ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟರು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದಿದ್ದ ಇನ್ನಿತರ ರೋಗಿಗಳು ಪರದಾಡುವಂತಾಯಿತು.
ಪ್ರಜ್ವಲ್ ರನ್ನು ಎಸ್ ಐಟಿ ಅಧಿಕಾರಿಗಳು ತಡರಾತ್ರಿಯೇ ಬಂಧಿಸಿದ್ದಾರೆ. ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಅದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ರಕ್ತ ಪರೀಕ್ಷೆಗಳನ್ನು ಚೆಕ್ ಮಾಡಲಾಯಿತು.
ವೈದ್ಯಕೀಯ ಪರೀಕ್ಷೆ ವೇಳೆ, ಬೌರಿಂಗ್ ಆಸ್ಪತ್ರೆ ಬಳಿ ಪೊಲೀಸರ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಇದರಿಂದಿಗಾ ಇನ್ನಿತರ ರೋಗಿಗಳು ಪರದಾಟ ನಡೆಸುವಂತಾಯಿತು. ಏಮರ್ಜೆನ್ಸಿ ಎಂದು ಬಂದಿದ್ದ ಹಲವು ರೋಗಿಗಳು ಗೇಟ್ ಬಳಿಯೇ ನಿಂತು ಕಷ್ಟ ಪಡುವಂತಾಯಿತು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಗಳು ದರ್ಪ ಮೆರೆದು ರೋಗಿಗಳನ್ನು ನರಳಾಡಿಸಿದ್ದಾರೆ. ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ವೃದ್ಧರೊಬ್ಬರನ್ನು ತಡೆದು ಪೊಲೀಸರು ವಾಪಸ್ ಕಳಿಸಿದರು. ಪರೀಕ್ಷೆಗೆಂದು ಬ್ಯಾಂಡೇಜ್ ಸಮೇತ ರೋಗಿ ಆಸ್ಪತ್ರೆಗೆ ಬಂದಿದ್ದರು. ರೋಗಿಗಳಿಗೆ ತೊಂದರೆ ಆಗದಂತೆ ಆಸ್ಪತ್ರೆಗೆ ಬಿಡುವಂತೆ ಪೊಲೀಸರು ಸೂಚಿಸಿದ ನಂತರ ರೋಗಿಗಳನ್ನು ಒಳಗೆ ಬಿಡಲಾಯಿತು.