• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅಂಬಾನಿ – ಅದಾನಿ‌ ಮತ್ತು ಅಮೆಜಾನ್ : ಭಾರತೀಯ ಮಾಧ್ಯಮದ ನವದೊರೆಗಳು!

ಫಾತಿಮಾ by ಫಾತಿಮಾ
May 2, 2022
in ದೇಶ
0
ಅಂಬಾನಿ – ಅದಾನಿ‌ ಮತ್ತು ಅಮೆಜಾನ್ : ಭಾರತೀಯ ಮಾಧ್ಯಮದ ನವದೊರೆಗಳು!
Share on WhatsAppShare on FacebookShare on Telegram

ಚಿಲ್ಲರೆ ಮತ್ತು ಟೆಲಿಕಾಂ ಮಾರುಕಟ್ಟೆಯ ನಾಯಕರಾಗಿ ಹೊರಹೊಮ್ಮಿದ ನಂತರ, ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಮಾಧ್ಯಮ ವ್ಯವಹಾರದ ಮೇಲೆ ಈಗ ತನ್ನ ದೃಷ್ಟಿ ನೆಟ್ಟಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತು ಬಿಲಿಯನೇರ್ ಗೌತಮ್ ಅದಾನಿಯಿಂದ ತೀವ್ರ ಪೈಪೋಟಿ ಇದ್ದೂ ಸಹ ಸ್ಟಾರ್ ಮತ್ತು ಸೋನಿ ಎಂಟರ್‌ಟೈನ್‌ಮೆಂಟ್ ಅನ್ನು ವಶಕ್ಕೆ ಪಡೆಯಲು ರಿಲಯನ್ಸ್ ಯತ್ನಿಸುತ್ತಿದೆ. 2030ರ ಹೊತ್ತಿಗೆ $ 100 ಶತಕೋಟಿಯನ್ನು ಮುಟ್ಟುವ ನಿರೀಕ್ಷೆ ಇರುವ ಮಾಧ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ದೊಡ್ಡ ಮಹತ್ವಾಕಾಂಕ್ಷೆ ಹೊಂದಿದೆ.

ADVERTISEMENT

2014 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ‘ಇಂಡಿಪೆಂಡೆಂಟ್ ಮೀಡಿಯಾ ಟ್ರಸ್ಟ್’ ಮೂಲಕ ನೆಟ್‌ವರ್ಕ್ 18 ಗ್ರೂಪ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಇದು CNBC-TV18, CNN-News18, Colors ಮತ್ತು moneycontrol.com ನಂತಹ ಚಾನೆಲ್‌ಗಳ ಮೂಲಕ ಪ್ರಸಾರ ಮತ್ತು ಆನ್‌ಲೈನ್ ವ್ಯವಹಾರದಲ್ಲಿ ಒಂದು ಬಲವಾದ ನೆಲೆಯನ್ನು ಕಂಡುಕೊಳ್ಳಲು‌ತ ರಿಲಯನ್ಸ್‌ಗೆ ಸಹಾಯ ಮಾಡಿತು. ಆ ನಂತರ ಅದು ಬಾಲಾಜಿ ಟೆಲಿಫಿಲ್ಮ್ಸ್, ಎರೋಸ್ ಇಂಟರ್ನ್ಯಾಷನಲ್ ಮತ್ತು ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಆದ ಸಾವನ್‌ನಲ್ಲೂ ಪಾಲುದಾರಿಕೆ ಪಡೆದುಕೊಂಡಿತು.

ಈಗ, ಇದು ಸದ್ಯಕ್ಕೆ ತನ್ನ ಪಾರಮ್ಯವಿಲ್ಲದ ಕ್ರೀಡಾ ಪ್ರಸಾರದ ಮೇಲೆ ಗಮನ ಕೇಂದ್ರೀಕರಿಸಿದೆ. Voot Select ಈಗಾಗಲೇ ಸ್ಪ್ಯಾನಿಷ್ ಲಾಲಿಗಾ ಫುಟ್‌ಬಾಲ್ ಮತ್ತು US NBA (ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್) ನಂತಹ ಪಂದ್ಯಾವಳಿಗಳಿಗೆ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಆದರೆ, ಭಾರತವು ಕ್ರಿಕೆಟ್ ಹುಚ್ಚಿನ ದೇಶವಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್‌ ಇಲ್ಲಿ ಬೇರೆಲ್ಲಾ ಕ್ರೀಡೆ, ಪಂದ್ಯಾವಳಿಗಿಂತ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿದೆ. ಕಳೆದ ಆವೃತ್ತಿಯಲ್ಲಿ, ಐಪಿಎಲ್ ವೀಕ್ಷಕರ ಸಂಖ್ಯೆ 242 ಬಿಲಿಯನ್ ನಿಮಿಷಗಳನ್ನು ಮುಟ್ಟಿತ್ತು. ಹಾಗಾಗಿ ರಿಲಯನ್ಸ್ ಐದು ವರ್ಷಗಳವರೆಗೆ ಸ್ಯಾಟಲೈಟ್ ಟಿವಿ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಳ್ಳಲು ಕಠಿಣ ತಯಾರಿ ನಡೆಸುತ್ತಿದೆ.

ರೂಪರ್ಟ್ ಮುರ್ಡೋಕ್ ಅವರ ಪುತ್ರ ಜೇಮ್ಸ್ ಮುರ್ಡೋಕ್ ಮತ್ತು ಸ್ಟಾರ್ ಇಂಡಿಯಾದ ಮಾಜಿ ಮುಖ್ಯಸ್ಥ ಉದಯ್ ಶಂಕರ್ ಸಹ ರಿಲಯನ್ಸ್‌ಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಜೇಮ್ಸ್ ಮುರ್ಡೋಕ್ ಅವರ ‘ಲೂಪಾ ಸಿಸ್ಟಮ್ಸ್’ ಮತ್ತು ಉದಯ್ ಶಂಕರ್ ಅವರ ‘ಬೋಧಿ ಟ್ರೀ ಸಿಸ್ಟಮ್ಸ್’ ಈ ವಾರದ ಆರಂಭದಲ್ಲಿ ಕಲರ್ಸ್ ಮನರಂಜನಾ ಚಾನೆಲ್‌ಗಳು ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ವೂಟ್‌ನ್ನು ನಿರ್ವಹಿಸುವ Viacom18 ನಲ್ಲಿ ರೂ 13,500 ಕೋಟಿ ($ 1.78 ಶತಕೋಟಿ) ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಈ ಪಾಲುದಾರಿಕೆಯ ಮೂಲಕ ಭಾರತೀಯ ಗ್ರಾಹಕರಿಗೆ ಅತ್ಯುತ್ತಮ ಮಾಧ್ಯಮ ಮತ್ತು ಮನರಂಜನಾ ಸೇವೆಗಳನ್ನು ತರಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿರುವ ಅಂಬಾನಿ “ಜೇಮ್ಸ್ ಮತ್ತು ಉದಯ್ ಅವರ ದಾಖಲೆಯನ್ನು ಸದ್ಯಕ್ಕೆ ಯಾರಿಗೂ ಸರಿಗಟ್ಟಲು ಸಾಧ್ಯವಿಲ್ಲ. ಎರಡು ದಶಕಗಳಿಂದ, ಅವರು ಭಾರತ, ಏಷ್ಯಾ ಮತ್ತು ಪ್ರಪಂಚದಾದ್ಯಂತ ಮಾಧ್ಯಮ ವ್ಯವಸ್ಥೆಯನ್ನು ರೂಪಿಸುವಲ್ಲಿ ನಿರಾಕರಿಸಲಾಗದ ಪಾತ್ರವನ್ನು ವಹಿಸಿದ್ದಾರೆ. ನಾವು ಬೋಧಿ ಟ್ರೀಸ್‌ನೊಂದಿಗೆ ಪಾಲುದಾರರಾಗಲು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.

ವಿಶೇಷ ಎಂದರೆ, ಉದಯ್ ಶಂಕರ್ ಅವರ ನೇತೃತ್ವದಲ್ಲೇ 2018 ರಲ್ಲಿ IPL ಮಾಧ್ಯಮ ಹಕ್ಕುಗಳಿಗಾಗಿ ಸ್ಟಾರ್ ನೆಟ್ವರ್ಕ್ ಯಶಸ್ವಿಯಾಗಿ ಬಿಡ್ ಮಾಡಿತ್ತು. ಆದ್ದರಿಂದ ಉದಯ್ ಮತ್ತು ಮುರ್ಡೋಕ್ ಜೊತೆಗಿನ ಪಾಲುದಾರಿಕೆಯು ನಿಸ್ಸಂದೇಹವಾಗಿ, ಮಾಧ್ಯಮ ವ್ಯವಹಾರವನ್ನು ಬಲಪಡಿಸಲು ಅಂಬಾನಿಗೆ ಸಹಾಯ ಮಾಡಲಿದೆ ಎಂದೇ ಮಾಧ್ಯಮ ಜಗತ್ತು ಅಭಿಪ್ರಾಯ ಪಡುತ್ತಿದೆ. ಇದಕ್ಕೆ ಮುನ್ನುಡಿ ಎಂಬಂತೆ ಕಂಪನಿಯು ಏಪ್ರಿಲ್ 15 ರಂದು, Viacom18 ನೆಟ್ವರ್ಕ್ನ ಕ್ರೀಡಾ ಚಾನಲ್ Sports18 ಅನ್ನು ಪ್ರಾರಂಭಿಸಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಪಿಎಲ್ ಬಿಡ್ಡಿಂಗ್‌ನಲ್ಲಿ ರಿಲಯನ್ಸ್ ಮಾಧ್ಯಮ ಹಕ್ಕುಗಳನ್ನು ಪಡೆದರೆ ಅದು ಕಂಪೆನಿಗೆ ಸಿಗಲಿರುವ ಅತಿ ದೊಡ್ಡ ಗೆಲುವಾಗಲಿದೆ.

ಇತ್ತ ಸ್ಯಾಟಲೈಟ್ ಬ್ರಾಡ್‌ಕಾಸ್ಡಿಂಗ್‌ನಲ್ಲಿ ಸ್ಟಾರ್ ಈಗಾಗಲೇ ಅತ್ಯಂತ ಪ್ರಬಲವಾಗಿದ್ದು ಡಿಸ್ನಿಯ ಜೊತೆಗೂಡಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಹಾಟ್‌ಸ್ಟಾರ್ ಅನ್ನೂ ಬಲಪಡಿಸಿಕೊಂಡಿದೆ. ಇನ್ನೊಂದೆಡೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಮತ್ತು ಝೀ ನೆಟ್ವರ್ಕ್ ವಿಲೀನಗೊಳ್ಳಲು ಸಿದ್ಧತೆ ನಡೆಸುತ್ತಿವೆ.

ಆದರೆ ರಿಲಯನ್ಸ್‌‌ಗೆ ಸ್ಟಾರ್ಸ್ ಮತ್ತು ಸೋನಿಗಳಿಂದ ಮಾತ್ರವಲ್ಲದೆ ಇತರ ಹಲವೆಡೆಯಿಂದಲೂ ಸ್ಪರ್ಧೆಯಿದೆ. ಯುಎಸ್ ಬಿಲಿಯನೇರ್ ಜೆಫ್ ಬೆಜೋಸ್ ಒಡೆತನದ ಅಮೆಜಾನ್‌ನ ಸ್ಟ್ರೀಮಿಂಗ್ ಸೇವೆಯಾದ ಪ್ರೈಮ್ ವಿಡಿಯೋ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ 40 ಹೊಸ ಟೈಟಲ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಗುರುವಾರ ಪ್ರಕಟಿಸಿದ್ದು ಇದು ಭಾರತದಲ್ಲಿ ತನ್ನ ಸ್ಟ್ರೀಮಿಂಗ್ ಸೇವೆಯನ್ನು ಬಲಪಡಿಸಲಿಕ್ಕಾಗಿ ಬಾಡಿಗೆಗೆ ಚಲನಚಿತ್ರಗಳನ್ನು ನೀಡುವ ಯೋಜನೆಯನ್ನೂ ಹೊಂದಿದೆ.

ಅಂಬಾನಿಯವರ ಬಿಲಿಯನೇರ್ ಪ್ರತಿಸ್ಪರ್ಧಿ ಗೌತಮ್ ಅದಾನಿ ಕೂಡ ಮಾಧ್ಯಮ ಕ್ಷೇತ್ರದಲ್ಲಿ ಹೆಜ್ಜೆ ಹಾಕಲು ಪ್ರಾರಂಭಿಸಿದ್ದು ಏಪ್ರಿಲ್ 26 ರಂದು, ಅದಾನಿ ಎಂಟರ್‌ಪ್ರೈಸಸ್ AMG ಮೀಡಿಯಾ ನೆಟ್‌ವರ್ಕ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು ವಿವಿಧ ರೀತಿಯ ಮಾಧ್ಯಮ ಗಳಲ್ಲಿ ಪ್ರಕಟಣೆ, ಜಾಹೀರಾತು, ಪ್ರಸಾರ, ಕಂಟೆಂಟ್ ಹಂಚಿಕೆ ಸೇರಿದಂತೆ ಮಾಧ್ಯಮ ಸಂಬಂಧಿತ ಚಟುವಟಿಕೆಗಳ ವ್ಯವಹಾರವನ್ನು ಕೈಗೊಳ್ಳಲು ನಿರ್ಧರಿಸಿದೆ.


ಅಲ್ಲದೇ ಮಾರ್ಚ್‌ನಲ್ಲಿ, ಡಿಜಿಟಲ್ ವ್ಯವಹಾರ ಸುದ್ದಿ ವೇದಿಕೆಯಾದ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾದಲ್ಲಿ ಕೆಲವು ಷೇರುಗಳನ್ನು ಖರೀದಿಸುವ ಒಪ್ಪಂದವನ್ನು ಅದಾನಿ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಅದಾನಿ ಮೀಡಿಯಾ ವೆಂಚರ್ಸ್‌ನ ಸಿಇಒ ಸಂಜಯ್ ಪುಗಾಲಿಯಾ “ಅದಾನಿ ಮೀಡಿಯಾ ವೆಂಚರ್ಸ್ ವಿವಿಧ ವೇದಿಕೆಗಳಲ್ಲಿ ಹೊಸ ಯುಗದ ಮಾಧ್ಯಮದ ಹಾದಿಯನ್ನು ಮುನ್ನಡೆಸಲು ಉದ್ದೇಶಿಸಿದೆ” ಎಂದು ಹೇಳಿದ್ದರು.

“ತಂತ್ರಜ್ಞಾನದ ಅಳವಡಿಕೆ ಮತ್ತು ಮಾಹಿತಿಯನ್ನು ಬಳಸಿಕೊಳ್ಳುವಲ್ಲಿ ನಮ್ಮ ರಾಷ್ಟ್ರದ ಸಾಮರ್ಥ್ಯವು ಹೆಚ್ಚಿದ್ದು ಮಾಧ್ಯಮವು ಮಾಹಿತಿಯನ್ನು ಪ್ರಸಾರ ಮಾಡುವ ರೀತಿಯಲ್ಲಿ ನಾಟಕೀಯ ಬದಲಾವಣೆಯಾಗಿದೆ. ಇದನ್ನೇ ಅದಾನಿ ಮೀಡಿಯಾ ವೆಂಚರ್ಸ್ ಬಳಸಿಕೊಳ್ಳು ವ ಗುರಿ ಹೊಂದಿದೆ” ಎಂದೂ ಅವರು ಹೇಳಿದ್ದರು.

ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಈಗಾಗಲೇ ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳಲ್ಲಿ ಪರಸ್ಪರ ಸ್ಪರ್ಧಿಗಳಾಗಿದ್ದಾರೆ. ಇನ್ನೊಂದೆಡೆ ಅಂಬಾನಿ ಮತ್ತು ಅಮೆಜಾನ್ ಇ-ಕಾಮರ್ಸ್ ಪ್ರಾಬಲ್ಯಕ್ಕಾಗಿ ಹೋರಾಡುತ್ತಿವೆ. ಮಾಧ್ಯಮವು ಮುಂದಿನ ದೊಡ್ಡ ವ್ಯವಹಾರ ಕ್ಷೇತ್ರವಾಗಲಿದ್ದು ಶತಕೋಟಿ ಡಾಲರ್‌ಗಳು ಕೈ ಬದಲಾಯಿಸಲಿವೆ. ಈ ಅನಾರೋಗ್ಯಕರ ಸ್ಪರ್ಧೆಯು ಈಗಾಗಲೇ ನೈತಿಕವಾಗಿ‌ ಕುಸಿದಿರುವ, ಆಡಳಿತದ‌ ಮುಂದೆ ನಡು ಬಗ್ಗಿಸಿರುವ ಭಾರತೀಯ ಮಾಧ್ಯಮವನ್ನು ಇನ್ನೆಷ್ಟು ಕೆಳಕ್ಕೆ ತಳ್ಳಲಿದೆಯೋ ಎಂಬ ಆತಂಕ ಪ್ರಜ್ಞಾವಂತರನ್ನು ಕಾಡುತ್ತಿದೆ.

Tags: BJPCongress PartyCovid 19ಅಂಬಾನಿ - ಅದಾನಿ‌ಅಮೆಜಾನ್ಕೋವಿಡ್-19ನರೇಂದ್ರ ಮೋದಿಬಿಜೆಪಿಭಾರತೀಯ ಮಾಧ್ಯಮ
Previous Post

ಚೌಧರಿ ದಾಳಿಗೆ ಎಡವಿದ ಹೈದರಾಬಾದ್: ಚೆನ್ನೈಗೆ ರೋಚಕ ಜಯ

Next Post

ಬ್ರಾಹ್ಮಣ್ಯ ವೈಭವೀಕರಿಸುವ ‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಬ್ರಾಹ್ಮಣ್ಯ ವೈಭವೀಕರಿಸುವ ‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರ

ಬ್ರಾಹ್ಮಣ್ಯ ವೈಭವೀಕರಿಸುವ 'ದಿ ಕಾಶ್ಮೀರ ಫೈಲ್ಸ್' ಚಲನಚಿತ್ರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada