ತಲೆನೋವು ನಾನ ಕಾರಣಗಳಿಗೆ ಬರುತ್ತದೆ. ಜ್ವರ ಬಂದಾಗ ಹಲ್ಲು ನೋವಾದಾಗ, ಟೆನ್ಶನ್ ಹೆಚ್ಚಾದಾಗ, ಊಟ ಬಿಟ್ಟಾಗ ಈ ಎಲ್ಲಾ ಕಾರಣಕ್ಕು ತಲೆನೋವು ಬರುವುದು ಕಾಮನ್.ತಲೆನೋವು ಅಲ್ಲಿ ಮೈಗ್ರೇನ್ ಕೂಡ ಒಂದು. ಮೈಗ್ರೇನ್ ಬಂದಾಗ ಅಬ್ಬಬ್ಬ ಆ ನೋವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಮೈಗ್ರೇನ್ ಅಂದ್ರೆ ಅರ್ಧ ತಲೆ ನೋವು ಕಾಣಿಸಿಕೊಳ್ಳುತ್ತದೆ.
ಮೈಗ್ರೇನ್ ಹೆಚ್ಚಾದಾಗ ಯಾವುದರಲ್ಲೂ ಕೂಡ ಆಸಕ್ತಿ ಇರುವುದಿಲ್ಲ ಊಟ ತಿಂಡಿ ಸರಿಯಾಗಿ ಸೇರುವುದಿಲ್ಲ ಸುಸ್ತು ವಾಕರಿಕೆ ಇವೆಲ್ಲವೂ ಕೂಡ ಕಾಡುತ್ತದೆ.ಆದ್ರೆ ಮೈಗ್ರೇನ್ ಗೆ ಪ್ರಮುಖ ಕಾರಣಗಳು ಏನು ಗೊತ್ತಾ?
ಹಾರ್ಮೋನ್ ಬದಲಾವಣೆ
ದೇಹದಲ್ಲಿ ಹಾರ್ಮೋನ್ಸ್ ಚೇಂಜಸ್ ಆದಾಗ.ಅದರಲ್ಲೂ ಈಸ್ಟ್ರೊಜೆನ್ ಮಟ್ಟಗಳಲ್ಲಿ ಏರಿಳಿತಗಳು..ಹಾಗೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಮತ್ತು ಋತುಬಂಧದ ಸಮಯದಲ್ಲಿ ಹಾರ್ಮೋನ್ಸ್ ಬದಲಾವಣೆ ಆಗುತ್ತದೆ ಹಾಗೂ ಮೈಗ್ರೇನ್ ಶುರುವಾಗುತ್ತದೆ.
ನಿದ್ದೆಯಿಂದಾಗಿ
ಒಬ್ಬ ವ್ಯಕ್ತಿ ದಿನಕ್ಕೆ ೮ ಗಂಟೆಗಳ ಕಾಲ ನಿದ್ದೆ ಮಾಡುವುದು ಅತ್ಯಗತ್ಯ..ನಿದ್ದೆಯಲ್ಲಿ ಬದಲಾವಣೆಯಾದಾಗ ಅಂದ್ರೆ ಲೇಟ್ ಆಗಿ ಮಲಗಿ ಬೇಗ ಏಳುವುದು,ಅಥವಾ ಎಂಟು ಗಂಟೆಗೂ ಅಧಿಕವಾಗಿ ನಿದ್ದೆ ಮಾಡುವುದು, ನಿದ್ರಾಹೀನತೆ ಕೂಡ ಮೈಗ್ರೇನ್ ಗೆ ಕಾರಣವಾಗುತ್ತದೆ..
ಜೆನೆಟಿಕ್ಸ್
ಮನೆಯವರಲ್ಲಿ ಅಥವಾ ಕುಟುಂಬದವರಲ್ಲಿ ಯಾರಿಗಾದ್ರು ಮೈಗ್ರೇನ್ ಸಮಸ್ಯೆಯಿದ್ರು ಕೂಡ ಮೈಗ್ರೇನ್ ಬರುವಂತಹ ಚಾಂಸ್ ಜಾಸ್ತಿ ಇರುತ್ತದೆ.
ವಾತಾವರದಲ್ಲಿ ಬದಲಾವಣೆಯಾದಾಗ
ಮಳೆಗಾಲದಲ್ಲಿ ಅಥವ ಚಾಳಿಗಾಲದಲ್ಲಿ ಮೈಗ್ರೇನ್ ಹೆಚ್ಚಾಗುತ್ತದೆ..ಕೆಲವುಬಾರಿ ದೇಹದಲ್ಲಿ ತಂಪು ಹೆಚ್ಚಾದಾಗ ಕೂಡ ನೆಗಡಿ ಇಂದಾಗಿಯು ಕೂಡ ಮೈಗ್ರೇನ್ ಬರುತ್ತದೆ.ಡಿಹೈಡ್ರೇಶನ್ ಆದಾಗಲು ಮೈಗ್ರೇನ್ ಬರುತ್ತದೆ.
ಆಹಾರ
ನಾವು ಕೆಲವು ಆಹಾರಗಳನ್ನು ಸೇವಿಸಿದಾಗ ಕೂಡ ಮೈಗ್ರೇನ್ ಬರುತ್ತ ಚೀಸ್ ಸೇವನೆಯಿಂದಾಗಿ,ಸಂಸ್ಕರಿಸಿದ ಮಾಂಸ,ಅತಿಯಾಗಿ ಚಾಕೊಲೇಟ್ ತಿಂದ್ರೆ,ದೇಹಕ್ಕೆ ಕೆಫೀನ್ ಅಂಶ ಸೇರಿದಾಗ ಮೈಗ್ರೇನ್ ಬರುತ್ತದೆ.
ಇದೆಲ್ಲದರ ಜೊತೆಗೆ ಒತ್ತಡ ಹಾಗೂ ಅತಿಯಾಗಿ ಫೋನ್,ಲ್ಯಾಪ್ ಟಾಪ್ ಬಳಕೆಯಿಂದಾಗಿಯು ಕೂಡ ಮೈಗ್ರೇನ್ ಕಾಡುತ್ತದೆ..