• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಾಲಿವುಡ್‌ ಹುಡುಗನ ಜೊತೆ ಮಿಥುನ್‌ ಚಕ್ರವರ್ತಿ ಪುತ್ರಿ ನಿಶ್ಚಿತಾರ್ಥ ದತ್ತು ಮಗಳ ಲವ್‌ ಸ್ಟೋರಿ!

ಪ್ರತಿಧ್ವನಿ by ಪ್ರತಿಧ್ವನಿ
June 15, 2026
in Top Story
0
ಬೆಂಗಳೂರು ವಾಹನ ಸವಾರರೇ ಗಮನಿಸಿ: ವಾಹನ ಸಂಚಾರಕ್ಕೆ ತಡೆ; ಪರ್ಯಾಯ ಮಾರ್ಗಗಳ ಪಟ್ಟಿ ಪ್ರಕಟ
Share on WhatsAppShare on FacebookShare on Telegram

ದಿಶಾನಿ ಚಕ್ರವರ್ತಿ. ಈಕೆ ಬಾಲಿವುಡ್‌ ಡಿಸ್ಕೋ ಡ್ಯಾನ್ಸರ್ ಮಿಥುನ್ ಚಕ್ರವರ್ತಿ ಅವರ ಪ್ರೀತಿಯ ಪುತ್ರಿ. ವಿಶೇಷ ಅಂದರೆ, ಇವರು ಮಿಥುನ್ ಚಕ್ರವರ್ತಿ ಮಗಳಲ್ಲ. ಬದಲಿಗೆ ದತ್ತು ಪುತ್ರಿ. ಹೌದು, ಈ ಹಿಂದೆ ಮಾಧ್ಯಮಗಳು ವರದಿ ಮಾಡಿರುವಂತೆ ಕೋಲ್ಕತ್ತಾದ ಕಸದ ರಾಶಿಯಲ್ಲಿ ಸಿಕ್ಕಿದ್ದರಂತೆ ದಿಶಾನಿ. ಸ್ಥಳಿಯ ಪತ್ರಿಕೆಯೊಂದರಲ್ಲಿ ಮಗುವನ್ನು ರಕ್ಷಿಸಿದ ಸುದ್ದಿಯನ್ನು ಓದಿ ಭಾವುಕರಾದ ಮಿಥುನ್, ತಮ್ಮ ಪತ್ನಿ ಯೋಗಿತಾ ಬಾಲಿ ಅವರ ಬೆಂಬಲ ಪಡೆದು ದಿಶಾನಿ ಅವರನ್ನು ದತ್ತು ಪಡೆದರು. ಅಲ್ಲಿಂದ ಮಿಥುನ್ ಚಕ್ರವರ್ತಿಯ ಮನೆ ಮಗಳಾಗಿಬಿಟ್ಟರು ದಿಶಾನಿ.

ADVERTISEMENT
Nirmala Sitharaman :  ಕರ್ನಾಟಕಕ್ಕೆ ಒಂದು ವರ್ಷದಲ್ಲೇ ಶೇ.76ರಷ್ಟು ನೀಡಿದ್ದೇವೆ ನಿರ್ಮಲಾ ಸೀತಾರಾಮನ್‌..!

ಸದ್ಯ ದಿಶಾನಿ ಅಮೆರಿಕಾದ ವಾಸಿ. ಮುಂಬೈನ ”ದಿ ಜೆಫ್ ಗೋಲ್ಡ್‌ಬರ್ಗ್ ಸ್ಟುಡಿಯೋ”ದಲ್ಲಿ ಅಭಿನಯ ಕಲಿತ ದಿಶಾನಿ, ಲಾಸ್ ಏಂಜಲೀಸ್‌ನ ”ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ”ಯಿಂದ ಪದವಿ ಪಡೆದಿದ್ದಾರೆ.ಇನ್ನು ಅಲ್ಲಿನ ಪ್ರತಿಷ್ಠಿತ ”ಲೀ ಸ್ಟ್ರಾಸ್‌ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್‌ಸ್ಟಿಟ್ಯೂಟ್”ನಲ್ಲಿ ಎರಡು ವರ್ಷಗಳ ತರಬೇತಿ ಪಡೆದಿರುವ ದಿಶಾನಿ, ಹಾಲಿವುಡ್‌ನ ಸ್ವತಂತ್ರ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ”ಗಿಫ್ಟ್”, ”ಅಂಡರ್‌ಪಾಸ್”, ”ದಿ ಗೆಸ್ಟ್” ಮತ್ತು ”ಫೀಡ್ ಮೀ” ಸೇರಿದಂತೆ ಕೆಲವು ಶಾರ್ಟ್ ಫಿಲ್ಮ್‌ಗಳಲ್ಲಿ ನಟಿಸಿದ್ದಾರೆ.

ದಿಶಾನಿ ಚಕ್ರವರ್ತಿ ಬಗ್ಗೆ ಈಗ ಯಾಕೆ ಮಾತು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಸದ್ಯ ತಮ್ಮ ಬಹುಕಾಲದ ಗೆಳೆಯ ಮೈಲ್ಸ್ ಮಾಂಟ್ಜಾರಿಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದೇ ಈ ಹೊತ್ತಿನ ಸುದ್ದಿ. ಸಂಪೂರ್ಣ ಸಿನಿಮಾ ಶೈಲಿಯಲ್ಲಿ ಮೈಲ್ಸ್ ಮಾಂಟ್ಜಾರಿಸ್, ದಿಶಾನಿ ಎದುರು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇವರ ಈ ಲವ್ ಪ್ರಪೋಸ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಷ್ಟಕ್ಕೂ ಈ ಮೈಲ್ಸ್ ಮಾಂಟ್ಜಾರಿಸ್ ಯಾರು ಎಂಬ ಪ್ರಶ್ನೆ ಸಹಜ. ಮೈಲ್ಸ್ ಮಾಂಟ್ಜಾರಿಸ್ ಹಾಲಿವುಡ್‌ನಲ್ಲಿ ಸ್ಟೆಡಿಕ್ಯಾಮ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಇವರು ಕಲರಿಸ್ಟ್ ಕೂಡ. ಇಎಸ್‌ಪಿಎನ್, ಎನ್‌ಎಫ್‌ಎಲ್, ಡಿಸ್ನಿ, ಅಮೆಜಾನ್, ಮ್ಯಾಕ್ಸ್, ಸೇರಿ ಹಲವು ಪ್ರಮುಖ ಪ್ರೊಡಕ್ಷನ್ ಕಂಪನಿಗಳ ಮಾರ್ಕೆಟಿಂಗ್ ಕ್ಯಾಂಪೇನ್‌ಗಳನ್ನು ಮಾಡಿರುವ ಮೈಲ್ಸ್ ಮಾಂಟ್ಜಾರಿಸ್, ಕೆಲ ಡಾಕ್ಯುಮೆಂಟರಿ ಮತ್ತು ಮ್ಯೂಸಿಕ್ ವಿಡಿಯೋ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.

Belagavi Hostel Protest : ಕಲುಷಿತ ಆಹಾರ ಸೇವಿಸಿ 30 ವಿದ್ಯಾರ್ಥಿಗಳು ಅಸ್ವಸ್ಥ.. #pratidhvani

ಮಿಥುನ್ ಚಕ್ರವರ್ತಿ1979 ರಲ್ಲಿ ಹೆಲೆನಾ ಲ್ಯೂಕ್ ಜೊತೆ ಮದುವೆಯಾಗಿದ್ದರು. ಚಿತ್ರೀಕರಣ ವೇಳೆ ಮಿಥುನ್ ಚಕ್ರವರ್ತಿ ಅವರನ್ನು ಭೇಟಿಯಾದ ಹೆಲೆನಾ ಲ್ಯೂಕ್, ಮಿಥುನ್ ಜೊತೆ ಸ್ನೇಹ ಬೆಳೆಸಿದರು. ಅದು ಪ್ರೇಮಕ್ಕೆ ತಿರುಗಿತು. ಈ ವೇಳೆ ಸಾರಿಕಾ ಅವರಿಂದ ದೂರವಾಗಿದ್ದ ಮಿಥುನ್, ಹೆಲೆನಾ ಅವರನ್ನು ಪ್ರೀತಿಸಿ, ಮದುವೆಯಾದರು. ಆದರೆ ಮಿಥುನ್ ಮತ್ತು ಹೆಲೆನಾ ಲ್ಯೂಕ್ ದಾಂಪತ್ಯ ಕೇವಲ ನಾಲ್ಕು ತಿಂಗಳಿಗೆ ಮುರಿದು ಬಿತ್ತು. ಹೆಲೆನಾ ಲ್ಯೂಕ್ ಅವರಿಂದ ದೂರವಾದ ನಂತರ ನಟಿ ಯೋಗಿತಾ ಬಾಲಿ ಅವರ ಜೊತೆ ಸಪ್ತಪದಿ ತುಳಿದರು.

CS Patil : ರಾಜ್ಯಾದ್ಯಂತ ವರುಣನ ಭಾರಿ ಆರ್ಭಟ..! #pratidhvani

ಇವರಿಗೆ ಮಿಮೋಹ್ ಚಕ್ರವರ್ತಿ, ಉಷ್ಮೇ ಚಕ್ರವರ್ತಿ, ನಮಾಶಿ ಚಕ್ರವರ್ತಿ ಎಂಬ ಮಕ್ಕಳಿದ್ದಾರೆ. ನಂತರ ಇವರ ಪ್ರಪಂಚ ಸೇರಿದವರೇ ದಿಶಾನಿ ಚಕ್ರವರ್ತಿ. ಸದ್ಯ ದಿಶಾನಿ ಚಕ್ರವರ್ತಿ ಅವರ ನಿಶ್ಚಿತಾರ್ಥದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಹಲವರು ದಿಶಾನಿ ಅವರಿಗೆ ಶುಭಾಶಯ ಹೇಳುದ್ದಾರೆ. ಇದೇ ಡಿಸೆಂಬರ್ ನಲ್ಲಿ ಇಬ್ಬರ ಮದುವೆ ನಡೆಯುವ ಸಾಧ್ಯತೆಯೂ ಇದೆ. ದಿಶಾನಿ ಸದ್ಯ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದು, ಅಲ್ಲೇ ತಮ್ಮ ನಟನಾ ವೃತ್ತಿಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ತಮ್ಮ ವೈಯಕ್ತಿಕ ಜೀವನದ ಝಲಕ್ ಹಂಚಿಕೊಳ್ಳುತ್ತಿರುತ್ತಾರೆ.

 

 

 

 

 

 

 

 

 

 

 

 

 

 

 

 

 

 

Tags: #AdoptedDaughter#BollywoodNews#BollywoodUpdate#CelebrityLife#CelebrityWedding#DishaniChakraborty#EntertainmentUpdate#FilmIndustry#HollywoodConnection#LifestyleNews#MithunChakraborty#Showbiz#StarDaughter#trendingnews#WeddingBuzzCelebrityNewsengagementEntertainmentNewslovestoryviralnews
Previous Post

ಜೆಡಿಎಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ?: ಚೆಲುವರಾಯಸ್ವಾಮಿ ವಾಗ್ದಾಳಿ

Next Post

110 ದಿನಗಳ ಸಂಘರ್ಷಕ್ಕೆ ಬ್ರೇಕ್: ಅಮೆರಿಕ–ಇರಾನ್ ನಡುವೆ ಶಾಂತಿ ಒಪ್ಪಂದ: ಷರತ್ತುಗಳು ಇಲ್ಲಿವೆ

Related Posts

ಕರ್ನಾಟಕದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಸಿದ್ಧತೆ; ಜನವರಿಯೊಳಗೆ ಪಕ್ಷ ಘೋಷಣೆ: ಚೇತನ್ ಅಹಿಂಸಾ
Top Story

ಕರ್ನಾಟಕದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಸಿದ್ಧತೆ; ಜನವರಿಯೊಳಗೆ ಪಕ್ಷ ಘೋಷಣೆ: ಚೇತನ್ ಅಹಿಂಸಾ

by ಪ್ರತಿಧ್ವನಿ
August 8, 2026
0

ಸ್ಯಾಂಡಲ್‌ವುಡ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಕರ್ನಾಟಕದಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಸಮಾನ ಮನಸ್ಕರು ಹಾಗೂ ವಿವಿಧ ಜನಪರ...

Read moreDetails
ಬೆಂಗಳೂರು ಟ್ರಾಫಿಕ್‌ಗೆ AI ಅಸ್ತ್ರ; ಜಾಮ್ ನಿಯಂತ್ರಣಕ್ಕೆ ಪೊಲೀಸರ ಹೊಸ ಮಾಸ್ಟರ್ ಪ್ಲ್ಯಾನ್

ಬೆಂಗಳೂರು ಟ್ರಾಫಿಕ್‌ಗೆ AI ಅಸ್ತ್ರ; ಜಾಮ್ ನಿಯಂತ್ರಣಕ್ಕೆ ಪೊಲೀಸರ ಹೊಸ ಮಾಸ್ಟರ್ ಪ್ಲ್ಯಾನ್

August 8, 2026
ಗೃಹ ಜ್ಯೋತಿ ಪರಿಷ್ಕರಣೆ: ಫಲಾನುಭವಿಗಳ ಆತಂಕಕ್ಕೆ ಬ್ರೇಕ್‌ ಹಾಕಿದ ಸಚಿವ ಕೆ.ಜೆ ಜಾರ್ಜ್

ಕೆಪಿಟಿಸಿಎಲ್‌ನ ‘ಡಾರ್ಕ್ ಫೈಬರ್’ ವಾಣಿಜ್ಯ ಬಳಕೆಗೆ: ₹130 ಕೋಟಿ ಹೆಚ್ಚುವರಿ ಆದಾಯದ ನಿರೀಕ್ಷೆ

August 8, 2026
ತಮಿಳುನಾಡು ಜನ ಮಾತ್ರ ರೈತರಾ? ಕರ್ನಾಟಕದವರು ರೈತರಲ್ಲವೇ?-ಹೆಚ್.ಡಿ ಕುಮಾರಸ್ವಾಮಿ

ಖಾತೆ ಹಂಚಿಕೆ ವಿಳಂಬ ಕಾಂಗ್ರೆಸ್ ದಿವಾಳಿತನ ತೋರುತ್ತದೆ: ಹೆಚ್.ಡಿ ಕುಮಾರಸ್ವಾಮಿ

August 8, 2026
ಶಿವಗಂಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕ ದಿಢೀರ್‌ ನಾಪತ್ತೆ: ಶೋಧ ಕಾರ್ಯ ಚುರುಕು

ಶಿವಗಂಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕ ದಿಢೀರ್‌ ನಾಪತ್ತೆ: ಶೋಧ ಕಾರ್ಯ ಚುರುಕು

August 8, 2026
Next Post
110 ದಿನಗಳ ಸಂಘರ್ಷಕ್ಕೆ ಬ್ರೇಕ್: ಅಮೆರಿಕ–ಇರಾನ್ ನಡುವೆ ಶಾಂತಿ ಒಪ್ಪಂದ: ಷರತ್ತುಗಳು ಇಲ್ಲಿವೆ

110 ದಿನಗಳ ಸಂಘರ್ಷಕ್ಕೆ ಬ್ರೇಕ್: ಅಮೆರಿಕ–ಇರಾನ್ ನಡುವೆ ಶಾಂತಿ ಒಪ್ಪಂದ: ಷರತ್ತುಗಳು ಇಲ್ಲಿವೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada