ಆನ್ಲೈನ್ app ಗಳಲ್ಲಿ ಸುಲಭಕ್ಕೆ ಸಾಲ ಸಿಗುತ್ತೆ ಅಂತ ಹೆಚ್ಚಿನ ಬಡ್ಡಿಗೆ ಸಾಲ ತಗೊಂಡು ತೀರಿಸಲಾಗದೆ ಪ್ರಾಣ ಬಿಡುವ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ, ಈ ಪ್ರಕರಣಗಳಿಗೆ ಕಡಿವಾಣ ಮಾತ್ರ ಬೀಳುತ್ತಿಲ್ಲ.
ಅವಶ್ಯಕತೆಗೆ ತಕ್ಷಣಕ್ಕೆ ಸಾಲ ಸಿಗುತ್ತದೆ ಅಂತ ಲೋನ್ ಆ್ಯಪ್‌ಗಳ ಮೊರೆ ಹೋಗುವ ಮುನ್ನ ದಯವಿಟ್ಟು ಎಚ್ಚರ ವಹಿಸಿ. ಹೀಗೆ ಆನ್ಲೈನ್ ಲೋನ್ ಆ್ಯಪ್ ಜಾಲಕ್ಕೆ ಸಿಕ್ಕಿಬಿದ್ದು ಬೆಂಗಳೂರಿನ ಖಾಸಗಿ ಮಾಧ್ಯಮದ ಕ್ಯಾಮರಾಮನ್ 32 ವರ್ಷದ ಕಿರಣ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿರಣ್ ಯಾವುದೋ ಆ್ಯಪ್‌ವೊಂದರಿಂದ ಸುಮಾರು 2 ಲಕ್ಷ ಸಾಲ ತೆಗೆದುಕೊಂಡಿದ್ದರು. ಆದರೆ ಹಣ ವಾಪಸ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಲ ಮರುಪಾವತಿ ಮಾಡದಿದ್ದರೆ ನಿಮ್ಮ ನಗ್ನ ಫೋಟೋಗಳನ್ನು ವೈರಲ್ ಮಾಡುವುದಾಗಿ app ನವರು ಬೆದರಿಕೆ ಹಾಕಿದ್ದರು. ಹೀಗಾಗಿ ಕಿರುಕುಳ ತಾಳರಾರದೆ ಕಿರಣ್ ಸೂಸೈಡ್ ಮಾಡಿಕೊಂಡಿದ್ದಾರೆ.