ಮಂತ್ರಿಯ ʼಅತ್ಯುತ್ತಮ ವಾಗ್ಮಿʼ ಎಂಬ ಖ್ಯಾತಿಗೆ ಧಕ್ಕೆ ತರುವುದಿಲ್ಲ. 2019 ರ ಚುನಾವಣೆಯಲ್ಲಿ ಮೋದಿ ಭ್ರಷ್ಟ ಎಂದು ರಾಷ್ಟ್ರಕ್ಕೆ ಮನವರಿಕೆ ಮಾಡಲು ಅದರ ‘ಚೌಕಿದಾರ್ ಚೋರ್ ಹೈ’ ಅಭಿಯಾನದಂತೆಯೇ ಆಗಬಹುದು.
ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನ ವ್ಯಾಪಕವಾಯಿತೇನೋ ಹೌದು. ಆದರೆ, ಮೋದಿ ಭ್ರಷ್ಟಾಚಾರಿ ಎಂದು ಜನರನ್ನು ವ್ಯಾಪಕವಾಗಿ ನಂಬಿಸಲು ಸಾಧ್ಯವಾಗಿಸಿಲ್ಲ. ಪ್ರಧಾನಿ ಮೋದಿಯನ್ನು ಇಷ್ಟಪಡಲಿ ಅಥವಾ ಪಡದಿರಲಿ, ಮೋದಿ ಸಂಸತ್ತಿನಲ್ಲಿ ಮಾಡಿದ ಭಾಷಣಗಳನ್ನು ಗಮನಿಸಿದರೆ ಮೋದಿ ಎಂತಹಾ ಭಾಷಣಗಾರ ಎಂಬುವುದು ಮನದಟ್ಟಾಗುತ್ತದೆ. ಇದುವರೆಗೂ ಮೋದಿ ಕೇವಲ ಮಾತುಗಾರ ಮಾತ್ರ ಎನ್ನುತ್ತಾ ಏಕಾಏಕಿ ಅವರು ಮಾತುಗಾರ ಕೂಡಾ ಅಲ್ಲ ವೈರುಧ್ಯವಾಗುತ್ತದೆ. ಯಾಕೆಂದರೆ, ಮೋದಿ ಎಂತಹಾ ಭಾಷಣಕಾರ ಎನ್ನುವುದು ಸಾಮಾನ್ಯ ಭಾರತೀಯರಿಗೂ ಗೊತ್ತಿದೆ. ಹಾಗಾಗಿ ಕಾಂಗ್ರೆಸ್ ಐಟಿ ಸೆಲ್ ಹಾಗೂ ನಾಯಕರು ಮಾಡುತ್ತಿರುವ ಅಪಪ್ರಚಾರ ಮೋದಿಗೆ ಧಕ್ಕೆ ಮಾಡುವುದಿಲ್ಲ. ಇದನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಬೇಕು.
ಕ್ಲೀನ್ ಇಮೇಜ್ ಅಥವಾ ಅದ್ಭುತ ವಾಗ್ಮಿ ಎನ್ನುವುದು ಮೋದಿಯವರ ಪ್ರಮುಖ ಶಕ್ತಿಗಳು. ಪ್ರತಿಪಕ್ಷಗಳು ಮೋದಿ ದೌರ್ಬಲ್ಯಗಳನ್ನು ಗುರುತಿಸಬೇಕು, ಮತ್ತು ಅವುಗಳ ಮೇಲೆ ಜನರ ಗಮನ ಕೇಂದ್ರೀಕರಿಸಬೇಕು. ಅಲ್ಲದೆ, ತಾಂತ್ರಿಕ ದೋಷದಿಂದ ಪ್ರಧಾನಿ ಭಾಷಣಕ್ಕೆ ಅಡ್ಡಿಯಾಗಿರುವುದನ್ನು ಬಳಸಿ ದಾಳಿ ಮಾಡಿರುವುದು ರಾಹುಲ್ ಗಾಂಧಿಗೆ ತಿರುಗಿ ಬೀಳುತ್ತದೆ.
ಟೆಲಿಪ್ರಾಂಪ್ಟರ್ ತಾಂತ್ರಿಕ ದೋಷಗೊಂಡಾಗ ಮೋದಿಯವರು ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿದ್ದು ಸಂಪೂರ್ಣವಾಗಿ ಸರಿ. ಯಾಕೆಂದರೆ, ಜಾಗತಿಕ ವೇದಿಕೆಗಳಲ್ಲಿ ಮಾಡುವ ರಾಜತಾಂತ್ರಿಕ ಭಾಷಣಗಳು, ವಾಕ್ಚಾತುರ್ಯದ ಉಗಿಯಲ್ಲಿ ನಡೆಯುವ ಚುನಾವಣಾ ಭಾಷಣಗಳಿಗಿಂತ ಭಿನ್ನವಾಗಿರುತ್ತದೆ. ರಾಜತಾಂತ್ರಿಕ ಭಾಷಣಗಳಿಗೆ ಅಂಕಿ ಅಂಶಗಳ ನಿಖರತೆಯ ಅಗತ್ಯವಿರುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬ ವಿಶ್ವ ನಾಯಕರೂ ಟೆಲಿಪ್ರಾಂಪ್ಟರ್ ಅನ್ನು ಅವಲಂಬಿಸಿರುತ್ತಾರೆ.
ಅಮೆರಿಕಾದ ನೇತಾರರನ್ನೇ ನೋಡಿದರೂ, ಟೆಲಿಪ್ರಾಂಪ್ಟರ್ ಬಳಸಿ ಪೇಚಿಗೆ ಸಿಕ್ಕ ಹಲವಾರು ಉದಾಹರಣೆಗಳಿವೆ. ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಅಮೆರಿಕಾದಲ್ಲಿ ಅಧ್ಯಕ್ಷರುಗಳು ಟೆಲಿಪ್ರಾಂಪ್ಟರ್ ಬಳಸುತ್ತಿದ್ದಾರೆ. ಅಮೆರಿಕಾದಲ್ಲಿ 1952 ರಲ್ಲಿ ಮೊದಮೊದಲು ಅಧ್ಯಕ್ಷೀಯ ಚುನಾವಣಾ ಭಾಷಣಗಳಲ್ಲಿ ಟೆಲಿಪ್ರಾಂಪ್ಟರ್ ಬಳಸಲಾಯಿತು. ನಂತರ ಹಲವು ಅಧ್ಯಕ್ಷರು ಟೆಲಿಪ್ರಾಂಪ್ಟರ್ ಬಳಸಿ ಭಾಷಣ ಮಾಡಿದ್ದಾರೆ. ರೊನಾಲ್ಡ್ ರೇಗನ್, ಬಿಲ್ ಕ್ಲಿಂಟನ್, ಜಾರ್ಜ್ ಬುಷ್, ಇತ್ತೀಚಿನ ಒಬಾಮ, ಟ್ರಂಪ್ ಹಾಗೂ ಜೋ ಬಿಡೆನ್ ಕೂಡಾ ಟೆಲಿಪ್ರಾಂಪ್ಟರ್ ಎಡವಟ್ಟಿನಿಂದ ತಡವರಿಸಿದ್ದಾರೆ. ಅತ್ಯುತ್ತಮ ವಾಗ್ಮಿಯಾಗಿರುವ ಒಬಾಮಾ ಅವರು ಟೆಲಿಪ್ರಾಂಪ್ಟರ್ ಬಳಸಿ ತಡವರಿಸಿದ್ದನ್ನು ರಿಪಬ್ಲಿಕನ್ಸ್ ಹಲವು ಬಾರಿ ಗೇಲಿ ಮಾಡಿದ್ದಾರೆ. ಆದರೆ, ಒಬಾಮಾ ಅವರಿಗೆ ಇದು ಯಾವ ಧಕ್ಕೆಯನ್ನೂ ಉಂಟು ಮಾಡಿಲ್ಲ ಎನ್ನುವುದ ಸತ್ಯ.
ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಐಟಿ ಸೆಲ್, ಭಾಷಣ ಮೊಟಕುಗೊಳಿಸಿದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಮಾಡುವ ಟ್ರಾಲ್‌ಗಳು ಯಶಸ್ಸು ಕಾಣುವ ಸಾಧ್ಯತೆ ಇಲ್ಲ. ಅದೂ ಅಲ್ಲದೆ, ಮೋದಿ ಎಂತಹಾ ಭಾಷಣಕಾರ ಎಂಬುವುದು ಚುನಾವಣಾ ಪ್ರಚಾರದ ಮೈದಾನಗಳಲ್ಲಿ ಸಾಬೀತಾಗಿದೆ. ಇದನ್ನೆಲ್ಲಾ ಗಮನದಲ್ಲಿಟ್ಟು ಕಾಂಗ್ರೆಸ್ ಮೋದಿ ವಿರುದ್ಧ ಬಾಣ ಹೂಡಬೇಕು.