ವೇದಿಕೆಯಲ್ಲೆ ಎಲ್ಲಾ ಉತ್ತರವನ್ನ ಕೊಟ್ಟಿದ್ದೇನೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಪೂರ್ಣಪ್ರಮಾಣದ ಸಚಿವ ಸಂಪುಟ ಉತ್ತರ ಕೊಟ್ಟಿದ್ದೇವೆ. 59 ಸಾವಿರ ಕೋಟಿಯ ಐದು ಭರವಸೆಯನ್ನು ಜನಕ್ಕೆ ತಲುಪಿಸುವ ಕೆಲಸ ಮಾಡಿದ್ದೇವೆ. ನಾಲ್ಕು ಕ್ಯಾಬಿನೆಟ್ ನಲ್ಲೂ ಕಡೆಯವರೆಗೂ ಬಿಜೆಪಿ ಮಾಡಿಲ್ಲ ಎಂದು ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 34ನ್ನು ನಾವು ರಚನೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಹೆಚ್ಚು ಸಮಸ್ಯೆ ಇದೆ, ಅಭಿವೃದ್ಧಿ ಹಿನ್ನಡೆಯಾಗಿದೆ. ಅದಕ್ಕೆ ಸಮಯ ಬೇಕು ಸಮಗ್ರ ಅಭಿವೃದ್ಧಿ ಮಾಡ್ತೇವೆ. ಮೂರು ಹಂತದಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡ್ತೇವೆ. ಕಡೆಯ ಎರಡೂ ವರ್ಷ ಜನರ ಜೊತೆ ಇರ್ತೇವೆ. ಮನ್ಮುಲ್ ನಿಂದ ಹಾಲು ಉತ್ಪಾದಕರಿಗೆ 1 ರೂ ಕಡಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇಸಿಗೆ ಇದ್ದ ಕಾರಣ ದರ ಹೆಚ್ಚಳ ಮಾಡಿದ್ರು. ಇವಾಗ ಮಳೆಗಾಲ ಒಂದು ರೂ. ಕಡಿತವಾಗಿದೆ. ನಾವು ಕೂಡ ಎರಡು ರೂ. ಜಾಸ್ತಿ ಮಾಡುತ್ತೇವೆ ಅಂತ ಹೇಳಿದ್ದೇವೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.


ಮುಂದೆ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮೈಶುಗರ್ ಕಾರ್ಖಾನೆ ಗೆ 50 ಕೋಟಿ ಮಂಜೂರು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬೆಲೆ ಬಗ್ಗೆ ತೀರ್ಮಾನ.
ಡಿಕೆಶಿ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಅವರು, ಸಿಎಂ ಆಗಿಲ್ಲ ಎಂದು ಡಿಕೆಶಿ ಅವರಿಗೆ ಯಾವುದೇ ರೀತಿಯ ಬೇಸರ ಇಲ್ಲ, ಸರ್ಕಾರ ಅಧಿಕಾರಕ್ಕೆ ತರುವ ಜವಾಬ್ದಾರಿ ಇತ್ತು. ಅತ್ಯಂತ ಸಂತೋಷ ಇದೆ ಅವರಿಗೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಇದೆ. ಒಳ್ಳೆಯ ಕೆಲಸ ಮಾಡ್ತೇವೆ, ಕಾಂಗ್ರೆಸ್ ಪಕ್ಷ ಉಳಿಸುತ್ತೇವೆ. ಕಾಂಗ್ರೆಸ್ ಗ್ಯಾರಂಟಿ ಜಾರಿ ಮಾಡಿ ಅಭಿವೃದ್ಧಿ ಮಾಡ್ತೇವೆ. ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಕಾಂಗ್ರೆಸ್ ಪಕ್ಷ ಕಟ್ಟುತ್ತೇವೆ. ಲೋಕಸಭಾ ಚುನಾವಣೆ ಸಿದ್ದತೆ ವಿಚಾರದ ಬಗ್ಗೆ ಮಾತನಾಡಿ, ಸರಿಯಾದ ಅಭ್ಯರ್ಥಿ ಆಯ್ಕೆ ಮಾಡ್ತೇವೆ. ಮುಂದೆ ಬರುವ ಸವಾಲನ್ನು ಎದುರಿಸುತ್ತೇವೆ. ನರೇಂದ್ರ ಸ್ವಾಮಿಗೆ ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಮಾತನಾಡಿ, ನರೇಂದ್ರ ಸ್ವಾಮಿಗೆ ಸಚಿವ ಸ್ಥಾನ ಹಾಗಲೇ ಬೇಕಿತ್ತು. ಆಕಸ್ಮಿಕವಾಗಿ ಕೈ ತಪ್ಪಿದೆ, ಕೆಲವೇ ದಿನಗಳಲ್ಲಿ ಅಥವಾ ಕೆಲವೆ ವರ್ಷದಲ್ಲಿ ಸಚಿವರಾಗುತ್ತಾರೆ ಎಂದು ಹೇಳಿದರು.