• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮೇಕೆದಾಟು ಸವಾಲಿಗೆ ತಿರುಗೇಟು ಕೊಟ್ಟ ಸಚಿವ ಚಲುವರಾಯಸ್ವಾಮಿ..!

ಕೃಷ್ಣ ಮಣಿ by ಕೃಷ್ಣ ಮಣಿ
March 6, 2025
in ಕರ್ನಾಟಕ, ರಾಜಕೀಯ
0
ಮೇಕೆದಾಟು ಸವಾಲಿಗೆ ತಿರುಗೇಟು ಕೊಟ್ಟ ಸಚಿವ ಚಲುವರಾಯಸ್ವಾಮಿ..!
Share on WhatsAppShare on FacebookShare on Telegram

ADVERTISEMENT

ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಅನುಮತಿ ಕೊಡಬೇಕು ಎಂದು ರಾಜ್ಯ ಸರ್ಕಾರ ಪದೇ ಪದೇ ದಾಳಿ ಮಾಡುತ್ತಲೇ ಇರುತ್ತದೆ. ಕೇಂದ್ರ ಪರಿಸರ ಇಲಾಖೆಯಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಒಪ್ಪಿಗೆ ಕೊಡಿಸಬೇಕು ಎಂದು ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ ಶಿವಕುಮಾರ್​ ಆಗ್ರಹ ಮಾಡಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್​ ಮಾತಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ರಾಮನಗರದಲ್ಲಿ ಟಾಂಗ್​ ಕೊಟ್ಟಿದ್ದಾರೆ.

ಅದೇನೋ ಮೇಕೆದಾಟು, ಮೇಕೆದಾಟು ಅಂತಾರೆ, ಈಗ ನಟ್ಟು, ಬೋಲ್ಟು ಟೈಟ್ ಅಂತಾರೆ. ನಿಮಗೆ 136 ಜನ ಕೊಟ್ಟಿರೋದು ಏಕೆ..? ಮೇಕೆದಾಟು ಮಾಡೋದಕ್ಕಲ್ವಾ..? ಮಾಡಿ. ನಿಮ್ಮ ಪಾರ್ಟ್ನರ್ ಪಾರ್ಟಿ ತಮಿಳುನಾಡಿನಲ್ಲಿ ಸರ್ಕಾರ ಮಾಡ್ತಿದೆ. ಮೊದಲು ಅಲ್ಲಿಂದ ಅನುಮತಿ ತೆಗೆದುಕೊಂಡು ಬನ್ನಿ. ಆ ಬಳಿಕ 10 ನಿಮಿಷದಲ್ಲಿ ಪ್ರಧಾನಿಗಳ ಬಳಿ ನಾನು ಪರ್ಮಿಷನ್ ಕೊಡಿಸ್ತೀನಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ. ರಾಜ್ಯದಲ್ಲಿ ದುಡ್ಡಿಗೆ ಸಮಸ್ಯೆ ಇಲ್ಲ, ರೈತರ ಸಾಲಮನ್ನಾ ಮಾಡಿ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ಇವರಿಗ್ಯಾಕೆ ಅದು ಆಗ್ತಿಲ್ಲ. ಜನರ ತರಿಗೆ ಹಣವನ್ನ ಲೂಟಿ ಮಾಡಿಕೊಂಡು ಕೂತಿದ್ದಾರೆ‌ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಜನ ಯಾಕೆ ಇದನ್ನ ಸಹಿಸಿಕೊಳ್ತಿದ್ದೀರಿ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಶಾಲೆಗೆ ಶಿಕ್ಷಕರ ನೇಮಕ ಮಾಡ್ತಿಲ್ಲ, ರಾಜ್ಯದಲ್ಲಿ ಎರಡು ಮುಕ್ಕಾಲು ಲಕ್ಷ ಹುದ್ದೆ ಖಾಲಿ ಇಟ್ಕೊಂಡಿದ್ದೀರಿ. ಪ್ರಶ್ನೆ ಪತ್ರಿಕೆಗೆ ಎಷ್ಟು ಹಣ ನಿಗಧಿ ಮಾಡಿದ್ದೀರಿ. ಇದೆಲ್ಲ ಸಿದ್ದರಾಮಯ್ಯನವರ ಅವಧಿಯಲ್ಲಿ ಆಗ್ತಿರೋದು. ಈ ಸರ್ಕಾರ ಬಂಡ ಬಿದ್ದು ಹೋಗಿದೆ. ಮಾನ ಮರ್ಯಾದೆ ಏನು ಇಲ್ಲ, ಎಷ್ಟು ‌ಮಾತನಾಡಿದ್ರು ಅಷ್ಟೇ ಎಂದು ಅಕ್ಕೂರು ಗ್ರಾಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು. ಇದಕ್ಕೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

Umashree: ಹಾಲಿನ ಖರೀದಿ ದರ ಹೆಚ್ಚಳಕ್ಕೆ ಪರಿಶೀಲನೆ : ಕೆ.ವೆಂಕಟೇಶ್..! #milk #umashree #budgetsession

ಮೇಕೆದಾಟಿಗಾಗಿ ಡಿಎಂಕೆ ಪಕ್ಷವನ್ನ ಒಪ್ಪಿಸಲಿ ಎಂಬ ಹೆಚ್‌.ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಯಾವುದೇ ಮೈತ್ರಿ ಆಗೋದು ಸ್ಥಳೀಯ ವಿಚಾರಗಳಿಗೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಾಷ್ಟ್ರ ಮಟ್ಟದ ತೀರ್ಮಾನಕ್ಕೆ ಬದ್ದವಾಗಿರಲ್ಲ. ಆಯಾ ರಾಜ್ಯದ ಹಿತಾಸಕ್ತಿಗೆ ಬದ್ದವಾಗಿರುತ್ತವೆ. ಕುಮಾರಸ್ವಾಮಿ ಮೈಸೂರು ಪಾದಯಾತ್ರೆಗೆ ಯಾಕೆ ವಿರೋಧಿಸಿದ್ರು..? ಶಾಸಕರ ಭವನದಿಂದ ನಡೆದ ಪಾದಯಾತ್ರೆಗೆ ವಿರೋಧ‌ ಮಾಡಿದ್ರು. ಮಾಜಿ ಸಿಎಂ ಆದವರು ಯೋಚನೆ ಮಾಡಿ ಹೇಳಿಕೆ ಕೊಡಬೇಕು. ನನ್ನನ್ನ ಎಂಪಿ‌ ಮಾಡಿದ್ರೆ ಐದು ನಿಮಿಷದಲ್ಲಿ ಮೇಕೆದಾಟಿಗೆ ಅನುಮತಿ ಕೊಡುಸ್ತೀನಿ ಅಂತ ಮಂಡ್ಯದಲ್ಲಿ ಹೇಳಿದ್ರು. ಆಗ ಏನಾದ್ರು ಕಂಡಿಷನ್‌ ಹಾಕಿ ಆ ಮಾತನ್ನ ಹೇಳಿದ್ರಾ..? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಕಂಡಿಷನ್ ಇಲ್ಲದೆ ಮಂಡ್ಯದಲ್ಲಿ ಭರವಸೆ ಕೊಟ್ಟಿದ್ರು. ಒಬ್ಬರು ಮಾಜಿ ಸಿಎಂ ಈ ರೀತಿ ಹೇಳಿಕೆ ಕೊಡುವುದನ್ನ ನಿಲ್ಲಿಸಬೇಕು. ಇದೆಲ್ಲಾ ಅವರಿಗೆ ಗೌರವ ತರುವುದಿಲ್ಲ. ನಾನು ಮಾತನಾಡಿದ್ದು ಸತ್ಯ, ಮೋದಿ ಹತ್ತಿರ ನನ್ನ ಮಾತು ನಡೆಯುತ್ತಿಲ್ಲ ಅಂತ ಹೇಳಲಿ. ನಾವು ಏನೂ ಕೇಳಲ್ಲ. ಇಲ್ಲ ಅಂದ್ರೆ ವಿಜಯೇಂದ್ರಣ್ಣನೋ, ಅಶೋಕಣ್ಣನ ಕರೆದುಕೊಂಡು ಹೋಗಿ ಒಪ್ಪಿಸಿಕೊಂಡು ಬರುವ ಕೆಲಸ ಮಾಡಲಿ ಎಂದು ಹೆಚ್​.ಡಿ ಕುಮಾರಸ್ವಾಮಿ ವಿರುದ್ದ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

Tags: BJPChaluvarayaswamychaluvarayaswamy mlaCheluvarayaswamycheluvarayaswamy ministercheluvarayaswamy mlacheluvarayaswamy nagamangalacheluvarayaswamy on hd kumaraswamycheluvarayaswamy updatecheluvarayaswamy vs hd kumaraswamyCongress Partyformer mla chaluvarayaswamyHDKminister chaluvaraya swamy vs hd kumaraswamy in assemblyMinister ChaluvarayaswamyMinister Cheluvarayaswamyn chaluvarayaswamyN Cheluvarayaswamyputtaraju vs cheluvarayaswamyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಸಿಎಂ ಮಂಡಿ ನೋವಿನ ಬಗ್ಗೆ ಪರಿಷತ್ ವಿಪಕ್ಷ ನಾಯಕ ಲೇವಡಿ

Next Post

ನಾನು ಸಂಘ ಪರಿವಾರದಿಂದ ಬಂದಿಲ್ಲ.. ನನ್ನನ್ನು ಕರೆದಿಲ್ಲ.. ಕೇಳುವುದೂ ಇಲ್ಲ..

Related Posts

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ
Top Story

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ

by ಪ್ರತಿಧ್ವನಿ
August 18, 2026
0

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೇ 7 ದಿನಗಳೊಳಗೆ ಮತ್ತೆ...

Read moreDetails
‘ಟಾಕ್ಸಿಕ್’ : ಆಗಸ್ಟ್‌ 21ರಿಂದ ಮುಂಗಡ ಬುಕ್ಕಿಂಗ್‌ ಶುರು

‘ಟಾಕ್ಸಿಕ್’ : ಆಗಸ್ಟ್‌ 21ರಿಂದ ಮುಂಗಡ ಬುಕ್ಕಿಂಗ್‌ ಶುರು

August 18, 2026
ಜೈಲಿಗೆ ಹಾಕಿದ್ರೂ ನಾವು ‘ವಂದೇ ಮಾತರಂ’ ಎರಡೇ ಪ್ಯಾರಾ ಹಾಡೋದು: ಬಿ.ಕೆ ಹರಿಪ್ರಸಾದ್‌

ಜೈಲಿಗೆ ಹಾಕಿದ್ರೂ ನಾವು ‘ವಂದೇ ಮಾತರಂ’ ಎರಡೇ ಪ್ಯಾರಾ ಹಾಡೋದು: ಬಿ.ಕೆ ಹರಿಪ್ರಸಾದ್‌

August 18, 2026
ಎನ್‌ಕೌಂಟರ್‌ ಪ್ರಕರಣ: ತ.ನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ

ಎನ್‌ಕೌಂಟರ್‌ ಪ್ರಕರಣ: ತ.ನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ

August 18, 2026
ಆರೋಪಿ ಪವಿತ್ರಾ ಗೌಡಗೆ ಜ್ವರ; ವಿಚಾರಣೆಗೆ ಗೈರು

ಆರೋಪಿ ಪವಿತ್ರಾ ಗೌಡಗೆ ಜ್ವರ; ವಿಚಾರಣೆಗೆ ಗೈರು

August 18, 2026
Next Post
ನಾನು ಸಂಘ ಪರಿವಾರದಿಂದ ಬಂದಿಲ್ಲ.. ನನ್ನನ್ನು ಕರೆದಿಲ್ಲ.. ಕೇಳುವುದೂ ಇಲ್ಲ..

ನಾನು ಸಂಘ ಪರಿವಾರದಿಂದ ಬಂದಿಲ್ಲ.. ನನ್ನನ್ನು ಕರೆದಿಲ್ಲ.. ಕೇಳುವುದೂ ಇಲ್ಲ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada