ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ವಾರಣಾಸಿಯ ಕ್ಷೇತ್ರಕ್ಕೆ (Varanasi) ಭೇಟಿ ನೀಡಿದ ಸಂದರ್ಭದಲ್ಲಿ, ಹಿಂದೂ ಯುವ ವಾಹಿನಿ ಕಾರ್ಯಕರ್ತರಿಂದ (Hindu Yuva Vahini) ಪ್ರತಿಭಟನೆ ಎದುರಿಸಿದರು. ಬಲಪಂಥೀಯ ಸಂಘಟನೆಯ (Right Wing) ಸದಸ್ಯರು ಕಪ್ಪು ಬಾವುಟಗಳನ್ನು ಪ್ರದರ್ಶಿಸುವ ಮೂಲಕ ಬ್ಯಾನರ್ಜಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಸಮಾಜವಾದಿ ಪಕ್ಷದ (Samajawadi Party) ಅಭ್ಯರ್ಥಿ ಪರ ಪ್ರಚಾರ ಮಾಡಲು ಬುಧವಾರ ಸಂಜೆ ನಗರಕ್ಕೆ ಆಗಮಿಸಿದ ಬ್ಯಾನರ್ಜಿ, ‘ಗಂಗಾ ಆರತಿ’ಯಲ್ಲಿ (Ganga Arathi) ಪಾಲ್ಗೊಳ್ಳಲು ದಶಾಶ್ವಮೇಧ ಘಾಟ್‌ಗೆ ತೆರಳುತ್ತಿದ್ದಾಗ ಹಿಂದೂ ವಾಹಿನಿಯ ಕಾರ್ಯಕರ್ತರು ಚೆಟ್‌ಗಂಜ್ ಕ್ರಾಸಿಂಗ್‌ನಲ್ಲಿ ಅವರ ಬೆಂಗಾವಲು ಪಡೆಯ ಮುಂದೆ ಜಮಾಯಿಸಿದರು.
ಪ್ರತಿಭಟನಾಕಾರರು ಬ್ಯಾನರ್ಜಿ ವಿರುದ್ಧ ಘೋಷಣೆ ಕೂಗಿ, ಕಪ್ಪು ಬಾವುಟವನ್ನು ಪ್ರದರ್ಶಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರು. ಬ್ಯಾನರ್ಜಿ ತಮ್ಮ ವಾಹನದಿಂದ ಕೆಳಗಿಳಿದು ರಸ್ತೆಯಲ್ಲೇ ಕೆಲಕಾಲ ನಿಂತರು.
ಬೆಂಗಾವಲು ಪಡೆ ಮುಂದೆ ಸಾಗುತ್ತಿದ್ದಂತೆ, ಗದೌಲಿಯಾ ಪ್ರದೇಶದಲ್ಲಿ ಬಿಜೆಪಿ (BJP) ಬೆಂಬಲಿಗರು ಬ್ಯಾನರ್ಜಿ ವಿರುದ್ಧ ಕಪ್ಪು ಬಾವುಟಗಳನ್ನು ತೋರಿಸಿ “ಮಮತಾ ಬ್ಯಾನರ್ಜಿ ವಾಪಾಸ್ ಜಾವೋ (ಹಿಂತಿರುಗಿ)” ಮತ್ತು “ಜೈ ಶ್ರೀ ರಾಮ್” (Jai Shree Ram) ಎಂಬ ಘೋಷಣೆಗಳನ್ನು ಕೂಗುವ ಮೂಲಕ ಬ್ಯಾನರ್ಜಿ ಅವರಿಗೆ ತಡೆಹಾಕಿದರು. ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಕಪ್ಪು ಬಾವುಟ ಹಿಡಿದ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದರು.
ಹಿಂದೂ ಯುವ ವಾಹಿನಿಯನ್ನು ಬಿಜೆಪಿ ನಾಯಕ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (cm yogi adityanath) ಅವರು ಸುಮಾರು ಎರಡು ದಶಕಗಳ ಹಿಂದೆ ಸ್ಥಾಪಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಮೋದಿಯ ಕಟು ಟೀಕಾಕಾರರಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷರು, ವಾರಣಾಸಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಪರವಾಗಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.