• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ ಖಂಡಿಸಿದ ಶಾಸಕ ಅಶ್ವತ್ಥನಾರಾಯಣ! ರಕ್ಷಣೆ ಒದಗಿಸಲು ಮನವಿ

ಪ್ರತಿಧ್ವನಿ by ಪ್ರತಿಧ್ವನಿ
August 13, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಬೆಂಗಳೂರು :ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಹೊಸದಲ್ಲ. ಅಲ್ಲಿ ರಾಜಕೀಯ ಅಸ್ಥಿರತೆ, ಹುನ್ನಾರಗಳು ಆರಂಭವಾದ ಸಂದರ್ಭದಲ್ಲಿ ಹಿಂದೂಗಳ ಕುಟುಂಬವನ್ನು ಗುರಿ ಮಾಡಿ ದೌರ್ಜನ್ಯ ಮಾಡುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ADVERTISEMENT

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳಿಗೆ ನುಗ್ಗಿ ಅತ್ಯಾಚಾರ ಮಾಡುತ್ತಿದ್ದಾರೆ. ತಾಯಿಯ ಎದುರೇ ಮಗಳ ರೇಪ್, ತಂದೆ ಎದುರುಗಡೆ ಮಗನ ಹತ್ಯೆಯಂಥ ದುರ್ಘಟನೆ ನಡೆಯುತ್ತಿದೆ. ಹಿಂದೂ ದೇವಸ್ಥಾನಗಳಿಗೆ ಹಾನಿ ಎಸಗಲಾಗುತ್ತಿದೆ ಎಂದು ವಿವರಿಸಿದರು.

ಇದೊಂದು ಕೆಟ್ಟ ಸಂಪ್ರದಾಯ ಮತ್ತು ಕೆಟ್ಟ ಚಾಳಿ ಎಂದು ಆಕ್ಷೇಪಿಸಿದರು.ಜಗತ್ತಿನ ಇತರ ಕಡೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯದಂಥ ಘಟನೆ ಆದಾಗ ಈ ದೇಶದಲ್ಲಿ ಇರುವ ಎಡಚರರು ಮತ್ತು ಇಂಡಿಯಾ ಒಕ್ಕೂಟದ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಸೇರಿ ಕೆಲವು ಸದಸ್ಯರು ಉಲ್ಲೇಖಿಸಿ, ಟೀಕೆ ಮಾಡಿ ರಕ್ಷಣೆಯ ಮಾತನಾಡುತ್ತಾರೆ. ಆದರೆ, ಈ ದೌರ್ಜನ್ಯದ ಬಗ್ಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿದ್ದರಾಮಯ್ಯ ಮತ್ತಿತರರು ಮಾತನಾಡುತ್ತಿಲ್ಲ.

ರಾಜಕೀಯ ಅರಾಜಕತೆಯನ್ನು ಖಂಡಿಸುತ್ತಿಲ್ಲ ಎಂದು ಟೀಕಿಸಿದರು.ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರು ಭಾರತದಲ್ಲೂ ಇಂಥ ಘಟನೆ ಆಗಬಹುದೆಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಇದಲ್ಲದೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮಗಳು ರುಬಿಯ ಮುಫ್ತಿ ಅವರು ಕೂಡ ಇದೇ ಮಾದರಿಯ ಟ್ವೀಟ್ ಮಾಡಿದ್ದಾರೆ.

ಇದು ಕೂಡ ಖಂಡನೀಯ ಎಂದರು.ದೇಶದಲ್ಲಿ ಇಂಥ ಅರಾಜಕತೆಗೆ ಹುನ್ನಾರ ಆಗಿದೆಯೇ? ಈ ನಾಯಕರಿಗೆ ಇವೆಲ್ಲವೂ ಗೊತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ಬಾಂಗ್ಲಾ ವಿಮೋಚನೆ ಆದಾಗ ಶೇ 30ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ 7.9ಕ್ಕೆ ಬಂದಿದೆ ಎಂದು ವಿವರಿಸಿದರು.

ತುಂಗಭದ್ರಾ ಡ್ಯಾಮಿನಲ್ಲಿ ಆದ ದುರ್ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಸುಮಾರು 25 ಲಕ್ಷ ರೈತರಿಗೆ ಅದು ಜೀವನಾಡಿಯಾಗಿದೆ. ರೈತರ ಪರಿಸ್ಥಿತಿ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್, ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು. ಇದು ಬೇಜವಾಬ್ದಾರಿ ಕ್ರಮ ಎಂದರು.

Tags: BJPmla-ashwatthanarayanR Ashok
Previous Post

ಖ್ಯಾತ ಗಾಯಕ ರವೀಂದ್ರ ಸೊರಗಾವಿ ಅವರ ಕಂಠಸೀರಿಯಲ್ಲಿ “ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು” ಚಿತ್ರದ ಹಾಡು

Next Post

ಹೇಯ್‌ ನೀನೆ ಮಾತಾಡ್ತೀಯಲ್ಲ ನನ್‌ ಮಾತು ಕೇಳು ಎಂದು ಗರಂ ಆದ ಸಿಎಂ

Related Posts

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”
Top Story

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

by ಪ್ರತಿಧ್ವನಿ
May 16, 2026
0

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಮಗುವಿನ ಜನನಕ್ಕೆ ₹30 ಸಾವಿರ ಹಾಗೂ...

Read moreDetails
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
Next Post

ಹೇಯ್‌ ನೀನೆ ಮಾತಾಡ್ತೀಯಲ್ಲ ನನ್‌ ಮಾತು ಕೇಳು ಎಂದು ಗರಂ ಆದ ಸಿಎಂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada