ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ-20 ಪಂದ್ಯ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಮೆಟ್ರೋ ಸೇವೆಯನ್ನು ರಾತ್ರಿ 1 ಘಂಟೆಯವರೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಯೋಜಿಸಿದೆ ಎಂದು ತಿಳಿದು ಬಂದಿದೆ.
ಬೈಯಪ್ಪನಹಳ್ಳಿಯಿಂದ-ಕೆಂಗೇರಿ ವರೆಗೆ, ನಾಗಸಂದ್ರದಿಂದ-ರೇಷ್ಮೆ ಸಂಸ್ಥೆಯವರೆಗು ಪಂದ್ಯ ನಡೆಯುವ ದಿನ ರಾತ್ರಿ 1ರವೆರಗು ಮೆಟ್ರೋ ಸೇವೆ ಲಭ್ಯವಾಗಲಿದೆ.
ಪಂದ್ಯ ಮುಗಿಸಿಕೊಂಡು ವಾಪಸ್ ಹೊರಡುವ ಸಮಯದಲ್ಲಿ ನಿಲ್ದಾಣಗಳಲ್ಲಿ ದಟ್ಟಣೆ ಹೆಚ್ಚಾಗಲಿದ್ದು ನೂಕುನುಗ್ಗಲನ್ನು ತಪ್ಪಿಸಲು ಮಧ್ಯಾಹ್ನ 3ರಿಂದಲ್ಲೇ ಪೇಪರ್ ಟಿಕೆಟ್ಗಳು ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.

50ರೂಪಾಯಿ ಮೌಲ್ಯದ ಪೇಪರ್ ಟಿಕೆಟ್ ಪಡೆದವರು ರಾತ್ರಿ 10 ಘಂಟೆಯ ನಂತರ ಕಬ್ಬನ್ ಪಾರ್ಕ್ ನಿಲ್ದಾಣದಿಂದ ನಗರದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದು ಎಂದು ಹೇಳಲಾಗಿದೆ.
ಪಂದ್ಯವನ್ನು ನೋಡಲು ಬರುವಾಗ ಎಂದಿನಂತೆ ಟೋಕನ್ ವ್ಯವಸ್ಥೆ ಇರುತ್ತದೆ ವಾಪಸ್ ಹೊರಡುವ ಸಮಯದಲ್ಲಿ ಮಾತ್ರ ಪೇಪರ್ ಟೋಕನ್ ಬಳಸಲು ಅವಕಾಶ ನೀಡಲಾಗಿದೆ ಎಂದು ತನ್ ಪ್ರಕಟನೆಯಲ್ಲಿ ತಿಳಿಸಿದೆ.