ಅಫ್ಘಾನ್ನಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ ಬೆಳವಣಿಗೆ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಹಾಗೂ ಶಾಂತಿಗೆ ಭಂಗ ತರೋ ಆತಂಕವಿದೆ. ಹೀಗಾಗಿ ಭಾರತ ತೆಗೆದುಕೊಂಡ NSA ಸಭೆಯ ದಿಟ್ಟ ಕ್ರಮ ತಾಲಿಬಾನಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದಂತಾಗಿದೆ. ಇದರ ನಡುವೆ ಪ್ರಧಾನಿ ಮೋದಿಯೂ ತಾಲಿಬಾನ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಹಾಗೂ ಶಾಂತಿಗೆ ಭಂಗ ತರೋ ತಾಲಿಬಾನ್ ಆತಂಕಕ್ಕೆ ಮೋದಿ 4 ಸೂತ್ರ ಜಪಿಸಿದ್ದಾರೆ. 8 ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಮೋದಿ ಕೊಟ್ಟ ಸಲಹೆ ಪಾಲನೆಯಾಗಿದ್ದೇ ಆದಲ್ಲಿ, ತಾಲಿಬಾನ್ ಆಡಳಿತದಲ್ಲೂ ಅಫ್ಘಾನ್ ಶಾಂತಿಯ ತಂಗಾಳಿ ಸೂಸುತ್ತಂತೆ.
ತಾಲಿಬಾನ್ ಆಡಳಿತದಿಂದ ಅಫ್ಘಾನಿಸ್ತಾನದಲ್ಲಾಗುತ್ತಿರುವ ಬೆಳವಣಿಗೆ ಹಾಗೂ ಮುಂದಾಗಬಹುದಾದ ಜಾಗತಿಕ ಆತಂಕದ ಬಗ್ಗೆ ಭಾರತ ಅಲರ್ಟ್ ಆಗಿದೆ. ಅದ್ರಲ್ಲೂ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಹಾಗೂ ಶಾಂತಿಗೆ ತಾಲಿಬಾನ್ನಿಂದ ಭಂಗ ಆಗಬಾರದು ಅಂತ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ.
ಅದೇ 8 ರಾಷ್ಟ್ರಗಳ NSA ಸಭೆ.. ಇತ್ತೀಚೆಗೆ ದೆಹಲಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದಲ್ಲಿ ನಡೆದ ಮಹತ್ವದ ಸಮಾವೇಶದಲ್ಲಿ ರಷ್ಯಾ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೆಕಿಸ್ತಾನ್ ತುರ್ಕ್ಮೆನಿಸ್ತಾನ್ ಹಾಗೂ ತಜಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಿದ್ರು.
ಸಭೆಯಲ್ಲಿ ಅಫ್ಘಾನ್ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ ಮಹತ್ವ ನಿರ್ಣಯ ಕೈಗೊಳ್ಳಲಾಯ್ತು. ಇದಾದ ಬಳಿಕ 8 ರಾಷ್ಟ್ರಗಳ ಭದ್ರತಾ ಸಲಹೆಗಾರರನ್ನ ಭೇಟಿಯಾದ ಪ್ರಧಾನಿ ಮೋದಿ 4 ಪ್ರಮುಖ ಅಂಶಗಳ ಬಗ್ಗೆ ಗಮನ ಸೆಳೆದರು.
ಭಾರತ ಆತಿಥ್ಯ ವಹಿಸಿದ್ದ ಇರಾನ್, ಕಜಕಿಸ್ತಾನ್, ರಷ್ಯಾ, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ದೇಶಗಳ ಉನ್ನತ ಭದ್ರತಾಧಿಕಾರಿಗಳ ಸಭೆಯಲ್ಲಿ ಮೋದಿ 4 ಪ್ರಮುಖ ಅಂಶಗಳನ್ನು ಬಗ್ಗೆ ಗಮನ ಸೆಳೆದಿದ್ದಾರೆ. ಮೋದಿ ಹೇಳಿದ ಆ 4 ಮಾತುಗಳು ತಾಲಿಬಾನ್ ಆಡಳಿತದ ಅಫ್ಘಾನ್ನಲ್ಲಿ ಬದಲಾವಣೆ ತರಲು ಮುನ್ನುಡಿ ಬರೆದಂತಿದೆ ಎನ್ನಲಾಗಿದೆ.
ಮೋದಿ ಕೊಟ್ಟ ನಾಲ್ಕು ಸಲಹೆಗಳೇನು?
ಅಫ್ಘಾನ್ನಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ ಆಗಬೇಕು
ಭಯೋತ್ಪಾದಕ ಗುಂಪುಗಳಿಗೆ ಅಫ್ಘಾನ್ ನೆಲ ಬಳಕೆ ಆಗಬಾರದು
ಡ್ರಗ್ಸ್, ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಬಗ್ಗೆ ಕಟ್ಟುನಿಟ್ಟಿನ ಕ್ರಮ ಆಗಬೇಕು
ಮಾನವ ಹಕ್ಕು ರಕ್ಷಣೆ ಆಗಬೇಕು, ಅಫ್ಘಾನ್ ಯಥಾಸ್ಥಿತಿಗೆ ಬರಬೇಕು
ಅಫ್ಘಾನ್ನಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ ಆಗಬೇಕು. ಭಯೋತ್ಪಾದಕ ಗುಂಪುಗಳಿಗೆ ಅಫ್ಘಾನ್ ನೆಲ ಬಳಕೆ ಆಗಬಾರದು. ಡ್ರಗ್ಸ್ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಬಗ್ಗೆ ಕಟ್ಟುನಿಟ್ಟಿನ ಕ್ರಮ ಆಗಬೇಕು ಹಾಗೂ ಮಾನವ ಹಕ್ಕು ರಕ್ಷಣೆ ಆಗಬೇಕು ಮತ್ತು ಅಫ್ಘಾನ್ ಯಥಾಸ್ಥಿತಿಗೆ ಬರಬೇಕು ಅಂತ ಮೋದಿ ನಾಲ್ಕು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಇದೇ ವೇಳೆ ಪ್ರಾದೇಶಿಕ ಭದ್ರತಾ ಮಾತುಕತೆಗಳು ಕೇಂದ್ರ ಏಷ್ಯಾದ ಸಾಂಪ್ರದಾಯಿಕ ಅಭಿವೃದ್ಧಿಪೂರಕ ಸಂಸ್ಕೃತಿ ಪುನಃಸ್ಥಾಪಿಸಲು ನೆರವಾಗಲಿದೆ ಅಂತ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಪರಸ್ಪರ ಅಭಿಪ್ರಾಯ ಹಂಚಿಕೊಳ್ಳಲು ಭಾರತ ಏರ್ಪಡಿಸಿದ ಸಭೆಗೆ ಕೇಂದ್ರ ಏಷ್ಯಾದ ರಾಷ್ಟ್ರಗಳ ಭದ್ರತಾ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.