ಮಂಡ್ಯದಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಬಾಲಕಿಯ ಪೋಷಕರು ಮದ್ದೂರು ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗಳನ್ನು ಪುಸಲಾಯಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ, ಮನೆಗೆ ಬಂದು ಕಿರುಕುಳ ನೀಡುತ್ತಿರೋದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನಾನು ಮದ್ದೂರು ತಾಲ್ಲೂಕಿನ ಗ್ರಾಮವೊಂದರ ವಾಸವಾಗಿದ್ದು (ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿ ಮತ್ತವರ ಕುಟುಂಬದ ಯಾವುದೇ ಮಾಹಿತಿ ಹಾಕುವಂತಿಲ್ಲ ಹಾಗಾಗಿ ಈ ರೀತಿ ಬಳಸಲಾಗಿದೆ), ನನಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಪುತ್ರ ಹಾಗೂ ಮತ್ತೋರ್ವ ಪುತ್ರಿಯಾಗಿದ್ದಾರೆ. ಮಗಳು ದ್ವಿತೀಯ ಪಿಯುಸಿ ಓದುತ್ತಿದ್ದು, ಯುವ ದಸರಾಗೆ ಹೋಗಿದ್ದಂತ ಸಂದರ್ಭದಲ್ಲಿ ಪುನೀತ್ ಎಂಬ ಯುವಕ ಪರಿಚಯವಾಗಿ ನನ್ನ ಮಗಳನ್ನು ಲವ್ ಮಾಡುತ್ತೇನೆ, ನೀನಿಲ್ಲದೇ ಬದುಕೋದಿಲ್ಲ ಎಂಬುದಾಗಿ ಪದೇ ಪದೇ ಆಕೆಯನ್ನು ಪೀಡಿಸಿರುತ್ತಾನೆ.
ದಿನಾಂಕ 04-11-2023ರಂದು ಸುಮಾರು 11 ಗಂಟೆಗೆ ನನ್ನ ಮಗಳನ್ನು ಕೆ.ಎಂ ದೊಡ್ಡಿಯಿಂದ ಮದ್ದೂರಿಗೆ ಬಸ್ಸಿನಲ್ಲಿ ಕರೆದುಕೊಂಡು ಬಂದು, ಮದ್ದೂರು ಬಸ್ ಸ್ಟಾಂಡ್ ಬೇಕರಿಯಲ್ಲಿ ಮ್ಯಾಂಗೋ ಜ್ಯೂಸ್ ಕೊಡಿಸಿದ್ದು, ಆನಂತ್ರ ಆಕೆಯನ್ನು ಶಿವಪುರದಲ್ಲಿರುವ ನಿಖಿತ ಲಾಡ್ಜ್ ಗೆ ಕರೆದುಕೊಂಡು ಹೋಗಿ, ನಂತ್ರ ಏಕಾಏಕಿ ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುತ್ತಾನೆ. ಪುನೀತ್ ಅಷ್ಟೇ ಅಲ್ಲದೇ ಆತನ ಸ್ನೇಹಿತ ಮಂಜುನಾಥ ಎಂಬಾತ, ನಂತ್ರ ಸಿದ್ಧಾರ್ಥ ಲೈಂಗಿಕ ದೌರ್ಜನ್ಯ ನಡೆಸಿರುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
ಪುನೀತ್, ಮಂಜುನಾಥ ಹಾಗೂ ಸಿದ್ಧಾರ್ಥ ಸಾಮೂಹಿಕ ಅತ್ಯಾಚಾರದ ಬಳಿಕ, ಈ ದೃಶ್ಯವನ್ನು ವೀಡಿಯೋದಲ್ಲಿ ಚಿತ್ರೀಕರಿಸಿಕೊಂಡು ಯಾರಿಗಾದ್ರೂ ಹೇಳಿದರೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವನ್ನು ಹರಿ ಬಿಡೋದಾಗಿ ಬೆದರಿಕೆ ಹಾಕಿರುತ್ತಾರೆ. ಹೀಗಾಗಿ ನನ್ನ ಮಗಳು ಯಾರಿಗೂ ಈ ವಿಷಯವನ್ನು ಹೇಳಿರೋದಿಲ್ಲ ಎಂದಿದ್ದಾರೆ.

ಇದಷ್ಟೇ ಅಲ್ಲದೇ ನನ್ನ ಮಗಳ ಮೊಬೈಲ್ ಗೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ ದೃಶ್ಯಾವಳಿಯ ವೀಡಿಯೋ ಕಳುಹಿಸಿ, ನೀನು ಕರೆದಾಗಲೆಲ್ಲ ಬರಬೇಕು. ಇಲ್ಲವಾದಲ್ಲೀ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚೋದಾಗಿ ಬೆದರಿಕೆ ಒಡ್ಡಿರುತ್ತಾರೆ. ಜೊತೆಗೆ ನೀನು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಪೋಷಕರ ದೂರನ್ನು ಆಧರಿಸಿ, ಮದ್ಧೂರು ಠಾಣೆಯ ಪೊಲೀಸರು ಕಲಂ 114, 323, 324, 363, 366, 367ಡಿ, 504, 506ರೆ/ವಿ 34 ಐಪಿಸಿ & ಕಲಂ.4, 5(ಜಿ), 6, 9(ಜಿ), 10, 14, 15, 17 ಪೋಕ್ಸೋ ಆಕ್ಟ್ & ಕಲಂ 66(ಇ), 67(ಬಿ), ಐಟಿ ಕಾಯ್ದೆ & ಕಲಂ.3(1)(ಆರ್), 3(1)(ಎಸ್), 3(1)(ಡಬ್ಲೂ)(i)(ii), 3(2) (ವಿಎ), ಎಸ್ಸಿ, ಎಸ್ಟಿ ಪ್ರಿವೇನ್ಷನ್ ಆಫ್ ಅಟ್ರಾಸಿಟಿ ಅಮೆಡ್ಮೆಂಟ್ ಆಕ್ಟ್ 2015 ರೀತ್ಯ ಪ್ರಕರಣ ದಾಖಲು ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.






