ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಹೈ ವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ 18 ಎಲ್ಲರನ್ನೂ ಆಕರ್ಷಿಸಿದೆ.
18ರ ಗುಟ್ಟೇನು ಗೊತ್ತಾ? ವಿರಾಟ್ ಕೊಹ್ಲಿ ಅವರ ಜರ್ಸಿ ನಂ. 18, ಆರ್ ಸಿಬಿ ಪ್ಲೇ ಆಫ್ ಪ್ರವೇಶಿಸಬೇಕಾದರೆ 18 ಓವರ್ ನಲ್ಲಿಯೇ ಗೆಲ್ಲಬೇಕಿತ್ತು. ಆದರೆ, ಮೊದಲು ಬ್ಯಾಟಿಂಗ್ ಆರ್ ಸಿಬಿಗೆ ಸಿಕ್ಕ ಹಿನ್ನೆಲೆಯಲ್ಲಿ ಚೆನ್ನೈ ತಂಡವನ್ನು 18 ರನ್ ಗಳಿಂದ ಸೋಲಿಸಬೇಕಿದೆ. ಅಲ್ಲದೇ, ಭಾರತ ತಂಡ ಗಳಿಸಿದ್ದು ಕೂಡ 218. ಹಾಗಾದರೆ, ಇದು ಅಲ್ಲವೇ? 18ರ ಗುಟ್ಟು…18ರ ಗುಟ್ಟನ್ನು ಆರ್ ಸಿಬಿ ಬಿಚ್ಚಿ, ಚೆನ್ನೈನ್ನು ಮನೆಗೆ ಕಳುಹಿಸಿ, ಭರ್ಜರಿಯಾಗಿ ಗೆದ್ದು ಪ್ಲೇ ಆಫ್ ಪ್ರವೇಶಿಸುವುದೇ ಕಾಯ್ದು ನೋಡಬೇಕಿದೆ.
ಬೆಂಗಳೂರು ತಂಡದ ಅಭಿಮಾನಿಗಳ ಕನಸು, ಆಸಯ ಕೂಡ ಅದೇ ಆಗಿದೆ… ಆರಂಭದಲ್ಲಿ ಸತತ ಪಂದ್ಯಗಳಿಂದ ಸೋತು ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದ ಆರ್ ಸಿಬಿ ನಂತರ ಕಮ್ ಬ್ಯಾಕ್ ಮಾಡಿದ್ದು, ಈಗ ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿದೆ. ಅಭಿಮಾನಿಗಳ ಕನಸು ನನಸಾಗುವುದೇ ಕಾಯ್ದು ನೋಡಬೇಕಿದೆ. 18ರ ಆಶೀರ್ವಾದ ಬೆಂಗಳೂರಿಗೆ ಸಿಗಲಿದೆಯೇ? ನೋಡೋಣ…