• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹಾಸನಾಂಬೆ ದರ್ಶನಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ₹5 ಲಕ್ಷದ ಟಿಕೆಟ್ ಖರೀದಿಸಿದ ಸಚಿವ ಶಿವಲಿಂಗೇಗೌಡ! ನಂತರ ಅದನ್ನು ಕೊಟ್ಟಿದ್ಯಾರಿಗೆ ?

Shivakumar by Shivakumar
November 4, 2026
in ಕರ್ನಾಟಕ
0
ಹಾಸನಾಂಬೆ ದರ್ಶನಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ₹5 ಲಕ್ಷದ ಟಿಕೆಟ್ ಖರೀದಿಸಿದ ಸಚಿವ ಶಿವಲಿಂಗೇಗೌಡ! ನಂತರ ಅದನ್ನು ಕೊಟ್ಟಿದ್ಯಾರಿಗೆ ?
Share on WhatsAppShare on FacebookShare on Telegram

ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕಾಗಿ ಸಚಿವ ಕೆ.ಎನ್. ರಾಜಣ್ಣ ಅಲ್ಲ, ಸಚಿವ ಶಿವಲಿಂಗೇಗೌಡ ಅವರು ತಮ್ಮ ಆಪ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಬರೋಬ್ಬರಿ ₹5 ಲಕ್ಷ ಮೌಲ್ಯದ ದರ್ಶನ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ತಲಾ ₹1,000 ಮೌಲ್ಯದ ಒಟ್ಟು 500 ಟಿಕೆಟ್‌ಗಳನ್ನು ಖರೀದಿಸಿರುವುದು ಗಮನ ಸೆಳೆದಿದೆ.ಕಾರ್ಯಕರ್ತರಿಗಾಗಿ ಪ್ರತ್ಯೇಕವಾಗಿ ಗೋಲ್ಡನ್ ಕಾರ್ಡ್‌ಗಳನ್ನು ಮುದ್ರಿಸುವ ಬದಲು ಸಚಿವರು ನೇರವಾಗಿ ದರ್ಶನ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಹೆಚ್ಚುವರಿಯಾಗಿ ಗೋಲ್ಡನ್ ಕಾರ್ಡ್‌ಗಳನ್ನು ಮುದ್ರಿಸಿದರೆ ಸಾಮಾನ್ಯ ಭಕ್ತರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

 

ಟಿಕೆಟ್ ಖರೀದಿಸಿದ ಬಳಿಕ ಅವುಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಅವರಿಗೆ ಹಸ್ತಾಂತರಿಸಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಹಾಸನಾಂಬೆಯ ದರ್ಶನಕ್ಕೆ ವ್ಯವಸ್ಥೆ ಮಾಡಿಸಬೇಕೆಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವ ಹಾಸನಾಂಬೆ ದೇವಿಯ ದರ್ಶನ ಅಕ್ಟೋಬರ್ 29ರಿಂದ ಆರಂಭವಾಗಿದೆ. ನವೆಂಬರ್ 8ರವರೆಗೆ ಒಟ್ಟು 11 ದಿನಗಳ ಕಾಲ ನಡೆಯುವ ಈ ಐತಿಹಾಸಿಕ ಉತ್ಸವದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.

ಸಂಪ್ರದಾಯದಂತೆ ಉತ್ಸವದ ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ದಿನಗಳಲ್ಲಿ ಭಕ್ತರಿಗೆ ಉಚಿತ ದರ್ಶನದ ವ್ಯವಸ್ಥೆಯಿದ್ದು, ಶೀಘ್ರ ದರ್ಶನ ಬಯಸುವವರಿಗೆ ವಿಶೇಷ ದರ್ಶನದ ಟಿಕೆಟ್‌ಗಳನ್ನು ಒದಗಿಸಲಾಗುತ್ತಿದೆ.

 

ಭಕ್ತರು ₹1,000 ಮತ್ತು ₹300 ಮೌಲ್ಯದ ದರ್ಶನ ಟಿಕೆಟ್‌ಗಳು, ಲಾಡು ಟಿಕೆಟ್‌ಗಳು ಹಾಗೂ ಇತರ ಸೇವೆಗಳನ್ನು ಅಧಿಕೃತ ವೆಬ್‌ಸೈಟ್ https://srihassanaambatemple.com/ ಮೂಲಕ ಅಥವಾ 73539 39611 ಸಂಖ್ಯೆಯ ವಾಟ್ಸ್‌ಆ್ಯಪ್ ಮೂಲಕ ಬುಕ್ ಮಾಡಬಹುದು. ಇ-ಹುಂಡಿ ಹಾಗೂ ದೇಣಿಗೆ ನೀಡುವ ವ್ಯವಸ್ಥೆಯೂ ಇದೆ ಎಂದು ತಿಳಿಸಲಾಗಿದೆ.ಗೋಲ್ಡನ್ ಕಾರ್ಡ್ ದರ್ಶನಕ್ಕೆ ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಅವಕಾಶವಿದೆ. ಪ್ರೋಟೋಕಾಲ್ ದರ್ಶನದ ಸಮಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ನಿಗದಿಪಡಿಸಲಾಗಿದೆ.

ದೇವಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಬೆಂಗಳೂರು ಮತ್ತು ಮೈಸೂರಿನಿಂದ ಹಾಸನಾಂಬೆ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ‘ಭಕ್ತಿಯ ಹೆಜ್ಜೆಗಳಿಗೆ ಕೆಎಸ್‌ಆರ್‌ಟಿಸಿ ಜೊತೆಯಾಗಲಿದೆ’ ಎಂಬ ಪರಿಕಲ್ಪನೆಯೊಂದಿಗೆ ನೂತನ ‘ಅಶ್ವಮೇಧ’ ಬಸ್‌ಗಳ ಮೂಲಕ ‘ಶ್ರೀ ಹಾಸನಾಂಬ ಪ್ಯಾಕೇಜ್ ಟೂರ್’ ಘೋಷಿಸಲಾಗಿದೆ.ಈ ಪ್ಯಾಕೇಜ್‌ನ ಪ್ರಮುಖ ಆಕರ್ಷಣೆಯೆಂದರೆ ₹1,000 ಮೌಲ್ಯದ ಹಾಸನಾಂಬೆ ವಿಶೇಷ ದರ್ಶನದ ಟಿಕೆಟ್ ಕೂಡ ಇದರಲ್ಲಿ ಸೇರಿರುವುದು. ಇದರಿಂದ ದೂರದ ಊರುಗಳಿಂದ ಬರುವ ಭಕ್ತರು ಸಾರಿಗೆ ಮತ್ತು ದರ್ಶನದ ವ್ಯವಸ್ಥೆಯನ್ನು ಒಂದೇ ಪ್ಯಾಕೇಜ್‌ನಲ್ಲಿ ಪಡೆಯಲು ಅನುಕೂಲವಾಗಲಿದೆ.

 

 

Tags: Ashwamedha BuscongressCongress workersGolden PassHassanHassan NewsHassanamba DarshanHassanamba JatreHassanamba Package TourHassanamba TempleK.N. Shivalinge Gowdakarnataka newsKarnataka PoliticsKarnataka TourismKSRTCSpecial Darshan TicketTemple Festival
Previous Post

ಶ್ರೀರಾಮ ಮಂದಿರದ ದೇಣಿಗೆ ಹಣಕ್ಕೆ ಕನ್ನ?ರಾಮಮಂದಿರದ ದೇಣಿಗೆ ಎಣಿಕೆ ವೇಳೆ ಅಕ್ರಮ?

Next Post

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ

Related Posts

A shock for passengers during the Diwali season: KSRTC and BMTC bus ticket fares hiked suddenly
Top Story

ದೀಪಾವಳಿ ಹೊತ್ತಲ್ಲೇ ಪ್ರಯಾಣಿಕರಿಗೆ ಶಾಕ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ದಿಢೀರ್ ಏರಿಕೆ

by Shivakumar
November 4, 2026
0

ಬೆಂಗಳೂರು :  ದೀಪಾವಳಿ (Deepavali) ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಭಾರಿ ಆಘಾತ ನೀಡಿದೆ. ಇತ್ತೀಚೆಗಷ್ಟೇ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿದ್ದ...

Read moreDetails
22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?

22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?

November 4, 2026
ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

November 3, 2026
Praja Seva Andolana' (People's Service Movement) organized with the objective of providing solutions to people's problems: Minister Santosh S. Lad

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್

November 3, 2026
Sites to be allotted this year to 5 lakh poor people in the state who do not own a home: CM D.K. Shivakumar announces

ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ 5 ಲಕ್ಷ ಬಡವರಿಗೆ ಈ ವರ್ಷವೇ ಸೈಟ್ ಹಂಚಿಕೆ : ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

November 3, 2026
Next Post
ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada