ತಲೆಯಲ್ಲಿ ಬಿಳಿ ಕೂದಲ ಆದಾಗ ಹೆಚ್ಚು ಜನ ಹೇರ್ ಡೈ, ಕಲರಿಂಗ್ ಮಾಡುತ್ತಾರೆ . ಆದರೆ ಇದರಲ್ಲಿ ಸಾಕಷ್ಟು ಕೆಮಿಕಲ್ಸ್ ನ ಬಳಸ್ತಾರೆ ಮತ್ತು ಅಷ್ಟು ದುಬಾರಿ ಕರ್ಚು ಯಾಕೆ ಎಂದು ನ್ಯಾಚುರಲ್ಲಾಗಿ ಸಿಗುವಂತಹ ಮೆಹಂದಿಯನ್ನು ತಲೆಗೆ ಹಚ್ಚುತ್ತಾರೆ..ಇದರಿಂದ ಬಿಳಿಯ ಕೂದಲು ಕೆಂಪಾಗುತ್ತದೆ.. ಹಾಗೆ ಹೆಚ್ಚು ಜನ ತಿಂಗಳಿಗೆ ಎರಡು ಭಾರಿ ತಪ್ಪದೆ ಮೆಹಂದಿಯನ್ನು ಬಳಸುತ್ತಾರೆ. ಆದ್ರೆ ಮೆಹಂದಿ ತುಂಬಾ ತಂಪಾಗಿರುವುದರಿಂದ ಚಳಿಗಾಲದಲ್ಲಿ ಶೀತ ಕೆಮ್ಮು ನೆಗಡಿ ಆಗುವುದು ಗ್ಯಾರಂಟಿ. ಈ ತಂಪಿನ ವಾತಾವರಣದಲ್ಲಿ ಮೆಹಂದಿಯನ್ನು ಬಳಸಬೇಕು ಜೊತೆಗೆ ಶೀತ ಕೂಡ ಆಗ್ಬಾರ್ದು ಅಂದ್ರೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.

ಕಾಫಿ ಡಿಕಾಕ್ಷನ್
ನಿಮ್ಮ ಕೂದಲಿಗೆ ಬೇಕಾದಷ್ಟು ಮೆಹಂದಿ ಪುಡಿಯನ್ನ ಒಂದು ಬೌಲಿಗೆ ಹಾಕಿ ಅದಕ್ಕೆ ಕಾಫಿಗೆ ಬಳಸುವಂತಹ ಡಿಕಾಕ್ಷನ್ ಅನ್ನ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕೂದಲಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಬಿಟ್ಟು ತಲೆಗೆ ಸ್ನಾನ ಮಾಡುವುದರಿಂದ ಕೂದಲು ಕೆಂಪಾಗುತ್ತದೆ ಜೊತೆಗೆ ನೆಗಡಿ ಕೂಡ ಆಗೋದಿಲ್ಲ ಕಾರಣ ಡಿಕಾಕ್ಷನ್ ಉಷ್ಣತೆ ಹೆಚ್ಚಿದ್ದು ದೇಹವನ್ನು ಹಿಟ್ ಮಾಡುತ್ತದೆ.

ಏಲಕ್ಕಿ ಪುಡಿ
ಒಂದು ಬೌಲ್ ಗೆ ಮೆಹಂದಿ ಪುಡಿಯನ್ನ ಹಾಕಿ ಅದನ್ನು ಬಿಸಿನೀರಿಂದ ಮಿಶ್ರಣ ಮಾಡಿ ನಂತರ ಅರ್ಧ ಟೇಬಲ್ ಸ್ಪೂನ್ ನಷ್ಟು ಏಲಕ್ಕಿ ಪುಡಿಯನ್ನ ಮಿಕ್ಸ್ ಮಾಡಿ , ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಏಲಕ್ಕಿಯಲ್ಲಿ ಉಷ್ಣತೆ ಹೆಚ್ಚಿದ್ದು ಶೀತ ನೆಗಡಿಯನ್ನ ತಪ್ಪಿಸುತ್ತದೆ.

ಶುಂಠಿ ರಸ
ಮೆಹಂದಿಯನ್ನ ತಲೆಗೆ ಅಪ್ಲೈ ಮಾಡುವ ಮುನ್ನ ಅದಕ್ಕೆ ಎರಡರಿಂದ ಮೂರು ಟೇಬಲ್ ಸ್ಪೂನ್ ನಷ್ಟು ಶುಂಠಿ ರಸವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಕೂದಲಿಗೆ ಹಚ್ಚಿ ಇದರಿಂದ ಶೀತ ನೆಗಡಿ, ಕೆಮ್ಮು ಎಲ್ಲವೂ ಕೂಡ ತಡೆಯುತ್ತದೆ.