‘ಕುಮಾರಸ್ವಾಮಿ ಸುಳ್ಳಿನ ನಾಯಕʼ ಎಂಬ ಚಲುವರಾಯಸ್ವಾಮಿ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣವನ್ನ ಯಾವತ್ತಿಗೂ ನೇರವಾಗಿ ಮಾಡಬೇಕೇ ಹೊರತು, ಮೀರ್ ಸಾಧಕ್ ತನ ತೋರಬಾರದು
ಮಂಡ್ಯ: ಮಾಜಿ ಸಚಿವ ಚಲುವರಾಯಸ್ವಾಮಿ ರಾಜಕಾರಣದಲ್ಲಿ ʼಮೀರ್ ಸಾಧಕ್ʼ ರೀತಿ ವರ್ತಿಸುತ್ತಿದ್ದಾರೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ತೀವ್ರ ವಾಗ್ದಾಳಿ ನಡೆಸಿದರು.
ʼಕುಮಾರಸ್ವಾಮಿ ಸುಳ್ಳಿನ ನಾಯಕʼ ಎಂಬ ಚಲುವರಾಯಸ್ವಾಮಿ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣವನ್ನ ಯಾವತ್ತಿಗೂ ನೇರವಾಗಿ ಮಾಡಬೇಕೇ ಹೊರತು, ಮೀರ್ ಸಾಧಕ್ ತನ ತೋರಬಾರದು. ಅಲ್ಲದೇ ಚಲುವರಾಯಸ್ವಾಮಿ ಅವರ ಹೇಳಿಕೆ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಈಗಾಗಲೇ ತಕ್ಕ ಉತ್ತರ ಕೊಟ್ಟಿದ್ದಾರೆ. ಯಾರು ರಾತ್ರಿ ಹೊತ್ತಿನಲ್ಲಿ ಯಡಿಯೂರಪ್ಪ ಮನೆ ಹಾಗೂ ಬೆಳಗ್ಗೆ ಹೊತ್ತು ಸಿದ್ದರಾಮಯ್ಯ ಮನೆಯಲ್ಲಿ ಇರುತ್ತಿದ್ದರು ನಮಗೂ ಗೊತ್ತಿದೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಮೈಶುಗರ್‌ಗೆ ಬಜೆಟ್‌ನಲ್ಲಿ 100 ಕೋಟಿ ಕೊಟ್ಟಿದ್ದು ಸುಳ್ಳ?, ಮಂಡ್ಯ ಜಿಲ್ಲೆಗೆ 9000 ಕೋಟಿ ಕೊಟ್ಟಿದ್ದು ಸುಳ್ಳ? ಎಂದು ಪ್ರಶ್ನಿಸಿದ ಸುರೇಶ್‌ಗೌಡ, ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕುಮಾರಸ್ವಾಮಿ ಅವರಿಗೆ ಸಿಗುತ್ತಿರುವ ಜನರ ಬೆಂಬಲ ನೋಡಿ ಈ ರೀತಿ ಮಾತನಾಡುತ್ತಾರೆ ಎಂದು ಟೀಕಿಸಿದರು.