ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ ಪ್ರತಿಫಲವಾಗಿ, ಹಾಲಿ ಸಂಸದೆ ಸುಮಲತಾ ಅಂಬರೀಶ್ಗೆ ಬಿಜೆಪಿ ಹೈಕಮಾಂಡ್ ನಾಯಕರು ಭರ್ಜರಿ ಗಿಫ್ಟ್ ಕೊಡುವ ಮುನ್ಸೂಚನೆ ಸಿಕ್ಕಿದೆ.
![](https://pratidhvani.com/wp-content/uploads/2024/04/sumalatha-ambareesh-1-1024x576.webp)
ಸುಮಲತಾ ಅಂಬರೀಶ್ಗೆ ವಿಧಾನಪರಿಷತ್ನ ಸದಸ್ಯರನ್ನಾಗಿಸಲು ಬಿಜೆಪಿ ಹೈಕಮಾಂಡ್ ನಾಯಕರು ನಿರ್ಧರಿಸಿದ್ದು, ಜೂನ್ 13 ರಂದು ನಡೆಯಲಿರುವ ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಬೇಕಾದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ರನ್ನು ಬಿಜೆಪಿ ಅಭ್ಯರ್ಥಿಯಾಗಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
![](https://pratidhvani.com/wp-content/uploads/2024/03/suma-1-1678702247.jpg)
ಇನ್ನು ಜೂನ್ 13 ರಂದು ನಡೆಯಲಿರುವ ವಿಧಾನಸಭೆಯಿಂದ ವಿಧಾನಪರಿಷತ್ನ ಚುನಾವಣೆಯಲ್ಲಿ ಒಟ್ಟು 11 ಸ್ಥಾನಗಳಿದ್ದು, ಅದರಲ್ಲಿ ಸಂಖ್ಯಾ ಬಲಾಬಲದ ಮೇಲೆ ಕಾಂಗ್ರೆಸ್ಗೆ 7 ಸ್ಯಾನ, ಬಿಜೆಪಿಗೆ 3 ಸ್ಥಾನ ಹಾಗೂ ಜೆಡಿಎಸ್ಗೆ 1 ಸ್ಥಾನ ಲಭಿಸಲಿದ್ದು, ಇದರ ಪೈಕಿ 3 ಬಿಜೆಪಿ ಅಭ್ಯರ್ಥಿಗಳ ಪೈಕಿ ಸುಮಲತಾ ಅಂಬರೀಶ್ ಮಹಿಳಾ ಖೋಟಾದಡಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
![](https://pratidhvani.com/wp-content/uploads/2022/10/982036-sumalatha-ambareesh.jpg)
ಇನ್ನು ಮಹಿಳಾ ಖೋಟಾ ಮತ್ತು ಪಕ್ಷಕ್ಕಾಗಿ ಕ್ಷೇತ್ರ ತ್ಯಾಗ ಮಾಡಿದ ಮಾನದಂಡದ ಆಧಾರದಲ್ಲಿ ಈ ಕಾರ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದ್ದು, ಸಂಜೆಯ ವೇಳೆಗೆ ಅಧಿಕೃತವಾಗಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎನ್ನಲಾಗಿದೆ.