ಕೋವಿಡ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ನೀಡುವ ವೈದ್ಯರ ವಿರುದ್ದ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಲಾಗುವುದು ಎಂದು ಸಚಿವ ಡಾ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಕುರಿತು ಸರ್ಕಾರ ಇದಕ್ಕಾಗಿ ಪ್ಯಾನಲಿಸ್ಟ್ ರೆಡಿ ಮಾಡ್ತಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುತ್ತೇವೆ. ಬೆಂಗಳೂರಿನಲ್ಲಿ 14-15 ತಜ್ಞರ ತಂಡ ಹಾಗೂ ಜಿಲ್ಲೆಗಳಲ್ಲಿ ತಜ್ಞರ ಪ್ಯಾನಲ್ ಮಾಡ್ತೀವಿ ಆ ಸಮಿತಿ ಮಾತ್ರ ಅಧಿಕೃತವಾಗಿ ಕೊರೊನಾ ಬಗ್ಗೆ ಮಾಹಿತಿ ನೀಡಬೇಕು. ಕೊರೊನಾ ಬಗ್ಗೆ ಈ ಪ್ಯಾನಲ್ ಕೊಡೋ ಮಾಹಿತಿ ಮಾತ್ರ ಅಧಿಕೃತ ಎಂದು ತಿಳಿಸಿದ್ದಾರೆ.
ಮುಂದುವರೆದು, ಏನೇನೋ ಹೇಳಿ ಗೊಂದಲಕ್ಕೆ ಕಾರಣ ಆಗಿದೆ. ಹೀಗಾಗಿ ಗೊಂದಲ ಆಗಬಾರದು ಅಂತ ಪ್ಯಾನಲ್ ರಚನೆ ಮಾಡ್ತಿದ್ದೇವೆ. ಈ ಪ್ಯಾನಲ್ ನಲ್ಲಿ ಇರೋ ವೈದ್ಯರು ಮಾತ್ರ ಅಧಿಕೃತವಾಗಿ ಮಾತನಾಡಬೇಕು. ಬೇರೆ ಅವ್ರು ಏನೇನೋ ಮಾತಾಡಿದ್ರೆ ಕಾನೂನಿ ರೀತಿ ಕ್ರಮ ತಗೋತೀವಿ ಎಂದು ಆರೋಗ್ಯ ಸಚಿವ ಸುಧಾಕರ್ ಎಚ್ಚರಿಸಿದ್ದಾರೆ.
ಈ ವೇಳೆ ಸ್ವಪಕ್ಷಿಯರಿಂದಲೇ ವೀಕೆಂಡ್ ಕರ್ಪ್ಯೂಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು ಎಲ್ಲರ ಅಭಿಪ್ರಾಯವನ್ನ ಸರ್ಕಾರ ಗಮನಿಸುತ್ತಿದೆ. ಇದು ಜನಪರ ಸರ್ಕಾರ ಜನರ ಜೀವ ಉಳಿಸುವುದು ನಮ್ಮ ಕರ್ತವ್ಯ ಶುಕ್ರವಾರ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಹೇಳಿದ್ದಾರೆ.