ಮಣಿಪುರದಲ್ಲಿ ಸತತ ಮಳೆಯಿಂದ ಪದೇಪದೆ ಭೂಕುಸಿತಗಳು ಸಂಭವಿಸುತ್ತಿದ್ದು, ವಿವಿಧ ರಕ್ಷಣಾ ಪಡೆಗಳು ಇದುವರೆಗೆ 24 ಶವಗಳನ್ನು ಪತ್ತೆ ಹೆಚ್ಚಿದ್ದು, 18 ಮಂದಿಯನ್ನು ರಕ್ಷಿಸಿದ್ದಾರೆ.
ಮಣಿಪುರದ ನೊನಿ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿ, ಅಧಿಕಾರಿ ಸೇರಿದಂತೆ 24 ಶವಗಳನ್ನು ಹೊರತೆಗೆಯಲಾಗಿದ್ದು, ಇನ್ನಷ್ಟು ಮಂದಿ ಭೂಕುಸಿತದಲ್ಲಿ ಸಿಲುಕಿರುವ ಸಾಧ್ಯತೆ ಇದೆ.

ಅಸ್ಸಾಂ ಟೆರಿಟೋರಿಯಲ್ ಸೇರಿದಂತೆ 13 ವಿವಿಧ ಭದ್ರತಾ ಪಡೆಗಳು ರಾಜ್ಯದ ವಿವಿಧೆಡೆ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿರುವ ರಕ್ಷಣೆಗೆ ಹರಸಾಹಸಪಡುತ್ತಿವೆ.










