ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸರ್ಕಾರ ಹೋಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ್ರೆ ಎಲ್ಲರ ಅಕೌಂಟ್‌ಗೆ 15 ಲಕ್ಷ ಹಣ ಹಾಕಬಹುದು ಎಂದಿದ್ದು ಹಳೆಯ ವಿಚಾರ. ಇದೀಗ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಖಾತೆಗೆ 5 ಸಾವಿರ ಹಣ ಹಾಕ್ತಾರಂತೆ ಅನ್ನೋದು ಹೊಸ ಸುದ್ದಿ. ಈ ವಿಚಾರವನ್ನು ವಾಟ್ಸಪ್ ಸಂದೇಶಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹಂಚಿಕೊಳ್ಳಲಾಗಿದ್ದು, ಹುಬ್ಬಳ್ಳಿಯ ಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರದ ಎದುರು ಮಹಿಳೆಯರ ದಂಡು ಜಮಾಯಿಸಿದೆ.
ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದಲ್ಲಿ ಮಹಿಳೆಯರು ಗುಂಪುಗೂಡಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್‌ಗಾಗಿ ಇಕೆವೈಸಿ ಮಾಡಿಸಲು ಮುಗಿಬಿದ್ದಿದ್ದಾರೆ ಜನ. ಗ್ರಾಮೀಣ ಭಾಗದಲ್ಲಿ ಮೋದಿಯವರು ಹಣ ಕೊಡತಾ ಇದ್ದಾರೆ. ಗ್ಯಾಸ್‌ಗೆ ಇಕೆವೈಸಿ ಮಾಡಿಸಿದ್ರೆ 5 ಸಾವಿರ ನೀಡುತ್ತಿದ್ದಾರೆ ಎಂದು ವದಂತಿ ಹಬ್ಬಿಸಲಾಗಿದೆ. ಹೀಗಾಗಿ ಕೆವೈಸಿ ಮಾಡಿಸಲು ಜನರು ಸಾಲುಗಟ್ಟಿ ನಿಂತಿದ್ದಾರೆ. ಹುಬ್ಬಳ್ಳಿ ಧಾರವಾಡ ಮಾತ್ರವಲ್ಲ, ಅತ್ತ ಕಾರವಾರದಲ್ಲೂ ಅದೇ ಸುದ್ದಿ..
ಗೃಹ ಬಳಕೆ ಅನಿಲ ಗ್ರಾಹಕರಲ್ಲಿ ಗೊಂದಲ ಸೃಷ್ಟಿಸಿದ ವಾಟ್ಸಪ್ ಸಂದೇಶ ಹರಿದಾಡಿದ್ದು, ಕೆವೈಸಿ ಅಪ್ಡೇಟ್ ಮಾಡಿಸಿದ್ರೆ ಮೋದಿ ಅಕೌಂಟ್‌ಗೆ ಹಣ ಹಾಕ್ತಾರೆ ಅನ್ನೋ ಸುದ್ದಿ ಹರಿದಾಡಿ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳ ಗ್ಯಾಸ್ ಎಜೆನ್ಸಿ ಕಚೇರಿ ಮುಂದೆ ಜನವೋ ಜನ. ಅನಿಲ ಸಿಲಿಂಡರ್ ಬೇಕಾದರೆ ಡಿಸೆಂಬರ್ 31ರೊಳಗೆ ಕೆವೈಸಿ ಅಪ್ಡೇಡ್ ಮಾಡಬೇಕು. ಒಂದು ವೇಳೆ ಕೆವೈಸಿ ಅಪ್ಡೇಟ್ ಮಾಡದೆ ಇದ್ರೆ ಗೃಹಬಳಕೆ ಅನಿಲ ಸಿಲಿಂಡರ್ ವಾಣಿಜ್ಯ ಅನಿಲ ಸಿಲಿಡರ್ ಆಗಿ ಬದಲಾವಣೆ ಆಗುತ್ತದೆ ಎಂಬ ಸುಳ್ಳು ಸಂದೇಶ ಹರಿದಾಡಿದೆ.
ಪ್ರಧಾನಿ ಮೋದಿ 15 ಲಕ್ಷ ಹಣ ಕೊಡ್ತಾರೆ ಎಂದು ಹೇಳಿದ್ದು ಅಥವಾ ಆ ಅರ್ಥ ಬರುವಂತೆ ಕಾಂಗ್ರೆಸ್ ಸರ್ಕಾರ ತೊಲಗಿಸಿ ಬಿಜೆಪಿ ಸರ್ಕಾರ ಬಂದ್ರೆ ಕಪ್ಪು ಹಣ ವಾಪಸ್ ತರುತ್ತೇವೆ. ಸ್ವಿಸ್ ಬ್ಯಾಂಕ್‌ಗಳಲ್ಲಿ ಇರುವ ಬ್ಲಾಕ್‌ಮನಿ ದೇಶಕ್ಕೆ ವಾಪಸ್ ಆದರೆ ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ಹಂಚಬಹುದು ಎಂದಿದ್ದರು. ಆ ಬಳಿಕ ಝೀರೋ ಬ್ಯಾಲೆನ್ಸ್ ಅಕೌಂಟ್ ಮಾಡಿಸಿದ್ರೆ ಹಣ ಹಾಕ್ತಾರೆ, ಎಂದು ಸುಳ್ಳನ್ನೇ ಹೇಳುವ ಮೂಲಕ ಪ್ರತಿಯೊಬ್ಬರು ಅಕೌಂಟ್ ಮಾಡಿಸುವಂತೆ ಮಾಡಲಾಯ್ತ. ಯಾವಾಗಲೂ ಹಣ ಬರಲಿಲ್ಲ.

ಸಬ್ಸಿಡಿ ಸಿಲಿಂಡರ್ ದುರ್ಬಳಕೆ ಮಾಡುವದನ್ನ ಪತ್ತೆ ಹಚ್ಚಲು ಮುಂದಾಗಿರುವ ಕೇಂದ್ರ ಸರ್ಕಾರ, ಗ್ರಾಹಕರ ಕೆವೈಸಿ ಅಪ್ಡೇಟ್ ಮಾಡುವಂತೆ ಗ್ಯಾಸ್ ಎಜೆನ್ಸಿಗಳಿಗೆ ಸೂಚನೆ ನೀಡಿದೆ. ಗ್ಯಾಸ್ ಎಜೆನ್ಸಿ ಸಿಬ್ಬಂದಿಯೇ ಗ್ಯಾಸ್ ಸಿಲಿಂಡರ್ ವಿತರಿಸುವ ವೇಳೆ ಗ್ರಾಹಕರ ಬೆರಳಚ್ಚು ಪಡೆದು ಕೆವೈಸಿ ಅಪ್ಡೇಟ್ ಮಾಡಿಸಬೇಕು.. ಆದ್ರೆ ಈಗ ಅಸಲಿ ವಿಷಯ ಬಿಟ್ಟು ವಾಟ್ಸಪ್ ಮೂಲಕ ಸುಳ್ಳು ಸಂದೇಶವನ್ನು ಹಬ್ಬಿಸಿದ್ದು, ಜನರು ಹಣ ಬರುತ್ತೆ ಎನ್ನುತ್ತಿದ್ದ ಹಾಗೆ ಜನಜಾತ್ರೆಯೇ ಆಗಿದೆ.