ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧಿಕೃತ ಜಾಲತಾಣದಲ್ಲಿ, ಸಾರ್ವಜನಿಕ ದಾಖಲೆಗಳನ್ನು ಪಡೆಯುವ ಸಮಯದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ಯಾವುದೇ ಸಮಯದಲ್ಲಿ ಬೇಕಾದರೂ ಸಾರ್ವಜನಿಕ ದಾಖಲೆಗಳನ್ನು ಪಡೆಯಬಹುದಾಗಿತ್ತು. ಆದರೆ, ಈಗ ಹಠಾತ್ತನೇ ನಿಯಮಗಳನ್ನು ಬದಲಾಯಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಇದಷ್ಟೇ ಅಲ್ಲದೇ, ಸೂಚಿತವಾದ ಶುಲ್ಕವನ್ನು ಪಾವತಿಸಿದರೂ ಬೇಕಾದ ದಾಖಲೆಗಳು ಡೌನ್ಲೋಡ್ ಆಗುತ್ತಿಲ್ಲ ಎಂಬ ದೂರುಗಳು ಕೂಡಾ ಕೇಳಿ ಬರುತ್ತಿದೆ. ವಾರ್ಷಿಕ ದಾಖಲೆಗಳ ʼಫೈಲಿಂಗ್ʼ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಅಡಚಣೆ ಉಂಟಾಗಿದೆ ಎಂಬ ಸೂಚನಾ ಫಲಕವನ್ನು MCA ಅಧಿಕೃತ ಜಾಲತಾಣ ತೋರಿಸುತ್ತಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಆರ್ಟಿಐ ಕಾರ್ಯಕರ್ತರಾದ ಸಾಕೇತ್ ಗೋಖಲೆ ಅವರು, ರಾತ್ರಿಯ ವೇಳೆಯಲ್ಲಿ ಮಾತ್ರ ದಾಖಲೆಗಳನ್ನು ಪಡೆಯಲು ಅನುಮತಿ ನೀಡಲಾಗುತ್ತಿದೆ. ಜನರಿಗೆ ʼಉಪಯೋಗವಾಗಲುʼ ರೀತಿ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಇದು ಹೇಗೆ ಎಂದು ಅರ್ಥವಾಗುತ್ತಿಲ್ಲ, ಎಂದಿದ್ದಾರೆ.
ಖಾಸಗಿ ಕಂಪೆನಿಗಳ ಸಾರ್ವಜನಿಕ ದಾಖಲೆಗಲ ಕುರಿತು ಮಾಹಿತಿ ಪಡೆಯಲು ಇರುವಂತಹ ಈ ಅಂತರ್ಜಾಲ ತಾಣವು ಸಾರ್ವಜನಿಕರಿಗೇ ತೊಂದರೆ ನೀಡುತ್ತಿದ್ದರೆ ಅದರ ಉಪಯೋಗವಾದರೂ ಏನು ಎಂಭ ಮಾತುಗಲು ಕೇಳಿಬರುತ್ತಿವೆ.