ಮಾಜಿ ಪ್ರಧಾನಿ ದೇವೇಗೌಡರ (Devegowda) ಹಿರಿಯ ಮಗ ,ಮಾಜಿ ಸಚಿವ ,ಶಾಸಕ ಎಚ್ ಡಿ ರೇವಣ್ಣರನ್ನ (HD Revanna) ದೇವೇಗೌಡರ ನಿವಾಸದಲ್ಲಿ ಎಸ್ಐಟಿ (SIT) ಅಧಿಕಾರಿಗಳು ಬಂಧಿಸಿದ್ದಾರೆ . ಕೆ ಆರ್ ನಗರದಲ್ಲಿ (KR nagar) ರೇವಣ್ಣ ಮೇಲೆ ದಾಖಲಾಗಿದ್ದ ಕಿಡ್ನಾಪ್ ಪ್ರಕರಣದಲ್ಲಿ (Kidnap case) ಜಾಮೀನು ದೊರಕದ ಹಿನ್ನೆಲೆ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ಕೆ ಆರ್ ನಗರದಲ್ಲಿ ಎಚ್ ಡಿ ರೇವಣ್ಣ ಮೇಲೆ ದಾಖಲಾಗಿದ್ದ ದೂರಿಗೆ ಸಂಬಂಧಪಟ್ಟಂತೆ ರೇವಣ್ಣ ಪರ ವಕೀಲರು (Lawyer) ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಕೈಗೆತ್ತಿಕೊಂಡ ನ್ಯಾಯಾಲಯ ,ಈ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ರೇವಣ್ಣರಿಗೆ ಜಾಮೀನು ನೀಡಲು ನಿರಾಕರಿಸಿತ್ತು .ಹೀಗಾಗಿ ಎಸ್ಐಟಿ ಟೀಮ್ ರೇವಣ್ಣರನ್ನ ಬಂಧಿಸಿದೆ.

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ (Sexual harassment) ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಸಂತ್ರಸ್ತೆ ಕಿಡ್ನ್ಯಾಪ್ ಆಗಿದ್ದಾರೆ ಎಂಬ ದೂರನ್ನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಮಗ ದಾಖಲು ಮಾಡಿದರು. ಈ ಪ್ರಕರಣದಲ್ಲಿ ಏ2 ಆರೋಪಿ ಸತೀಶ್ ಬಾಪುರ ನ್ ನಿನ್ನೆಯೇ ಎಸ್ ಐ ಟಿ ವರ್ಷಕ್ಕೆ ಪಡೆದಿತ್ತು ಇಂದು ಆರೋಪಿ ರೇವಣ್ಣರನ್ನ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.