ಹಾಸನ / ಬೆಂಗಳೂರು : ಶಕ್ತಿ ಯೋಜನೆ ಜಾರಿಗೊಂಡು ಎರಡನೇ ದಿನವಾದ ಇಂದೂ ಸಹ ಮಹಿಳೆಯರ ಜೋಶ್ ಜೋರಾಗಿದೆ. ಬಸ್ನಲ್ಲಿ ಮಹಿಳೆಯರೇ ಮುಗಿಬಿದ್ದಿದ್ದು ಹಾಸನದಲ್ಲಂತೂ ಕಂಡಕ್ಟರ್ ಕಂಗಾಲಾಗಿ ಹೋಗಿದ್ದಾರೆ.
ನಿನ್ನೆ ಭಾನುವಾರವಾದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆದರೆ ಇಂದು ಕೆಲಸಕ್ಕೆ ತೆರಳುವ ಹಾಗೂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದು ಬಸ್ ತುಂಬಾ ಮಹಿಳೆಯರೇ ತುಂಬಿದ್ದಾರೆ.
ಫ್ರೀ ಟಿಕೆಟ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಮಹಿಳೆಯರು ಮೆಟ್ರೋ ಸಂಚಾರವನ್ನು ಬಿಟ್ಟು ಬಿಎಂಟಿಸಿ ಕಡೆ ಮುಖ ಮಾಡಿದ್ದಾರೆ. ಮಹಿಳೆಯರೇ ಬಸ್ನಲ್ಲಿ ತುಂಬಿರುವ ಕಾರಣ ಪುರುಷ ಪ್ರಯಾಣಿಕರು ಬಸ್ನ ಬಾಗಿಲಲ್ಲಿ ನಿಂತು ಪ್ರಯಾಣಿಸಬೇಕಾದ ಅನಿವಾರ್ಯತೆ ಬಂದೆರಗಿದೆ.
ನಾವು ಟಿಕೆಟ್ಗೆ ಹಣ ನೀಡಿ ಖರೀದಿ ಮಾಡುತ್ತೇವೆ. ಆದರೂ ನಾವು ಬಾಗಿಲಲ್ಲಿ ನಿಂತು ಬಸ್ನಲ್ಲಿ ಪ್ರಯಾಣಿಸಬೇಕು. ಸರ್ಕಾರ ಪುರುಷರ ಕಡೆಗೂ ಸ್ವಲ್ಪ ಕನಿಕರ ತೋರಲಿ. ನಮಗೇ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.