ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಈಗ ಸಚಿವ ಸಂಪುಟ ಪುನಾರಚನೆಯ (Cabinet reshuffle) ಚರ್ಚೆ ಜೋರಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ (Cm siddaramaih) ಕೂಡ ದೆಹಲಿಯ (Delhi) ಕಡೆ ಪ್ರಯಾಣ ಬೆಳೆಸಿದ್ದು, ಕೆಲವು ಹಾಲಿ ಸಚಿವರ ಎದೆಯಲ್ಲಿ ಈಗಾಗಲೇ ಢವ ಢವ ಹೆಚ್ಚಾಗಿದೆ. ಕೆಲವು ಸಚಿವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡುವ ಯೋಚನೆಯಿದ್ದು, ಈ ಪಟ್ಟಿಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ (KH muniyappa) ಹೆಸರು ಕೇಳಿಬರುತ್ತಿದೆ.

ಹೌದು, ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಮುನಿಯಪ್ಪ, ಈ ಬಾರಿ ಹೈಕಮಾಂಡ್ ನಿರ್ದೇಶನದಂತೆ ದೇವನಹಳ್ಳಿಯಿಂದ (Devanahalli) ವಿಧಾನಸಭೆ ಸ್ಪರ್ಧೆ ಮಾಡಿ ಗೆದ್ದು ಶಾಸಕರಾಗಿದ್ದು, ನಂತರ ಸಿದ್ದು ಸಂಪುಟದಲ್ಲಿ ಆಹಾರ ಸಚಿವರಾಗಿ ಒಂದೂವರೆ ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಆದ್ರೆ ಈಗ ಅವರ ಸ್ಥಾನದ ಮೇಲೆ ತೂಗುಗತ್ತಿ ಇದೆ ಎನ್ನಲಾಗ್ತಿದೆ.
ಹೀಗಾಗಿ ಈಗಾಗಲೇ ಸಚಿವ ಮುನಿಯಪ್ಪ ಅಲರ್ಟ್ ಆಗಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಮ ಅಭಿಪ್ರಾಯ ತಿಳಿಸಲು ಮುಂದಾಗಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಾಗಿದ್ದು, ಆದ್ರೆ ತಮ್ಮ ಖಾತೆಯನ್ನು ಪುತ್ರಿ ರೂಪಕಲಾಗೆ (Roopakala) ನೀಡಬೇಕು ಎಂಬ ಡಿಮ್ಯಾಂಡ್ ಇಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.