ಲೋಕ ಎಲೆಕ್ಷನ್ ಮುಗಿಯುತ್ತಿದ್ದಂತೆ ರಾಜ್ಯ ಕಾಂಗ್ರೇಸ್ (Congress) ಪಾಳಯದಲ್ಲಿ ಮತ್ತೆ ಸಿಎಂ, ಡಿಸಿಎಂ ಕೂಗು ಆರಂಭವಾಗಿದೆ.ಡಿ.ಕೆ.ಶಿವಕುಮಾರ್ (Dk shivakumar) ಮುಖ್ಯಮಂತ್ರಿ ಆಗಬೇಕು ಅನ್ನೋ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಡಿಕೆಶಿಯ ಆಪ್ತ ಶಾಸಕರಾಗಿ ಗುರುತಿಸಿಕೊಂಡಿರುವ ಬಸವರಾಜ ಶಿವಗಂಗಾ (Basavaraj shivaganga) ಇಂಥಾ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.
ಜಾತಿ ಆಧಾರದ ಮೇಲೆ ಡಿಕೆ (DK) ಡಿಸಿಎಂ ಹುದ್ದೆ ಅನ್ನೋ ಚರ್ಚೆ ಕಾಂಗ್ರೆಸ್‌ನಲ್ಲಿ ಪ್ರಚಲಿತದಲ್ಲಿರುವ ಹಿನ್ನೆಲೆ,ಡಿಕೆಶಿಯನ್ನ ಸಿಎಂ (Cm ಮಾಡಬೇಕು ಅನ್ನೋ ಬೇಡಿಕೆ ಇಟ್ಟಿದ್ದಾರೆ ಬಸವರಾಜು ಶಿವಗಂಗಾ. ಈ ಮುಂಚೆ ಜಾತಿ ಆಧಾರದಲ್ಲಿ ಡಿ.ಕೆ. ಶಿವಕುಮಾರ್‌ಗೆ ಡಿಸಿಎಂ ಸ್ಥಾನ ಕೊಟ್ಟಿಲ್ಲ. ಹೀಗಾಗಿ ಡಿಕೆಶಿಯನ್ನು ಸಿಎಂ ಮಾಡಿ 5 ಇಲ್ಲ 6 ಜನರನ್ನ ಡಿಸಿಎಂ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನಲೆ ಸಿಎಂ ಬದಲಾವಣೆ ಕೂಗು ತೆರೆಮರೆಗೆ ಸರಿದಿತ್ತು. ಆದರೆ ಇದೀಗ ತಮ್ಮ ಹೇಳಿಕೆಯ ಮೂಲಕ ಮತ್ತೆ ಆ ಚರ್ಚೆಗೆ ಬಸವರಾಜು ಶಿವಗಂಗಾ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ಮತ್ತಿನ್ಯಾವ ರೀತಿ ಕೋಲಾಹಲ ಎಬ್ಬಿಸಲಿದ್ಯೋ ಕಾದುನೋಡಬೇಕಿದೆ.