• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಿಜವಾಗಲೂ ಮೋದಿ ಅಕೌಂಟ್‌ಗೆ 5 ಸಾವಿರ ಬರುತ್ತಾ..? ಏನಿದು ಹೊಸ ಸುದ್ದಿ..?

Any Mind by Any Mind
December 24, 2023
in ಕರ್ನಾಟಕ, ದೇಶ, ರಾಜಕೀಯ
0
ನಿಜವಾಗಲೂ ಮೋದಿ ಅಕೌಂಟ್‌ಗೆ 5 ಸಾವಿರ ಬರುತ್ತಾ..? ಏನಿದು ಹೊಸ ಸುದ್ದಿ..?
Share on WhatsAppShare on FacebookShare on Telegram

ADVERTISEMENT

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಸರ್ಕಾರ ಹೋಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ್ರೆ ಎಲ್ಲರ ಅಕೌಂಟ್‌ಗೆ 15 ಲಕ್ಷ ಹಣ ಹಾಕಬಹುದು ಎಂದಿದ್ದು ಹಳೆಯ ವಿಚಾರ. ಇದೀಗ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಖಾತೆಗೆ 5 ಸಾವಿರ ಹಣ ಹಾಕ್ತಾರಂತೆ ಅನ್ನೋದು ಹೊಸ ಸುದ್ದಿ. ಈ ವಿಚಾರವನ್ನು ವಾಟ್ಸಪ್‌ ಸಂದೇಶಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹಂಚಿಕೊಳ್ಳಲಾಗಿದ್ದು, ಹುಬ್ಬಳ್ಳಿಯ ಗ್ಯಾಸ್‌‌ ಸಿಲಿಂಡರ್‌ ವಿತರಣಾ ಕೇಂದ್ರದ ಎದುರು ಮಹಿಳೆಯರ ದಂಡು ಜಮಾಯಿಸಿದೆ.

ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದಲ್ಲಿ ಮಹಿಳೆಯರು ಗುಂಪುಗೂಡಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್‌ಗಾಗಿ ಇಕೆವೈಸಿ ಮಾಡಿಸಲು ಮುಗಿಬಿದ್ದಿದ್ದಾರೆ ಜನ. ಗ್ರಾಮೀಣ ಭಾಗದಲ್ಲಿ ಮೋದಿಯವರು ಹಣ ಕೊಡತಾ ಇದ್ದಾರೆ. ಗ್ಯಾಸ್‌‌ಗೆ ಇಕೆವೈಸಿ ಮಾಡಿಸಿದ್ರೆ 5 ಸಾವಿರ ನೀಡುತ್ತಿದ್ದಾರೆ ಎಂದು ವದಂತಿ ಹಬ್ಬಿಸಲಾಗಿದೆ. ಹೀಗಾಗಿ ಕೆವೈಸಿ ಮಾಡಿಸಲು ಜನರು ಸಾಲುಗಟ್ಟಿ ನಿಂತಿದ್ದಾರೆ. ಹುಬ್ಬಳ್ಳಿ ಧಾರವಾಡ ಮಾತ್ರವಲ್ಲ, ಅತ್ತ ಕಾರವಾರದಲ್ಲೂ ಅದೇ ಸುದ್ದಿ..

ಗೃಹ ಬಳಕೆ ಅನಿಲ ಗ್ರಾಹಕರಲ್ಲಿ ಗೊಂದಲ ಸೃಷ್ಟಿಸಿದ ವಾಟ್ಸಪ್ ಸಂದೇಶ ಹರಿದಾಡಿದ್ದು, ಕೆವೈಸಿ ಅಪ್ಡೇಟ್‌ ಮಾಡಿಸಿದ್ರೆ ಮೋದಿ ಅಕೌಂಟ್‌ಗೆ ಹಣ ಹಾಕ್ತಾರೆ ಅನ್ನೋ ಸುದ್ದಿ ಹರಿದಾಡಿ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳ ಗ್ಯಾಸ್ ಎಜೆನ್ಸಿ ಕಚೇರಿ ಮುಂದೆ ಜನವೋ ಜನ. ಅನಿಲ ಸಿಲಿಂಡರ್ ಬೇಕಾದರೆ ಡಿಸೆಂಬರ್ 31ರೊಳಗೆ ಕೆವೈಸಿ ಅಪ್ಡೇಡ್ ಮಾಡಬೇಕು. ಒಂದು ವೇಳೆ ಕೆವೈಸಿ ಅಪ್ಡೇಟ್ ಮಾಡದೆ ಇದ್ರೆ ಗೃಹಬಳಕೆ ಅನಿಲ‌ ಸಿಲಿಂಡರ್ ವಾಣಿಜ್ಯ ಅನಿಲ ಸಿಲಿಡರ್ ಆಗಿ ಬದಲಾವಣೆ ಆಗುತ್ತದೆ ಎಂಬ ಸುಳ್ಳು ಸಂದೇಶ ಹರಿದಾಡಿದೆ.

ಪ್ರಧಾನಿ ಮೋದಿ 15 ಲಕ್ಷ ಹಣ ಕೊಡ್ತಾರೆ ಎಂದು ಹೇಳಿದ್ದು ಅಥವಾ ಆ ಅರ್ಥ ಬರುವಂತೆ ಕಾಂಗ್ರೆಸ್‌ ಸರ್ಕಾರ ತೊಲಗಿಸಿ ಬಿಜೆಪಿ ಸರ್ಕಾರ ಬಂದ್ರೆ ಕಪ್ಪು ಹಣ ವಾಪಸ್‌ ತರುತ್ತೇವೆ. ಸ್ವಿಸ್‌‌ ಬ್ಯಾಂಕ್‌ಗಳಲ್ಲಿ ಇರುವ ಬ್ಲಾಕ್‌ಮನಿ ದೇಶಕ್ಕೆ ವಾಪಸ್‌‌ ಆದರೆ ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ಹಂಚಬಹುದು ಎಂದಿದ್ದರು. ಆ ಬಳಿಕ ಝೀರೋ ಬ್ಯಾಲೆನ್ಸ್‌ ಅಕೌಂಟ್‌‌ ಮಾಡಿಸಿದ್ರೆ ಹಣ ಹಾಕ್ತಾರೆ, ಎಂದು ಸುಳ್ಳನ್ನೇ ಹೇಳುವ ಮೂಲಕ ಪ್ರತಿಯೊಬ್ಬರು ಅಕೌಂಟ್‌ ಮಾಡಿಸುವಂತೆ ಮಾಡಲಾಯ್ತ. ಯಾವಾಗಲೂ ಹಣ ಬರಲಿಲ್ಲ.

ಸಬ್ಸಿಡಿ ಸಿಲಿಂಡರ್ ದುರ್ಬಳಕೆ ಮಾಡುವದನ್ನ ಪತ್ತೆ ಹಚ್ಚಲು ಮುಂದಾಗಿರುವ ಕೇಂದ್ರ ಸರ್ಕಾರ, ಗ್ರಾಹಕರ ಕೆವೈಸಿ ಅಪ್ಡೇಟ್ ಮಾಡುವಂತೆ ಗ್ಯಾಸ್ ಎಜೆನ್ಸಿಗಳಿಗೆ ಸೂಚನೆ ನೀಡಿದೆ. ಗ್ಯಾಸ್ ಎಜೆನ್ಸಿ ಸಿಬ್ಬಂದಿಯೇ‌ ಗ್ಯಾಸ್ ಸಿಲಿಂಡರ್ ವಿತರಿಸುವ ವೇಳೆ ಗ್ರಾಹಕರ ಬೆರಳಚ್ಚು ಪಡೆದು ಕೆವೈಸಿ ಅಪ್ಡೇಟ್ ಮಾಡಿಸಬೇಕು.. ಆದ್ರೆ ಈಗ ಅಸಲಿ ವಿಷಯ ಬಿಟ್ಟು ವಾಟ್ಸಪ್ ಮೂಲಕ ಸುಳ್ಳು ಸಂದೇಶವನ್ನು ಹಬ್ಬಿಸಿದ್ದು, ಜನರು ಹಣ ಬರುತ್ತೆ ಎನ್ನುತ್ತಿದ್ದ ಹಾಗೆ ಜನಜಾತ್ರೆಯೇ ಆಗಿದೆ.

Tags: BJPCongress PartyCovid 19KarnatakaModiMoneyNarendra ModiPeoplePmPrime MinisterPrime Minister ModiprogramRation CardScameಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ನಾನು ದೇಶದ್ರೋಹಿನಾ, ದೇಶಪ್ರೇಮಿನಾ ಎಂಬುದನ್ನು ಜನ ತೀರ್ಮಾನ ಮಾಡ್ತಾರೆ : ಪ್ರತಾಪ್ ಸಿಂಹ

Next Post

ನಮ್ಮನ್ನು ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು : ಬಿಕೆ ಹರಿಪ್ರಸಾದ್

Related Posts

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ
ಕರ್ನಾಟಕ

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

by ಪ್ರತಿಧ್ವನಿ
April 13, 2026
0

ಬೆಂಗಳೂರು, ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆ, ಸಂಚಾರ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಹಿತದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್...

Read moreDetails
ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

April 13, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

April 12, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
Next Post
ನಮ್ಮನ್ನು ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು : ಬಿಕೆ ಹರಿಪ್ರಸಾದ್

ನಮ್ಮನ್ನು ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು : ಬಿಕೆ ಹರಿಪ್ರಸಾದ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada