ಬೆಂಗಳೂರು : ಕೊಯ್ಲೋತ್ತರ ಚಟುವಟಿಕೆಗಳಲ್ಲಿ ರೈತರ ಸಬಲೀಕರಣಕ್ಕೆ ರೂಪಿಸಲಾಗಿರುವ ಕೃಷಿ (Forming) ಮೂಲಭೂತ ಸೌಕರ್ಯ ನಿಧಿಯ 4500 ಕೋಟಿ ರೂ ಅನುಧಾನವನ್ನು ಸಂಪೂರ್ಣ ಸದ್ಬಳಕೆ ಮಾಡುವಂತೆ ಕೃಷಿ ಸಚಿವ ಎನ್ .ಚಲುವರಾಯಸ್ವಾಮಿ (Chuluvaraayaswamy) ಕರೆ ನೀಡಿದ್ದಾರೆ.

ಕೃಷಿ ಆಯುಕ್ತಾಲಯದ ಸಂಗಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೃಷಿ ಮೂಲಭೂತ ಸೌಕರ್ಯ ನಿಧಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಕೊಯ್ಲೋತ್ತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಗ್ಯಾರಂಟಿ ಇಲ್ಲದೆ 2 ಕೋಟಿ ರೂ ವರಗೆ ಕಡಿಮೆ ಬಡ್ಡಿದರದಲ್ಲಿ ಸಾಲ (Loan) ಸೌಲಭ್ಯ ನೀಡಲು ಅವಕಾಶವಿದೆ. ಆದರೆ ಇದರ ಅನುಷ್ಠಾನ ಚುರುಕಾಗಬೇಕು ರೈತರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯ ಇದೆ ಎಂದರು.

ಪ್ರತಿ ಕೃಷಿಕರಿಗೆ ಕೇಂದ್ರದ ಕೃಷಿ ಮೂಲಭೂತ ಸೌಕರ್ಯ ನಿಧಿಯ ಬಗ್ಗೆ ಅರಿವು ಮೂಡಿಸಬೇಕು.
ಬ್ಯಾಂಕ್ ಗಳು ಸಹ ಇದಕ್ಕೆ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು. ಪ್ರತಿ ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳು ,ಜಿಲ್ಲಾ ಪಂಚಾಯತ್ ಸಿ.ಇ.ಒ ಗಳು ಪ್ರತಿ ತಿಂಗಳು ಹಾಗೂ ಕೆ.ಡಿ.ಪಿ ಸಭೆಗಳಲ್ಲಿ ಪ್ರಗತಿ ಪರಿಶೀಲಿಸಬೇಕು.ಈ ಬಗ್ಗೆ ತಾವೂ ಸಹ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ದೊಡ್ಡ ಮಟ್ಟದ ಸಾಲ ಸೌಲಭ್ಯ ಸುಲಭವಾಗಿ ಸಿಗುವಾಗ ಅದು ರೈತರಿಗೆ ತಲುಪಬೇಕು ಎಂದು ಅವರು ಕಾಳಜಿ ವ್ಯಕ್ತಪಡಿಸಿದರು.
ಗೊದಾಮುಗಳು ಮತ್ತು ಸೈಲೋಗಳು, ಪ್ಯಾಕ್ ಹೌಸ್ ಗಳು, ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು, ಶೀತಲ ಗೃಹ ಸರಪಣಿಗಳು, ಸಾಗಾಣಿಕೆ ಸೌಲಭ್ಯಗಳು, ಸಾಗಾಣಿಕೆ ಸೌಲಭ್ಯ ಗಳು,ಪ್ರಾಥಮಿಕ ಸಂಸ್ಕರಣೆ ಕೇಂದ್ರಗಳು, ಹಣ್ಣು ಮಾಗಿಸುವ ಘಟಕಗಳು, ಮೌಲ್ಯ ಮಾಪನ ಘಟಕಗಳು ಇ ಮಾರುಕಟ್ಟೆ ವೇದಿಕೆ ಸೇರಿದಂತೆ ಸರಬರಾಜು ಸರಪಳಿ ಸೇವೆಗಳು, ಸಂಕುಚಿತ ಜೈವಿಕ ಅನಿಲ ಸ್ಥಾವರ
, ಸಂಯೋಜಿತ ಸ್ಪುರುಲಿನಾ ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳು, ರೇಷ್ಮೆ ಕೃಷಿ ಸಂಸ್ಕರಣಾ ಘಟಕಗಳು, ಜೇನು ಸಂಸ್ಕರಣಾ ಘಟಕ ಪ್ಲಾಂಟ್ ಕ್ವಾರಂಟೈನ್ ಘಟಕಗಳನ್ನು ಸ್ಥಾಪಿಸಲು ಸಾಲ ಸೌಲಭ್ಯ ಸಿಗಲಿದ್ದು ಈ ಬಗ್ಗೆ ವ್ಯಪಕ ಪ್ರಚಾರ ನೀಡಿ ,ಬ್ಯಾಂಕ್ ಗಳೊಂದಿಗೆ ಸಮನ್ವಯ ಮಾಡಿ ಎಂದು ಹೇಳಿದರು.
ಕೃಷಿ ಇಲಾಖೆ ಕಾರ್ಯದರ್ಶಿ ವಿ. ಅನ್ಬುಕುಮಾರ್ ಮಾತನಾಡಿ, ಇದೊಂದು ಅತ್ಯಂತ ಉತ್ತಮ ಯೋಜನೆಯಾಗಿದ್ದು ಇದನ್ನು ವ್ಯವಸ್ಥಿತವಾಗಿ ಉತ್ತೇಜಿಸಬೇಕಿದೆ ಎಂದರು.
ಗ್ಯಾರಂಟಿ ರಹಿತ ಹಾಗೂ ಸರ್ಕಾರದಿಂದ ಶೇ 3% ಬಡ್ಡಿ ರಿಯಾಯಿತಿ ನೀಡುವ ಯೋಜನೆ ಇದಾಗಿದೆ ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಬ್ಯಾಂಕ್ ಗಳೊಂದಿಗೆ ಅಂತರ ಕಡಿಮೆ ಮಾಡುವ ಸಂಪರ್ಕ ಸೇತುವಾಗಿ ಕೆಲಸ ಮಾಡಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಲೀಡ್ ಬ್ಯಾಂಕ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅನುಷ್ಠಾನ ಚುರುಕುಗೊಳಿಸಲು ಪತ್ರ ಬರೆಯುವುದಾಗಿ ಹೇಳಿದರು.
ಕೃಷಿ ಉತ್ಪಾದನೆ ಹೆಚ್ಚುತ್ತಿದೆ. ಅದರೆ ಕೊಯ್ಲೋತ್ತರ ನಿರ್ವಹಣೆಯಲ್ಲಿ ನಮ್ಮ ರೈತರು ಇನ್ನೂ ಹಿಂದಿದ್ದಾರೆ .ಹಲವು ಮುಂದುವರೆದ ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನ ತೃಪ್ತಿಕರವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಹೇಳಿದರು.
ಭಾರತ ಸರ್ಕಾರದ ಕೃಷಿ ಮೂಲಭೂತ ಸೌಕರ್ಯ ನಿಧಿಯ ನಿರ್ದೇಶಕ ಕೆ.ಅರ್. ಮೀನಾ ಅವರು ಮಾತನಾಡಿ, ಕೃಷಿಯ ಸಮಗ್ರ ಅಭಿವೃದ್ಧಿಯಿಂದ ಮಾತ್ರ ದೇಶ ಸರ್ವತೋಮುಖ ಪ್ರಗತಿ ಸಾಧ್ಯ. ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಿದೆ ಆದರೆ ಅದರ ನಿರ್ವಹಣೆಯ ಮೂಲಭೂತ ಸೌಕರ್ಯಗಳಲ್ಲಿ ದೊಡ್ಡ ಕೊರತೆ ಇದೆ .ಆದರೆ ಕೃಷಿ ಮೂಲಭೂತ ಸೌಕರ್ಯ ನಿಧಿಯಡಿ ದೇಶದಲ್ಲಿ 1.5 ಲಕ್ಷ ಕೋಟಿ ಹಣ ಲಭ್ಯ ಇದ್ದು ರೈತರು ಸಾಲ ಸೌಲಭ್ಯ ಸರಿಯಾಗಿ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಕೃಷಿ ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಡಾ ಜಿ.ಟಿ ಪುತ್ರ, ಜಲಾನಯನ ಇಲಾಖೆ ಆಯುಕ್ತ ಗಿರೀಶ್, ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.












