• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮೃತರಿಗೆ ಸಂತಾಪ ಸೂಚಿಸಿ ಕಂಬನಿ ಮಿಡಿದ ಪ್ರಧಾನಿ!

Any Mind by Any Mind
October 7, 2021
in ದೇಶ
0
ಮೃತರಿಗೆ ಸಂತಾಪ ಸೂಚಿಸಿ ಕಂಬನಿ ಮಿಡಿದ ಪ್ರಧಾನಿ!
Share on WhatsAppShare on FacebookShare on Telegram
ADVERTISEMENT

ಪ್ರಧಾನಿಮಂತ್ರಿಗಳು ದುರಂತಕ್ಕೆ ತೀವ್ರ ಸಂಪಾತ ಸೂಚಿಸಿ ಟ್ವೀಟ್ ಮಾಡಿದ್ದು, “ಸಾವಿನ ವಿಷಯ ಕೇಳಿ ದುಃಖವಾಗಿದೆ. ಇಂತಹ ದುಃಖದ ಹೊತ್ತಲ್ಲಿ ಮೃತದ ಕುಟುಂಬದವರೊಂದಿಗೆ ಮಾನಸಿಕವಾಗಿ ನಾನಿದ್ದೇನೆ” ಎಂದು ಕಂಬನಿ ಮಿಡಿದಿದ್ದಾರೆ.

ಅಕ್ಟೋಬರ್ 7ರ ಬೆಳಗಿನ ಪ್ರಧಾನಮಂತ್ರಿ ಕಾರ್ಯಾಲಯದ ಈ ಟ್ವೀಟ್, ನಾಲ್ವರು ರೈತರ ಮೇಲೆ ಕಾರು ಚಲಾಯಿಸಿದ ತಮ್ಮದೇ ಪಕ್ಷದ, ತಮ್ಮದೇ ಸಂಪುಟದ ಸಚಿವರ ಪುತ್ರನ ಕೃತ್ಯದಲ್ಲಿ ಜೀವಬಿಟ್ಟ ರೈತರ ಕುರಿತು ಎಂದುಕೊಂಡಿದ್ದರೆ, ನೀವು ಮೋಸಹೋಗುತ್ತೀರಿ. ಕಾಂಗ್ರೆಸ್, ಶಿವಸೇನೆ, ಆಮ್ ಆದ್ಮಿ ಮತ್ತಿತರ ಪ್ರತಿಪಕ್ಷಗಳು ಮತ್ತು ರೈತ ಸಂಘಟನೆಗಳು ಸೇರಿದಂತೆ ದೇಶ-ವಿದೇಶದ ನೂರಾರು ವ್ಯಕ್ತಿ- ಸಂಘಟನೆಗಳು ಲಖೀಮ್ ಪುರ್ ಖೇರಿ ದುರಂತದ ಕುರಿತು ಪ್ರಧಾನಿ ಮೋದಿ, ಅವರ ಸರ್ಕಾರ ಮತ್ತು ಅವರ ಪಕ್ಷ ಬಿಜೆಪಿಯ ಮೌನದ ಬಗ್ಗೆ ಕಳೆದ ಐದು ದಿನಗಳಿಂದ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಆ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮೋದಿಯವರು ಘಟನೆ ನಡೆದ ಮೂರು ದಿನಗಳ ಬಳಿಕ ಮೌನ ಮುರಿದಿದ್ದಾರೆ. ಅನ್ನದಾತರ ಮೇಲಿನ ಪೈಶಾಚಿಕ ಅಟ್ಟಹಾಸಕ್ಕೆ ಮಿಡಿದಿದ್ದಾರೆ ಎಂದುಕೊಂಡರೆ ಅದು ತಪ್ಪು.

ಮೋದಿಯವರ ಕಚೇರಿಯ ಅಧಿಕೃತ ಟ್ವೀಟ್ ಖಾತೆಯಲ್ಲಿ ಇಂದು ಬೆಳಗ್ಗೆ ಕಾಣಿಸಿಕೊಂಡ ಈ ಸಂತಾಪ ಸಂದೇಶ ಲಖೀಮ್ ಪುರ್ ಖೇರಿಯ ಪ್ರತಿಭಟನಾನಿರತ ರೈತರ ಮೇಲೆ ಕಾರು ಚಲಾಯಿಸಿದ ತಮ್ಮ ಸಹೋದ್ಯೋಗಿಯ ಪುತ್ರನ ಕೃತ್ಯದಲ್ಲಿ ಸಾವು ಕಂಡ ನತದೃಷ್ಟರ ಬಗ್ಗೆ ಅಲ್ಲವೇ ಅಲ್ಲ. ಅವರು ಹೀಗೆ ಕಣ್ಣೀರು ಮಿಡಿದಿರುವುದು ಭಾರೀ ಮಳೆಯಿಂದಾಗಿ ಮಳೆ ಕುಸಿದು ಕರ್ನಾಟಕದ ಬೆಳಗಾವಿಯಲ್ಲಿ ಸಂಭವಿಸಿದ ಸಾವಿಗೆ.  ಭಾರೀ ಮಳೆಯಿಂದಾಗಿ ಮನೆ ಕುಸಿದು ಒಂದೇ ಮನೆಯ ಆರು ಮಂದಿ ಸಾವು ಕಂಡಿರುವ ದಾರುಣ ಘಟನೆಯ ಬಗ್ಗೆ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ಸಂತಾಪ ಹೇಳಿದ್ದಾರೆ. ಅಷ್ಟೇ ಅಲ್ಲ; ಉತ್ತರಪ್ರದೇಶದ ಬಾರಾಬಂಕಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೂ ಗುರುವಾರ ಬೆಳಗ್ಗೆ ಪ್ರಧಾನಮಂತ್ರಿಗಳ ಕಚೇರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ ಮತ್ತು ಪರಿಹಾರ ಘೋಷಿಸಿದೆ.

ಆದರೆ, ಲಖೀಂಪುರ್ ಖೇರಿಯ ದಾರುಣ ಘಟನೆ ನಡೆದು ಐದು ದಿನಗಳುರುಳಿದರೂ ಪ್ರಧಾನಿ ಮೋದಿಯವರಾಗಲೀ, ಅವರ ಕಚೇರಿಯಾಗಲೀ, ಅಥವಾ ಅವರ ಸರ್ಕಾರವಾಗಲೀ, ಸರ್ಕಾರದ ಯಾವೊಬ್ಬ ಸಚಿವರು, ಅಧಿಕಾರಿಗಳಾಗಲೀ, ಬಿಜೆಪಿ ಪಕ್ಷದ ಯಾವೊಬ್ಬ ನಾಯಕರಾಗಲೀ ಈವರೆಗೆ ಒಂದು ವಿಷಾದದ, ಸಂತಾಪದ ಮಾತು ಆಡಿಲ್ಲ. ಬದಲಾಗಿ, ಘಟನೆಯ ಮಾರನೇ ದಿನ ಸ್ವತಃ ಪ್ರಧಾನಿ ಲಖೀಂಪುರ ಸಮೀಪದಲ್ಲೇ ಹಾದುಹೋಗಿ, ಉತ್ತರಪ್ರದೇಶದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ ಸಂತ್ರಸ್ತರ ಸಮಾಧಾನ ಮಾಡುವ ಪ್ರಯತ್ನವಾಗಲೀ, ಕನಿಷ್ಟ ತಮ್ಮದೇ ಪಕ್ಷದ ಸಚಿವರ ಮಗನ ಕೃತ್ಯದಲ್ಲಿ ಮಡಿದವರಿಗೆ ಒಂದು ಸಂತಾಪದ ಮಾತನ್ನಾಗಲೀ ಆಡಲಿಲ್ಲ!

The loss of lives due to a house collapse in Belagavi, Karnataka is saddening. My thoughts are with the bereaved kin in this hour of sadness. An ex-gratia of Rs. 2 lakh each from PMNRF would be paid to the next of kin of the deceased: PM @narendramodi

— PMO India (@PMOIndia) October 7, 2021

ಬದಲಾಗಿ, ಸಂತ್ರಸ್ತರ ಭೇಟಿ ಮಾಡದಂತೆ, ಘಟನಾ ಸ್ಥಳಕ್ಕೆ ಹೋಗದಂತೆ ಪ್ರತಿಪಕ್ಷ ನಾಯಕರು, ರೈತ ಮುಖಂಡರನ್ನು ತಡೆದು, ಬಂಧಿಸಿ, ಗೃಹ ಬಂಧನದಲ್ಲಿಟ್ಟು ತೀರಾ ಪೈಶಾಚಿಕ ವರ್ತನೆ ತೋರಲಾಯಿತು. ಕನಿಷ್ಟ ಮನುಷ್ಯತ್ವವನ್ನೂ ಮರೆತು ಕೇಂದ್ರ ಮತ್ತು ಉತ್ತರಪ್ರದೇಶದ ಬಿಜೆಪಿ ಆಡಳಿತಗಳು ಈ ದುರಂತವನ್ನು ನಿರ್ವಹಿಸಿದ ರೀತಿ ಇದೀಗ ದೇಶ-ವಿದೇಶಗಳಲ್ಲಿ ಚರ್ಚೆಯ ವಸ್ತುವಾಗಿದೆ. ಒಂದು ಕಡೆ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದ ಪ್ರತಿ ಪಕ್ಷ ನಾಯಕರನ್ನು ಹೀನಾಯವಾಗಿ ಬಂಧಿಸಿ, ಬಲಪ್ರಯೋಗದಿಂದ ಕೂಡಿಹಾಕಿದ್ದರೆ, ಸ್ವತಃ ಜೀಪು ಚಲಾಯಿಸಿ ನಾಲ್ವರು ರೈತರು ಸೇರಿದಂತೆ ದುರಂತದಲ್ಲಿ ಎಂಟು ಮಂದಿ ಸಾವನ್ನಪ್ಪಲು ಮೂಲ ಕಾರಣನಾದ ಇಡೀ ಹತ್ಯಾಕಾಂಡದ ರೂವಾರಿ ಎನ್ನಲಾಗುತ್ತಿರುವ ಕೇಂದ್ರ ಸಚಿವ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ರಾಜಾರೋಷವಾಗಿ ಓಡಾಡಿಕೊಂಡು, ಟಿವಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾನೆ! ಅದರಲ್ಲೂ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿರುವಾಗ ಕೂಡ ಪೊಲೀಸರು ಕನಿಷ್ಟ ವಿಚಾರಣೆಗಾಗಿ ಕೂಡ ಆತನನ್ನು ವಶಕ್ಕೆ ಪಡೆಯದೆ ಆತನಿಗೆ ರಕ್ಷಣೆ ನೀಡಿ ಆತನ ಭದ್ರತೆಗೆ ನಿಂತಿರುವುದು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಉತ್ತರಪ್ರದೇಶದ ಬಿಜೆಪಿ ಸರ್ಕಾರ ತಲುಪಿರುವ ಮಟ್ಟಕ್ಕೆ ಸಾಕ್ಷಿಯಾಗಿದೆ.

ಆಳುವ ಮಂದಿ ಮತ್ತು ಸರ್ಕಾರದ ಇಂತಹ ಹೇಯ ನಡೆ ದೇಶದ ಪೊಲೀಸ್ ವ್ಯವಸ್ಥೆ, ಕಾನೂನು ಮತ್ತು ನ್ಯಾಯಾಂಗದ ಮೇಲಿನ ಜನಸಾಮಾನ್ಯರ ನಂಬಿಕೆಯನ್ನೇ ಕಳಚಲಿದೆ. ಲಖೀಂಪುರ ಖೇರಿ ಘಟನೆಯ ಬಳಿಕ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹಾಗೂ ಅವರ ಸರ್ಕಾರಗಳ ಇಂತಹ ಅಪಾಯಕಾರಿ ಧೋರಣೆಯ ಹಿನ್ನೆಲೆಯಲ್ಲೇ ಸುಪ್ರೀಂಕೋರ್ಟ್ ಸ್ವತಃ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಆ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಇದೀಗ ಸುಪ್ರೀಂಕೋರ್ಟ್ ನತ್ತ ನೆಟ್ಟಿವೆ!

ಮೋದಿಜೀ, ನಿಮ್ಮ ಸರ್ಕಾರದ ಮಂತ್ರಿಯ ಮಗ ರೈತರ ಮೇಲೆ ಕಾರು ಹರಿಸುತ್ತಿರುವ ವಿಡಿಯೋ ನೋಡಿದ್ದೀರಾ? Priyanka Gandhi
Tags: Amit ShahAshish MishraBJPCongress PartyFarmer StruggleLakhimpur Kheri EventPM ModiYogi Adityanathಅಮಿತ್ ಶಾಆಶಿಶ್ ಮಿಶ್ರಾಕಾಂಗ್ರೆಸ್ನರೇಂದ್ರ ಮೋದಿಪ್ರಧಾನಿ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಯೋಗಿ ಆದಿತ್ಯನಾಥರೈತ ಹೋರಾಟಲಖೀಂಪುರ ಖೇರಿ ಘಟನೆ
Previous Post

ಮೈಸೂರು ದಸರಾ 2021 : ಸಿ ಎಂ ಬಸವರಾಜ್ ಬೊಮ್ಮಾಯಿ ಮಾತು

Next Post

ಜಿಡಿಎಸ್ ನವರು ಕಾಂಗ್ರೆಸ್ ಸೋಲಿಸಲು ಅಥವಾ ಬಿಜೆಪಿ ಗೆಲ್ಲಿಸಲು ತಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದಾರೋ? DKShivakumar

Related Posts

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ
Top Story

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು. ಕಾಯಕವೇ ಕೈಲಾಸ ಅಂತ ಬಸವಣ್ಣ ಹೇಳಿದ್ದರು. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಮಾನ ಗೌರವ ನೀಡಬೇಕು....

Read moreDetails
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

May 1, 2026
Next Post
ಜಿಡಿಎಸ್ ನವರು ಕಾಂಗ್ರೆಸ್ ಸೋಲಿಸಲು ಅಥವಾ ಬಿಜೆಪಿ ಗೆಲ್ಲಿಸಲು ತಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದಾರೋ? DKShivakumar

ಜಿಡಿಎಸ್ ನವರು ಕಾಂಗ್ರೆಸ್ ಸೋಲಿಸಲು ಅಥವಾ ಬಿಜೆಪಿ ಗೆಲ್ಲಿಸಲು ತಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದಾರೋ? DKShivakumar

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada