Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮೋದಿ ಬರ್ತಾರೆ ಅಂತ ರಸ್ತೆ ಉಬ್ಬು ತೆರವು ಮಾಡಿದ ಬಿಬಿಎಂಪಿ : ಪ್ರತಿ ದಿನ ಅಪಘಾತಕ್ಕೆ ಕಾರಣ !

ಕರ್ಣ

ಕರ್ಣ

July 1, 2022
Share on FacebookShare on Twitter

ರಾಜಧಾನಿ ಬೆಂಗಳೂರಿಗೆ ಪ್ರಧಾನಿ ಬಂದು ಹೋದಾಗಿನಿಂದ ಒಂದಿಲ್ಲೊಂದು ಕಾಂಟ್ರವರ್ಸಿ ಬೆಳಕಿಗೆ ಬರ್ತಾನೆ ಇದೆ. ಸಿಟಿ ಜನ ಮೂರು ವರ್ಷ ಅತ್ತು ಗೋರೆದ್ರೂ ಹಾಕದ ಡಾಂಬರ್ ರಸ್ತೆ, ಮೋದಿಗಾಗಿ ರಾತ್ರೋ ರಾತ್ರಿ ಹಾಕಲಾಗಿರೋ ಬಗ್ಗೆಗಳ ಟೀಕೆಗಳು ವ್ಯಕ್ತವಾದ್ರೆ, ಹಾಕಿದ್ದ ರಸ್ತೆ ಮೂರೇ ದಿನಕ್ಕೆ ಕಿತ್ತು ಬಂದಿರೋದು ಬಿಬಿಎಂಪಿಯ ಮಾನ ಮರ್ಯಾದೇ ಹಜಾರು ಹಾಕಿದೆ. ಹೀಗೆ ರಸ್ತೆ ವಿಚಾರದಲ್ಲಿ ಸಾಲು ಸಾಲು ಅವಮಾನಗಳಿಗೆ ತುತ್ತಾಗಿರುವ ಬಿಬಿಎಂಪಿ ಸದ್ಯ ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದಲೂ‌ ಛೀಮಾರಿ ಹಾಕಿಸಿಕೊಂಡಿದೆ.

ಹೆಚ್ಚು ಓದಿದ ಸ್ಟೋರಿಗಳು

ಇಂದಿನಿಂದ 7 ದಿನ ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ

ಈ ಸರ್ಕಾರ ನಡೆಯುತ್ತಿಲ್ಲ, ಚುನಾವಣೆಗೆ ಏಳೆಂಟು ತಿಂಗಳಿದೆ ಅಂತ ಮ್ಯಾನೇಜ್​​ ಮಾಡುತ್ತಿದ್ದೇವೆ : ಸಚಿವ ಮಾಧುಸ್ವಾಮಿ ಆಡಿಯೋ ವೈರಲ್

ರಾಜ್ಯದ 1 ಕೋಟಿ 25 ಲಕ್ಷ ಮನೆಗಳಲ್ಲಿ ಧ್ವಜ ಹಾರಾಟ: ಸಿಎಂ ಬೊಮ್ಮಾಯಿ

ಸಿಲಿಕಾನ್ ಸಿಟಿ ಜನ ಸದ್ಯ ಬಿಬಿಎಂಪಿಯ ಕಳಪೆ ಕಾಮಗಾರಿಗಳ ಕುರಿತು ಛೀ ಥೂ ಅಂತಿದ್ದಾರೆ. ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹಾಕಲಾಗಿದ್ದ ಟಾರ್ ರಸ್ತೆಯ ಬಂಡಾವಳ ಮೂರೇ ದಿನಕ್ಕೆ ಬಯಲಾಗಿದೆ. ಹೀಗೆ ರಸ್ತೆ ವಿಚಾರದಲ್ಲಿ ಸಾಕಷ್ಟು ಅವಮಾನಗಳುಗೆ ತುತ್ತಾಗಿರುವ ಬಿಬಿಎಂಪಿ, ಸದ್ಯ ಮಹಾ ಎಡವಟ್ಟೊಂದನ್ನು ಮಾಡಿ, ಬೆಂಗಳೂರು ವಿವಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ತುತ್ತಾಗಿದೆ. ಬೆಂಗಳೂರು ವಿವಿ ಆವರಣದಲ್ಲಿ ಎರಡು ಅಭಿವೃದ್ಧಿ ಕಾಮಗಾರಿಗಳ ಚಾಲನೆ ಪ್ರಧಾನಿಗಳು ಬರ್ತಾರೆ ಅನ್ನೊ ಕಾರಣ ವಿವಿಯೊಳಗಿನ ರೋಡ್ ಹಂಪ್ಗಳನ್ನೇ ಕಿತ್ತು ಹಾಕಲಾಗಿದೆ. ನಾಗರಬಾವಿ ಸರ್ಕಲ್‌ನಿಂದ ಮರಿಯಪ್ಪನಪಾಳ್ಯದ ವಿವಿ ಕುಲಪತಿಗಳ ಕ್ವಾರ್ಟಸ್ ವರೆಗಿನ 7 ಕಿಲೋಮೀಟರ್ ರೋಡಿನ ಎಲ್ಲಾ ಹಂಪ್ಗಳನ್ನು ತೆಗೆದುಹಾಕಲಾಗಿದೆ.

ನ್ಯಾಷನಲ್ ಲಾ ಕಾಲೇಜಿನಿಂದ ಮರಿಯಪ್ಪನಪಾಳ್ಯದ ರಸ್ತೆ, ಜ್ಞಾನ ಭಾರತಿ ಯೂನಿರ್ವಸಿಟಿ ಮೆಟ್ರೋ ಸ್ಟೇಷನ್ನಿಂದ ವಿವಿ ಕ್ವಾಟ್ರರ್ಸ್ ರಸ್ತೆಯಲ್ಲಿದ್ದ 22 ಹಂಪ್ಗಳನ್ನು ಏಕಾಏಕಿ ತೆಗೆದು ಹಾಕಲಾಗಿದೆ. ರೋಡ್ ಹಂಪ್ಗಳಿಲ್ಲದ ಕಾರಣ ವಿವಿ ಆವರಣದಲ್ಲಿ ಪ್ರತಿನಿತ್ಯ 5 ರಿಂದ 6 ಅಪಘಾತಗಳು ನಡೆಯುತ್ತಿದೆ. ರಸ್ತೆ ಕ್ರಾಸ್ ಮಾಡಲು ವಿದ್ಯಾರ್ಥಿಗಳು ಹೆದರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಿಬಿಎಂಪಿ ಮಾಡಿರುವ ಕೆಲಸದ ವಿರುದ್ಧ ಬೆಂಗಳೂರು ವಿವಿ ಇಂಜಿನಿಯರ್ ವಿಭಾಗ ಪತ್ರ ಬರೆದು, ರೋಡ್ ಹಂಪ್ಸ್ ಹಾಕುವಂತೆ ಒತ್ತಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಬಿಎಂಪಿ ಮುಖ್ಯ ಆಯುಕ್ತರು, ಆದಷ್ಟು ಬೇಗ ವಿವಿಯೊಳಗೆ ವೈಜ್ಞಾನಿಕವಾಗಿ ಹಂಪ್ಗಳನ್ನು ನಿರ್ಮಿಸಲಾಗುವುದು ಎಂದಿದ್ದಾರೆ.

ಒಂದು ಕಡೆ ರೋಡ್ ಹಂಪ್ಸ್ ತೆಗೆದಿರುವ ಬಿಬಿಎಂಪಿ, ವಿದ್ಯಾರ್ಥಿಗಳ ಆಟದ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಿ ಅದ್ವಾನ ಮಾಡಿದೆ. ಒಂದಲ್ಲ ಅಂತ ಮೂರು ಮೂರು ಹೆಲಿಪ್ಯಾಡ್ ನಿರ್ಮಿಸಿ ಮೈದಾನವನ್ನು ಹಾಳು ಮಾಡಿದೆ. ಐದಾರು ಗಂಟೆಗಳ ಪ್ರಧಾನಿಗಳ ಕಾರ್ಯಕ್ರಮಕ್ಕೆ ಈಡಿ ವಿವಿ ಅಂದವನ್ನೇ ಹಾಳು ಕೆಡವಿರೋ ಬಿಬಿಎಂಪಿ ವಿರುದ್ಧ ಜನಾಕ್ರೋಶ ಕೇಳಿ ಬಂದಿದೆ. 

RS 500
RS 1500

SCAN HERE

[elfsight_youtube_gallery id="4"]

don't miss it !

ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೧
ಅಭಿಮತ

ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೨

by ಡಾ | ಜೆ.ಎಸ್ ಪಾಟೀಲ
August 13, 2022
ಪತ್ರಾಚಲ್ ಭೂ ಹಗರಣ: ಸಂಜಯ್ ರಾವತ್ 22ರವರೆಗೆ ನ್ಯಾಯಾಂಗ ವಶಕ್ಕೆ
ದೇಶ

ಪತ್ರಾಚಲ್ ಭೂ ಹಗರಣ: ಸಂಜಯ್ ರಾವತ್ 22ರವರೆಗೆ ನ್ಯಾಯಾಂಗ ವಶಕ್ಕೆ

by ಪ್ರತಿಧ್ವನಿ
August 8, 2022
ಭಾರತದಲ್ಲಿ ರೈಲ್ವೆ ಹಳಿ ಸ್ಫೋಟಿಸಲು ಪಾಕಿಸ್ತಾನದ ಐಎಸ್‌ ಐ ಸಂಚು!
ದೇಶ

ನೀರಿನ ಬಾಟಲ್‌ ಗಾಗಿ ಜಗಳ: ಚಲಿಸುವ ರೈಲಿನಿಂದ ಪ್ರಯಾಣಿಕನ್ನು ಹೊರಗೆ ಎಸೆದ ಸಿಬ್ಬಂದಿ!

by ಪ್ರತಿಧ್ವನಿ
August 8, 2022
Uncategorized

Brazilian Women’s Group

by ಶ್ರುತಿ ನೀರಾಯ
August 8, 2022
ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಸಚಿವರಾಗಿ 18 ಶಾಸಕರು ಪ್ರಮಾಣ ವಚನ ಸ್ವೀಕಾರ!
ದೇಶ

ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಸಚಿವರಾಗಿ 18 ಶಾಸಕರು ಪ್ರಮಾಣ ವಚನ ಸ್ವೀಕಾರ!

by ಪ್ರತಿಧ್ವನಿ
August 9, 2022
Next Post
ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !

ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ ; ಹೊಸ ದರ ಇಂದಿನಿಂದ ಜಾರಿ

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ ; ಹೊಸ ದರ ಇಂದಿನಿಂದ ಜಾರಿ

ಮಹಾ ಸರ್ಕಾರ ರಚನೆಯ ಬೆನ್ನಲ್ಲೇ  ಶರದ್ ಪವಾರ್‌ಗೆ ಆದಾಯ ತೆರಿಗೆಯಿಂದ ನೋಟಿಸ್!‌

ಮಹಾ ಸರ್ಕಾರ ರಚನೆಯ ಬೆನ್ನಲ್ಲೇ  ಶರದ್ ಪವಾರ್‌ಗೆ ಆದಾಯ ತೆರಿಗೆಯಿಂದ ನೋಟಿಸ್!‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist