ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಗುತ್ತಿಗೆದಾರದಿಂದ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂಬ ನಿರಂತರ ಆರೋಪವನ್ನು ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಮಾಡಿದ್ದು, ಇದೇ ವಿಚಾರಗಳನ್ನು ಜನರ ಮುಂದಿಟ್ಟು ಚುನಾವಣೆಯಲ್ಲಿ ಬಹುಮತ ಗಳಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರಕರಣವನ್ನು ತನಿಖೆಗೆ ವಹಿಸಿತ್ತು.
ಈ ಹಿಂದೆ ಅಂಬಿಕಾಪತಿ ಎಂಬ ಗುತ್ತಿಗೆದಾರರು ಎನ್.ಡಿ ಟಿವಿ ಗೆ ನೀಡಿದ್ದ ಸಂದರ್ಶನದಲ್ಲಿ, ಬೆಂಗಳೂರಿನ ಆಟದ ಮೈದಾನದ ಕಾಮಗಾರಿಯೊಂದಕ್ಕೆ ಸಂಬಂಧಪಟ್ಟಂತೆ ತಾವು 40 ಪರ್ಸೆಂಟ್ ಕಮಿಷನ್ ನೀಡಿರುವುದಾಗಿ ಆರೋಪ ಮಾಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ತನಿಖಾ ತಂಡ ಸುಧೀರ್ಘವಾದ ತನಿಖೆ ನಡೆಸಿ, ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ವರದಿ ನೀಡಿದ್ದು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ತಂದಿತ್ತು. ಹೀಗಾಗಿ ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ ತನಿಖೆ ನಡೆಸಿರುವ ಲೋಕಾಯುಕ್ತ ತನಿಕ ತಂಡ ಅಂಬಿಕಾ ಪತಿಯವರನ್ನು ವಿಚಾರಣೆಗೆ ಒಳಪಡಿಸಲು ಅವರ ನಿವಾಸಕ್ಕೆ ತೆರಳಿದಾಗ ಅಂಬಿಕಾ ಪತಿ ಅದಾಗಲೇ ನಿಧನರಾಗಿದ್ದರು. ಹೀಗಾಗಿ ಅವರ ಪುತ್ರನಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರದ ಕಾರಣ ಈ ರೀತಿಯ ವರದಿಯನ್ನು ನೀಡಿದ್ದಾರೆ ಆದರೆ ಇದರ ಅರ್ಥ ಬಿಜೆಪಿಗರಿಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂಬುದಲ್ಲ ಎಂದು ಪತ್ರಿಕಾ ಪ್ರಕಟಣೆ ಹೊಡೆಸಿದ್ದಾರೆ.
ಹೀಗಾಗಿ ಕೇವಲ 40 ಪರ್ವೆಂಟ್ ಮಾತ್ರವಲ್ಲದೆ ಇನ್ನೂ ಅನೇಕ ಹಗರಣಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ.
545 PSI ಹಗರಣ ನಡೆದೇ ಇಲ್ಲವೆಂದು ವಾದಿಸುತ್ತಿದ್ದ ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ. ನಮ್ಮ ಸರ್ಕಾರವು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಆಯೋಗದ ಮಧ್ಯಂತರ ವರದಿಯಲ್ಲಿ ಕೋವಿಡ್ ಅವಧಿಯಲ್ಲಿ ನಡೆದಿದ್ದ ಅಕ್ರಮ ಸಾಬೀತಾಗಿದ್ದು, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಶ್ರೀ ರಾಮುಲುರವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಸೆಕ್ಷನ್ 7 ಹಾಗೂ ಸೆಕ್ಷನ್ 11ರ ಅಡಿ ವಿಚಾರಣೆ ನಡೆಸಬಹುದೆಂದು ವರದಿ ಸಲ್ಲಿಸಿರುತ್ತಾರೆ.
•KKRDB ಯಲ್ಲಿಯೂ ಸಹ ಹಗರಣ ನಡೆದೇ ಇಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು, ಆದರೆ ಈಗ ನಿವೃತ್ತ IAS ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ,
ಗಂಗಾ ಕಲ್ಯಾಣ ಯೋಜನೆಯಲ್ಲಿನ ಅಕ್ರಮವನ್ನು ನಿರಾಕರಿಸಲಾಗಿತ್ತು, ಆದರೆ ಇಲಾಖಾ ತನಿಖೆಯಲ್ಲಿ ಆರೋಪ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಎಂದು ಪ್ರಿಯಾಂಕ್ ಖರ್ಗೆ ಜರಿದಿದ್ದಾರೆ.