ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕೃಷಿ ಜಗತ್ತಿಗೆ ಬಹುದೊಡ್ಡ ಉಡುಗೊರೆಯೊಂದನ್ನು ನೀಡಿರುವುದಾಗಿ ಕೇಂದ್ರ ಬಿಜೆಪಿ ಸರ್ಕಾರ ತಿಳಿಸಿದೆ. ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ 35 ಬಗೆಯ ಹೊಸ ಬೆಳೆಗಳನ್ನು ದೇಶಕ್ಕೆ ಸಮರ್ಪಿಸಿದರು. ಇದರಿಂದ ದೇಶದ ರೈತರಿಗೆ ಹಲವು ರೀತಿಯಲ್ಲಿ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.
ದೇಶದ ಅನ್ನದಾತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿಶೇಷ ಕೊಡುಗೆ ನೀಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಹಾಗಾಗಿಯೇ 35 ಬೆಳೆಗಳ ತಳಿಯನ್ನ ರಾಷ್ಟ್ರಕ್ಕೆ ಸಮರ್ಪಿಸಿದ್ದೇನೆ ಎಂದಿದ್ದಾರೆ. ಇವು ಹವಾಮಾನಗಳ ವೈಪರಿತ್ಯಗಳನ್ನೂ ಮೆಟ್ಟಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿರುವ ತಳಿಗಳು. ಅಲ್ಲದೇ ಉತ್ತಮ ಪೌಷ್ಟಿಕಾಂಶಗಳನ್ನ ಒದಗಿಸುವ ಲಕ್ಷಣ ಹೊಂದಿವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದ ರೈತರಿಗೆ ಅರ್ಪಿಸಿದ ಈ 35 ಹೊಸ ತರಕಾರಿ ಬೆಳೆಗಳ ತಳಿಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಭಿವೃದ್ಧಿಪಡಿಸಿದೆ. ಈ ಕುರಿತು ಮಾತಾಡಿದ ಮೋದಿ, 21ನೇ ಶತಮಾನದ ಭಾರತವು ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನ ಬಳಸುವುದು ಮುಖ್ಯವಾಗಿದೆ. ಅದಕ್ಕಾಗಿ ನಾವು ಒಂದೊಂದೇ ಹೆಜ್ಜೆಯನ್ನ ಇಡುತ್ತಿದ್ದೇವೆ. ದೇಶದ ಆಧುನಿಕ ಚಿಂತನೆಯನ್ನ ರೈತರಿಗೆ ಅರ್ಪಿಸಲಾಗುತ್ತಿದೆ. ರೈತರಿಗೆ ಬೇಕಾಗಿರುವ ಪ್ರತಿಯೊಂದು ಅಗತ್ಯತೆಯನ್ನೂ ನೀಡೋದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.
35 ಹೊಸ ತಳಿಗಳ ವಿಶೇಷತೆ ಏನು?
ವಿಶೇಷ ಗುಣಲಕ್ಷಣಗಳ 35 ತಳಿಗಳ ಹೊಸ ಬೆಳೆಗಳು ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಪೋಷಕಾಂಶವನ್ನು ಹೊಂದಿದೆ. ಈ 35 ತಳಿಗಳನ್ನು ICMR 2021ರಲ್ಲಿ ಅಭಿವೃದ್ಧಿಸಿದೆ ಬರಪರಿಸ್ಥಿತಿಯಲ್ಲೂ ಬೆಳೆಯಬಹುದಾದಂತ ಕಡಲೆ ಬೆಳೆ ಮುದುಡುವ ಮತ್ತು ಬರಡು ನಿರೋಧಕ ಬಟಾಣಿ ಬೆಳೆ ಬೇಗನೇ ಕೊಯ್ಲಿಗೆ ಬರುವಂತಹ ಸೊಯಾಬಿನ್ ಬೆಳೆ
ಕಾಯಿಲೆ ನಿರೋಧಕ ಗುಣವನ್ನು ಹೊಂದಿರುವ ಅಕ್ಕಿ ಜೈವಿಕ ಬಲವರ್ಧಿತ ತಳಿಗಳ ಗೋಧಿ, ರಾಗಿ, ಜೋಳ ಇತ್ಯಾದಿ ಅಪೌಷ್ಟಿಕತೆ ನಿವಾರಣೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿದೆ ವಿಶೇಷ ಗುಣಲಕ್ಷಣಗಳಿರುವ 35 ತಳಿಗಳ ಹೊಸ ಬೆಳೆಗಳನ್ನು ಪರಿಚಯಿಸಲಾಗಿದೆ. ಈ ಬೆಳೆಗಳು ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಪೋಷಕಾಂಶ ಹೊಂದಿವೆ. ಈ 35 ತಳಿಗಳನ್ನು ICMR 2021ರಲ್ಲಿ ಅಭಿವೃದ್ಧಿಸಿದೆ. ಬರಪರಿಸ್ಥಿತಿಯಲ್ಲೂ ಬೆಳೆಯಬಹುದಾದಂತ ಕಡಲೆ, ಮುದುಡುವ ಮತ್ತು ಬರಡು ನಿರೋಧಕ ಬಟಾಣಿ, ಬೇಗನೇ ಕೊಯ್ಲಿಗೆ ಬರುವಂತಹ ಸೊಯಾಬಿನ್ ಬೆಳೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಇನ್ನು, ಕಾಯಿಲೆ ನಿರೋಧಕ ಗುಣವನ್ನು ಹೊಂದಿರುವ ಅಕ್ಕಿ ಹಾಗೂ ಜೈವಿಕ ಬಲವರ್ಧಿತ ತಳಿಗಳ ಗೋಧಿ, ರಾಗಿ, ಜೋಳ ಇತ್ಯಾದಿ ಬೆಳೆಗಳನ್ನು ಸಿದ್ಧಪಡಿಸಲಾಗಿದೆ. ಇದಲ್ಲದೆ ಅಪೌಷ್ಟಿಕತೆ ನಿವಾರಣೆ ಗಮನದಲ್ಲಿಟ್ಟುಕೊಂಡು ಈ ಬೆಳೆಗಳನ್ನು ಅಭಿವೃದ್ಧಿಪಡಿಸಿದೆ.
ಪ್ರಧಾನಿ ಮೋದಿಯವರಿಂದ ಕೃಷಿ ಕ್ಷೇತ್ರಕ್ಕೆ ಬಲ ಸಿಕ್ಕಂತಾಗಿದೆ. ಈ 35 ತಳಿಗಳ ಹೊಸ ಬೆಳೆಗಳು ಭಾರತೀಯ ರೈತರ ಸಂತಸಕ್ಕೆ ಕಾರಣವಾಗಿವೆ. ಈ ಯೋಜನೆ ಅನ್ನದಾತರನ್ನು ಸಬಲರನ್ನಾಗಿಸುವ ನಿರೀಕ್ಷೆಯೂ ಇದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಹೇಳಿದೆ.